Ramalinga Reddy: ಟ್ಯಾಕ್ಸಿ, ಆಟೋ ಪ್ರಯಾಣ ದರ ಏರಿಕೆಯ ಸುಳಿವು ಕೊಟ್ಟ ರೆಡ್ಡಿ

ರಾಮನಗರ : ಸರ್ಕಾರಿ ಕೆಲಸಗಳು ನಡೀಬೇಕು, ನೌಕರರಿಗೆ ವೇತನ ಕೊಡಬೇಕೆಂದರೆ ತೆರಿಗೆ ಅನಿವಾರ್ಯ ಎಂದು ಹೇಳುವ ಮೂಲಕ ತೈಲ ಬೆಲೆ ಹೆಚ್ಚಳ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಚನ್ನಪಟ್ಟಣದಲ್ಲಿ ಮಾತನಾಡಿ, ತೈಲ ಬೆಲೆ ಎರಿಕೆಯಾದ ಬೆನ್ನಲ್ಲೇ ಟ್ಯಾಕ್ಸಿ, ಆಟೋ ಪ್ರಯಾಣಿಕರ ದರ ಏರಿಕೆಗೂ ಚಾಲಕರ ಸಂಘಟನೆಗಳು ಮನವಿ ಮಾಡುತ್ತಿದ್ದು, ಅವರು ಹೇಳಿದಂತೆ ದರ ಏರಿಕೆ ಮಾಡಲಾಗದು. ಈ ಬಗ್ಗೆ ಸೂಕ್ತ ನಿರ್ಣಯ ಕೈಗಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಕೇಂದ್ರ ಸರ್ಕಾರದಂತೆ ತೈಲ, ಅಡುಗೆ ಅನಿಲ ಸಿಲಿಂಡರ್ ಬೆಲೆ ನಮ್ಮ ರಾಜ್ಯ ಸರ್ಕಾರ ಹೆಚ್ಚಳ ಮಾಡಿಲ್ಲ. ಅವರು 400 ರೂಪಾಯಿ ಇದ್ದಂತಹ ಗ್ಯಾಸ್ ನ ಬೆಲೆಯನ್ನು ಒಂದು ಸಾವಿರ ರೂಪಾಯಿಗೆ ಏರಿಕೆ ಮಾಡಿದ್ದಾರೆ ಗೊತ್ತಾ ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *