ರಾಮನಗರ : ‘ಸರ್ಕಾರಿ ಕೆಲಸ ದೇವರ ಕೆಲಸವೆಂದು ಕರೆಯುತ್ತೇವೆ. ಆದರೆ ಸೇವೆ ಮಾಡುವ ಅಧಿಕಾರಿಗಳನ್ನು ಹೀಗೆ ಗುಲಾಮರು ಅನ್ನೋದು ಎಷ್ಟು ಸರಿ’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
HDK ಇತ್ತೀಚೆಗೆ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದ ವೇಳೆ, ‘ಸರ್ಕಾರ ಅಧಿಕಾರಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡಿದೆ’ ಎಂದಿದ್ದರು. ಈ ಆರೋಪಕ್ಕೆ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ. ಅಲ್ಲದೆ ಗುಲಾಮರು ಎಂದಿದ್ದವರ ಪರವಾಗಿ ನಾನು ಕ್ಷಮೆಯಾಚಿಸುವೆ ಎಂದು ಚನ್ನಪಟ್ಟಣದ ಬೇವೂರಿನಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಚನ್ನಪಟ್ಟಣದ ಉಪ ಚುನಾವಣೆ ಬಗ್ಗೆ ಉಲ್ಲೇಖಿಸಿದ ಡಿಕೆಶಿ, ಇಲ್ಲಿಂದ ಗೆದ್ದವರು ಸಮಸ್ಯೆ ಬಗೆಹರಿಸುತ್ತಾರೆಂದು ಅಂದುಕೊಂಡಿದ್ದೆ. ಆದರೆ ಇಲ್ಲಿ ಗೆದ್ದವರು ಜನರ ಸಮಸ್ಯೆ ಕೇಳಲೇ ಇಲ್ಲ. ಅವರು ಸಮಸ್ಯೆ ಕೇಳಲ್ಲ. ಹೀಗಾಗಿ ತಾವು ಜನರ ಕಷ್ಟ ಕೇಳಲು ಬಂದಿರುವುದಾಗಿ ತಿಳಿಸಿದ್ದಾರೆ.