ಶಿವಮೊಗ್ಗ: ಕರ್ನಾಟಕದಲ್ಲಿ ಈಗಾಗಲೇ ಡೆಂಗ್ಯೂ ಜ್ವರದ ಹಾವಳಿ ಮಿತಿ ಮೀರಿದ್ದು, ಏಳೆಂಟು ಜನ ಕೊನೆಯುಸಿರೆಳೆದಿದ್ದಾರೆ. ಈ ನಡುವೆ ಝಿಕಾ ವೈರಸ್ (Zika Virus) ಕೂಡ ಅಬ್ಬರಿಸಲು ಆರಂಭಿಸಿದೆ.
ಹೌದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧರೊಬ್ಬರು ಝಿಕಾ ವೈರಸ್ (Zika Virus)ಗೆ ಬಲಿಯಾಗಿದ್ದಾರೆ. ಈ ಕುರಿತು ಟಿಹೆಚ್ಒ ನಟರಾಜ್ ಮಾಹಿತಿ ನೀಡಿದ್ದು, ವೃದ್ಧ ಕೇವಲ ಝಿಕಾ ವೈರಸ್ (Zika Virus)ನಿಂದಲೇ ಸಾವನ್ನಪ್ಪಿಲ್ಲ. ಬದಲಾಗಿ ಅವರು ಬಹು ಅಂಗಾಂಗ ವೈಕಲ್ಯದಿಂದಲೂ ಬಳಲುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಕಣ್ಣು ಕೆಂಪಾಗುವಿಕೆ, ವಿಪರೀತ ತಲೆನೋವು, ಜ್ವರ, ಕೀಲು ನೋವು & ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಝಿಕಾ ವೈರಸ್ ನ ಪ್ರಮುಖ ಲಕ್ಷಣಗಳಾಗಿವೆ.
ಈ ರೋಗ ಹತ್ತಿರ ಸುಳಿಯದಂತೆ ನೋಡಿಕೊಳ್ಳಲು..
ನೀರು ಶೇಖರಣಾ ಪರಿಕರಗಳನ್ನು ಸದಾ ಮುಚ್ಚಿರಿ & ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಿ.
ನಿವಾಸದ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಿ.
ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ.
ಸ್ವಯಂ ರಕ್ಷಣಾ ವಿಧಾನ ಅನುಸರಿಸಿ.
ಮಕ್ಕಳು, ವಯೋವೃದ್ಧರು ಮಲಗುವಾಗ ಸೊಳ್ಳೆ ಪರದೆ & ಸೊಳ್ಳೆ ನಿರೋಧಕ ಬಳಸಿ.