ಕರ್ನಾಟಕ ಏಕೀಕರಣ..

>ಭಾರತ-ಪಾಕ್ ಇಬ್ಭಾಗ-ಭಾರತ ಸ್ವಾತಂತ್ರ್ಯಕಾಯಿದೆ-1947

>ಮೊದಲ ಗ್ರಹ ಮಂತ್ರಿ-ಸರ್ಧಾರ್ ವಲ್ಲಭ್ ಭಾಯ್ ಪಟೇಲ್.

>ಭಾರತ ಒಕ್ಕೂಟ ಸೇರಲು ನಿರಾಕಾರ-ಜುನಾಗಢ, ಕಾಶ್ಮೀರ್ & ಹೈದರಾಬಾದ್.

>ಪಾಕ್ ಒಕ್ಕೂಟ ಸೇರಲು ಯತ್ನಿಸಿದ್ದವನು-ಜುನಾಗಢದ ನವಾಬ.

>ಕಾಶ್ಮೀರ ವಿಲೀನಕ್ಕೆ ಒಪ್ಪಿದವರು-ನ್ಯಾಷನಲ್ ಕಾನ್ಫೆರೆನ್ಸ್ ನಾಯಕ ಶೇಕ್ ಅಬ್ದುಲ್ಲಾ.

>ಆಪರೇಷನ್ ಪೋಲೊ ನಡೆಸಿ ಹೈದರಾಬಾದ್ ವಶ.

>ಕರ್ನಾಟಕ ಏಕೀಕರಣ ಸಮಿತಿ(ಕರ್ನಾಟಕ ಸಭಾ)ಯ ಮೊದಲ ಅಧ್ಯಕ್ಷರು-ಸಿದ್ಧಪ್ಪ ಕಂಬ್ಳಿ.

>ಕರ್ನಾಟಕ ಏಕೀಕರಣಕ್ಕೆ ಶಿಫಾರಸು ಮಾಡಿದ್ದ ಸಮಿತಿ-1928ರ ನೆಹರೂ ಸಮಿತಿ.

>ಧಾರ್ ಸಮಿತಿ(ಭಾಷಾವಾರು ರಾಜ್ಯಗಳ ರಚನೆ ಬೇಡಿಕೆ ತಿರಸ್ಕರಿಸಿತು.)-1949ರ ಜೆವಿಪಿ ಸಮಿತಿ(ನೆಹರೂ, ಪಟೇಲ್ & ಪಟ್ಟಾಭಿ ಸೀತಾರಾಮಯ್ಯ)- ಆಯೋಗ(ಫಣಿಕ್ಕರ್ & ಕುಂಜ್ರು ಸದಸ್ಯರಾಗಿದ್ದರು.)

>ಕರ್ನಾಟಕ ರಚನೆ ಬೇಡಿಕೆಗೆ ಆಗ್ರಹಿಸಿ ಬಾಂಬೆ ಶಾಸನ ಸಭೆಗೆ ರಾಜೀನಾಮೆ ನೀಡಿದವರು-ಅಂದಾನಪ್ಪ ದೊಡ್ಡಮೇಟಿ.

>ಕರ್ನಾಟಕ ಗೋದಾವರಿವರೆಗೆ ಹಬ್ಬಿತ್ತು ಎಂದು ವಿವರಿಸಿರುವ ಕೃತಿ-ಕವಿರಾಜಮಾರ್ಗ.

>ಕರ್ನಾಟಕ ಏಕೀಕರಣಕ್ಕೆ ಮೊದಲ ಹೆಜ್ಜೆ ಇಟ್ಟವರು-ಮುಂಬೈ ಕರ್ನಾಟಕದ ಜನ.

>1890ರಲ್ಲಿ ಆರಂಭವಾದ ಕರ್ನಾಟಕ ವಿದ್ಯಾ ವರ್ಧಕ ಸಂಘದ ಮೊದಲ ಅಧ್ಯಕ್ಷರು-ರಾ.ಹ.ದೇಶಪಾಂಡೆ.

>ಮುಂಬೈ ಕರ್ನಾಟದಲ್ಲಿ ಕನ್ನಡ ಶಾಲೆಗಳನ್ನು ತೆರೆಯಲು ಶ್ರಮಿಸಿದವರು-ಡೆಪ್ಯುಟಿ ಚೆನ್ನಬಸಪ್ಪ(ಕನ್ನಡದ ಹುಲಿ).

>ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದ ವರ್ಷ-1915.

>ಕರ್ನಾಟಕ ಏಕೀಕರಣ ಸಭಾ(ಧಾರವಾಡ)-1916.

>ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು-ಹುಯಿಲಗೋಳ ನಾರಾಯಣ ರಾವ್.

>ಬೆಳಗಾವಿ ಕಾಂಗ್ರೆಸ್ ಅಧಿವೇಶನ-1924. ಅಧ್ಯಕ್ಷರು-ಮಹಾತ್ಮ ಗಾಂಧೀಜಿ.

>”ಛೇ ಕರ್ನಾಟಕವೆಲ್ಲಿದೆ? ನಾಲ್ಕಾರು ಕಡೆ ಹರಿದು ಹಂಚಿ ಹೋದ ಕರ್ನಾಟಕವನ್ನು ಹೊಲಿದು ಅಖಂಡವಾಗಿ ಮಾಡುವವರಾರು?, ಅಷ್ಟೊಂದು ಅಭಿಮಾನ ಉಂಟೇನು?”-ಆಲೂರು ವೆಂಕಟರಾಯರು.

>’ಕರ್ನಾಟಕ ಗತವೈಭವ’ದ ಕತೃ-ಆಲೂರು ವೆಂಕಟರಾಯರು(ಕರ್ನಾಟಕ ಕುಲಪುರೋಹಿತ)

>’ಬೇಡಲು ಕನ್ನಡ ದಾಸಯ್ಯ ಬಂದಿಹ, ನೀಡಿರಮ್ಮ ತಡ ಮಾಡದೆ’ & ರಕ್ಷಿಸು ಕರ್ನಾಟಕ ದೇವಿ-ಶಾಂತಕವಿ.

>’ನೀ ಮೆಟ್ಟುವ ನೆಲ ಅದೇ ಕರ್ನಾಟಕ’-ಕುವೆಂಪು.

>ಏರಿಸು ಹಾರಿಸು ಕನ್ನಡದ ಬಾವುಟ-ಬಿ.ಎಂ.ಶ್ರೀ

>ತಾಯೆ ಬಾರೆ ಮೊಗವ ತೊರೆ ಕನ್ನಡ ಮಾತೆಯೇ-ಮಂಗೇಶ್ ಪೈ

>ಕಾಸರಗೋಡನ್ನು ಕರ್ನಾಟಕಕ್ಕೇ ಸೇರಿಸಬೇಕೆಂದು ಹೋರಾಡಿದವರು-ಕೈಯಾರಕಿಂಞಣ್ಣ ರೈ

>ಸ್ವಾತಂತ್ರ್ಯ ವೇಳೆ ನಮ್ಮ ದೇಶದಲ್ಲಿದ್ದ ಅರಸೊತ್ತಿಗೆ ರಾಜ್ಯಗಳ ಸಂಖ್ಯೆ-562.

>ಕರ್ನಾಟಕದ 5 ಘಟಕಗಳು-ಮುಂಬೈ,  ಮದ್ರಾಸ್, ಮೈಸೂರು, ಹೈದರಾಬಾದ್ & ಕೊಡಗು.

>ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್(1952)-ರಾಜಕೀಯ ಪಕ್ಷ

>ದೇಶದ ಮೊದಲ ರಾಜ್ಯ-ಆಂಧ್ರ ಪ್ರದೇಶ.

>1952ರಲ್ಲಿ ಆಂಧ್ರ ರಚನೆ ವೇಳೆ ಬಳ್ಳಾರಿಯ 7 ತಾಲೂಕುಗಳನ್ನು ಮೈಸೂರು ಪ್ರಾಂತ್ಯಕ್ಕೆ ಸೇರಿಸಲಾಯಿತು.

>ದಕ್ಷಿಣ ಕನ್ನಡ ಮತ್ತು ಕೊಳ್ಳೇಗಾಲ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದವು.

>1956ರ ನ.1ರಲ್ಲಿ ಮೈಸೂರಿನಲ್ಲಿ 19 ಜಿಲ್ಲೆಗಳಿದ್ದವು.

>ರಾಜ್ಯ ಪುನರ್ ವಿಂಗಡಣಾ ಆಯೋಗ

>ಅಧ್ಯಕ್ಷರು-ಎಸ್.ಫಜಲ್ ಅಲಿ.

>ಸದಸ್ಯರು-ಹೆಚ್.ಎನ್.ಕುಂಜ್ರು, ಕೆ.ಎಂ.ಫಣಿಕ್ಕರ್.

>ವರದಿ ಸಲ್ಲಿಕೆ-1955

>ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದ ದಿನ-1956, ನ.1.

>ವಿಶಾಲ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ-ಎಸ್.ನಿಜಲಿಂಗಪ್ಪ.

>1973ರ ನ.1ರಂದು ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದವರು-ದೇವರಾಜ ಅರಸ್.

>ಕನ್ನಡಿಗರೇ ಹೆಚ್ಚಿರುವ ಬೇರೆ ರಾಜ್ಯಗಳ ಪ್ರದೇಶಗಳು-ಕೇರಳದ ಕಾಸರಗೋಡು; ಆಂಧ್ರದ ಆಲೂರು, ಆದವಾನಿ, ರಾಯದುರ್ಗಾ & ಮಡಕಶಿರಾ; ತಮಿಳುನಾಡಿನ ತಾಳವಾಡಿ & ಹೊಸೂರು; ಮಹಾರಾಷ್ಟ್ರದ ಚಂದಗಢ, ಸೊಲ್ಲಾಪುರ, ಜಟ್ಟ & ಅಕ್ಕಲಕೋಟೆ.

>ಕರ್ನಾಟಕ ಗಡಿ ಸಮಸ್ಯೆ ಸಂಬಂಧ ಕೇಂದ್ರ ಸರ್ಕಾರ 1965ರಲ್ಲಿ ರಚಿಸಿದ ಏಕ ಸದಸ್ಯ ಆಯೋಗ-ಮಹಾಜನ್.

>ಆಯೋಗದ ವರದಿ-ಅಕ್ಕಲಕೋಟೆ, ಜತ್ತ, ಕಾಸರಗೋಡು ಮೈಸೂರಿಗೆ ಸೇರಿಸಬೇಕು & ನಿಪ್ಪಾಣಿ, ಖಾನಾಪೂರ, ಹಲ್ಯಾಳ ಮಹಾರಾಷ್ಟ್ರಕ್ಕೆ ಸೇರಿಸಬೇಕು.

Leave a Reply

Your email address will not be published. Required fields are marked *