Zameer ahmad: ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಜಮೀರ್ ಅಹ್ಮದ್

ಬೀದರ್: ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಾಗರ್ ಖಂಡ್ರೆ ಅವರು ಮುಸ್ಲಿಮರ ಮತದಿಂದಲೇ ಗೆದ್ದಿದ್ದಾರೆ. ಹಾಗಾಗಿ ಮುಸ್ಲಿಮರ ಕೆಲಸಗಳನ್ನು ಯಾವುದೇ ಮುಲಾಜಿಲ್ಲದೆ ಮಾಡಿಕೊಡಬೇಕೆಂದು ಸಚಿವ ಜಮೀರ್ ಅಹ್ಮದ್ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ವಕ್ಫ್ ಅದಾಲತ್ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ಮಾತನಾಡಿ, ನಾವು ಬಹಳ ಹಿಂದಿನಿಂದಲೂ ನಿಗದಿತ ಖಬರ್ ಸ್ತಾನದಲ್ಲೇ ಸಮುದಾಯದವರ ಅಂತ್ಯಕ್ರಿಯೆ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಆ ಸ್ಥಳವು ಅರಣ್ಯ ಇಲಾಖೆಗೆ ಸೇರಿದ್ದಾಗಿದೆ. ಹಾಗಾಗಿ ಇಲಾಖೆಯವರು ಆ ಜಾಗವನ್ನು ಸಂಮುದಾಯಕ್ಕೆ ಬಿಟ್ಟುಕೊಡಲು ತಯಾರಿಲ್ಲವೆಂದು ಮನದಟ್ಟು ಮಾಡಿದರು.

ಈ ವೇಳೆ ಪ್ರತಿಕ್ರಿಯಿಸಿದ ಸಚಿವರು, ಮೇಲಿನಂತೆ ಗುಡುಗಿದ್ದು, ಸಚಿವ ಈಶ್ವರ್ ಖಂಡ್ರೆ ಜತೆ ಮಾತನಾಡಿ ನಾನೇ ಕೆಲಸ ಮಾಡಿಕೊಡುತ್ತೇನೆ. ಯಾವುದೇ ಕಾರಣಕ್ಕೂ ಹೆದರಬೇಡಿ ಎಂದು ಮನೋಸ್ಥೈರ್ಯ ತುಂಬಿದ್ದಾರೆ.

Leave a Reply

Your email address will not be published. Required fields are marked *