✅ 1. ಹಕ್ಕುಪತ್ರ ಮತ್ತು ಮಾಲೀಕತ್ವ ಪರಿಶೀಲನೆ:
>ಜಮೀನಿನ ಮೂಲ ದಾಖಲೆಗಳನ್ನ(Mother Deed) ಕೇಳಿ.
>ಮಾರಾಟ ಪತ್ರ(Sale Deed), ಹಂಚಿಕೆಯ ಪತ್ರ(Partition Deed), ಉಡುಗೊರೆ ಪತ್ರ (Gift Deed) ಇತ್ಯಾದಿಗಳನ್ನು ಪರಿಶೀಲಿಸಿ.
>ಮಾಲೀಕತ್ವ ಸರಿಯಾದ ಸರಣಿಯಲ್ಲಿ ಇದೆಯೋ, ಇಲ್ಲವೋ ಎಂದು ಖಚಿತಪಡಿಸಿಕೊಳ್ಳಿ.
>ಮಾರಾಟಗಾರರಿಗೆ ಜಮೀನು ಮಾರಾಟ ಮಾಡುವ ಕಾನೂನು ಹಕ್ಕು ಇದೆಯೇ ಎಂದೂ ಪರಿಶೀಲಿಸಿ.
✅ 2. ಖಾತಾ ಪ್ರಮಾಣಪತ್ರ & Extract:
ಕಾನೂನುಬದ್ಧ ಭೂಮಿಗೆ ಇದು ಅಗತ್ಯ:
A-ಖಾತಾ → ಸಂಪೂರ್ಣ ಕಾನೂನುಬದ್ಧವಾಗಿರುತ್ತದೆ.
B-ಖಾತಾ → ಕಟ್ಟಡ ನಿರ್ಮಿಸಲು & ಸಾಲ ಪಡೆಯಲು ತೊಂದರೆ ಆಗಬಹುದು.
>ಈ ಖಾತಾ ಪ್ರಮಾಣಪತ್ರ & Extractಗಳನ್ನು BBMP, ನಗರಸಭೆ, ಗ್ರಾಮ ಪಂಚಾಯತ್ ಕಚೇರಿಯಿಂದ ಪಡೆಯಬಹುದು.
✅ 3. Encumbrance Certificate(EC):
>ಈ ಭೂಮಿ ಕಾನೂನಿನ ತೊಡಕುಗಳು ಹಾಗೂ ಸಾಲಗಳಿಂದ ಮುಕ್ತವಾಗಿದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ.
>ಭೂಮಿಗೆ ಸಂಬಂಧಿಸಿದಂತೆ ಕಳೆದ 13ರಿಂದ 30 ವರ್ಷಗಳ ಮಾಹಿತಿ ನೀಡುವಂತೆ ಕೋರಿ Kaveri Online Servicesನಲ್ಲಿ ಅರ್ಜಿ ಸಲ್ಲಿಸಿ.
>ಈ ಪ್ರಮಾಣಪತ್ರದಲ್ಲಿ ಸರಿಯಾದ transactions ಜೊತೆಗೆ “nil” ಎಂದಿರಬೇಕು.
✅ 4. ಜೋನಿಂಗ್ ಮತ್ತು ಲ್ಯಾಂಡ್ ಕನ್ವರ್ಷನ್ ಪರಿಶೀಲನೆ:
>ಜಮೀನನ್ನು ಕೃಷಿಗಾಗಿ ಮೀಸಲಿಡಲಾಗಿದೆಯೇ ಅಥವಾ ವಾಣಿಜ್ಯ ಉದ್ದೇಶಗಳಿಗೆ ಪರಿವರ್ತಿಸಿ ನಿವಾಸಕ್ಕೆ ಯೋಗ್ಯವೇ ಎಂದು ಪರಿಶೀಲಿಸಿ.
>ವಾಸ ಯೋಗ್ಯ ಜಾಗಗಳು ಜಿಲ್ಲಾಧಿಕಾರಿಗಳು ನೀಡುವ DC Conversion Order ಹೊಂದಿರುವುದು ಅಗತ್ಯ.
>ಬೆಂಗಳೂರಿನಂತಹ ಮಹಾನಗರಗಳಲ್ಲಿ ಮಾಸ್ಟರ್ ಪ್ಲಾನ್ ಪ್ರಕಾರ ಜೋನಿಂಗ್ ನಿಯಮಗಳನ್ನು ಅನುಸರಿಸಿರಬೇಕು.
✅ 5. ಅನುಮೋದಿತ ಲೇಔಟ್ ಪ್ಲ್ಯಾನ್:
>ಭೂಮಿಗೆ BDA, BMRDA, DTCP ಅಥವಾ ಸ್ಥಳೀಯ ಪ್ರಾಧಿಕಾರದಿಂದ ಲೇಔಟ್ ಪ್ಲಾನ್ ಅನುಮೋದನೆ ಸಿಕ್ಕಿರಬೇಕು.
>ಅನುಮೋದನೆ ಇಲ್ಲದ ಲೇಔಟ್‌ಗಳಿಗೆ ಕಟ್ಟಡ ನಿರ್ಮಿಸಲು ಅನುಮತಿ ಇರುವುದಿಲ್ಲ.
✅ 6. RERA ನೋಂದಣಿ (ಪ್ಲಾಟೆಡ್ ಲೇಔಟ್‌ಗಳಿಗೆ)
>ಡೆವಲಪರ್ ಮಾರಾಟ ಮಾಡುತ್ತಿರುವ ಜಾಗದ ಲೇಔಟ್ RERA ಅಡಿಯಲ್ಲಿ ನೋಂದಾವಣೆ ಆಗಿದೆಯೇ ಎಂಬುದನ್ನು ಪರಿಶೀಲಿಸಿ.
✅ 7. RTC / ಪಹಣಿ ದಾಖಲೆ:
>ಭೂಮಿ ಪೋರ್ಟಲ್ ಗೆ ಭೇಟಿ ನೀಡಿ ಪಹಣಿ ದಾಖಲೆಗಳನ್ನು ಪರಿಶೀಲಿಸಿ.
ಪಹಣಿಯಲ್ಲಿ ಇವುಗಳನ್ನು ಪರಿಶೀಲಿಸಿ:
>ಮಾಲೀಕರ ಹೆಸರು,
>ಸರ್ವೆ ನಂ.,
>ಜಮೀನಿನ ಬಳಕೆ ಪ್ರಕಾರ,
>ಸದ್ಯ ಭೂಮಿಯ ಹಕ್ಕಿನ ಸ್ಥಿತಿ.
✅ 8. ಸರ್ವೆ ನಕ್ಷೆ & ಅಳತೆ:
>ಕಂದಾಯ ಇಲಾಖೆ ಕಚೇರಿಗೆ ಭೇಟಿ ನೀಡಿ ನಿಮಗೆ ಬೇಕಾದ ಜಮೀನಿನ ಕುರಿತ Survey map / ಅಥವಾ ಟಿಪ್ಪಣಿ ಕಾಪಿ ಕೇಳಿ.
>ಅನುಮೋದಿತ ಲೈಸೆನ್ಸ್ ಪಡೆದ ಸರ್ವೆಯರ್ ಸಹಾಯದಿಂದ ಜಮೀನಿನ ಗಡಿಗಳು ಸರಿಯಾಗಿವೆಯೇ ಎಂದು ಅಳತೆ ಮಾಡಿಸಿ ಖಚಿತಪಡಿಸಿಕೊಳ್ಳಿ.
✅ 9. ವಿವಾದಗಳ ಪರಿಶೀಲನೆ:
>ತಹಶೀಲ್ದಾರ್ ಅಥವಾ ಗ್ರಾಮ ಲೆಕ್ಕಾಧಿಕಾರಿಯನ್ನು ಭೇಟಿ ಮಾಡಿ, ಈ ಭೂಮಿಗೆ ಸಂಬಂಧಿಸಿದಂತೆ ಕೋರ್ಟ್ ಕೇಸುಗಳು, ಕೌಟುಂಬಿಕ ವ್ಯಾಜ್ಯಗಳು, ಸರ್ಕಾರದ ಸ್ವಾಧೀನ ವಿವಾದಗಳು ಸೇರಿದಂತೆ ಏನಾದರೂ ಸಮಸ್ಯೆಗಳು ಬಾಕಿ ಉಳಿದಿವೆಯೇ ಎಂಬ ಬಗ್ಗೆ ಮಾಹಿತಿ ಪಡೆಯಿರಿ.
✅ 10. ಸ್ಥಳದ ನೇರ ಪರಿಶೀಲನೆ:
>ನಿಮ್ಮ ಭೂಮಿಗೆ ಹಾದಿ, ಚರಂಡಿ, ನೀರು & ವಿದ್ಯುತ್ ಸಂಪರ್ಕ ಸರಿಯಾಗಿ ಲಭ್ಯವಿದೆಯೇ?
>ಈ ವಿಚಾರಗಳಲ್ಲಿ ಯಾವುದೇ ರೀತಿಯ ಅಕ್ರಮ ಅತಿಕ್ರಮಣ ಆಗಿದೆಯೇ?
>ಸುತ್ತಮುತ್ತಲಿನ ಪ್ರದೇಶ ಎಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿದೆ ಎಂಬುದನ್ನು ಪರಿಶೀಲಿಸಿ.
✅ 11. NOC / ಅನುಮತಿ ಪರಿಶೀಲಿಸಿ:
>ಅರಣ್ಯದ ಸುತ್ತಮುತ್ತಲಿನ ಭೂಮಿಯಾಗಿದ್ದರೆ, ಅರಣ್ಯ ಇಲಾಖೆ ಅಥವಾ ಕರ್ನಾಟಕ ರಾಜ್ಯ ಪರಿಸರ ನಿಯಂತ್ರಣಾ ಮಂಡಳಿಅಥವಾ BDAಯಿಂದ NOC ಪ್ರಮಾಣಪತ್ರ ಸಿಕ್ಕಿದೆಯೇ ಎಂದು ಪರಿಶೀಲಿಸಿ.
✅ 12. Builder / Developer ಬಗ್ಗೆ ಪರಿಶೀಲಿಸಿ:
Layout ಗಳಲ್ಲಿ ಸೈಟ್ ಖರೀದಿಸುತ್ತಿದ್ದರೆ:
>ಕಂಪನಿಯ ಹಿನ್ನೆಲೆ,
>RERA ನೋಂದಣಿ ಪರಿಶೀಲಿಸಿ ಹಾಗೂ
>ಈಗಾಗಲೇ ಖರೀದಿಸಿರುವ ಹಳೆಯ ಗ್ರಾಹಕರನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ.
✅ ಖರೀದಿಸಿದ ನಂತರ ಪಡೆಯಬೇಕಾದ ದಾಖಲೆಗಳು:
>ನೋಂದಾಯಿತ ಮಾರಾಟ ಪತ್ರ (Sale Deed)
>ನವೀಕರಿಸಲಾದ ಖಾತಾ ಪಟ್ಟಿ
>ನಿಮ್ಮ ಹೆಸರಿರುವ Encumbrance Certificate (EC)
>Mutation / ಖಾತಾ ಸ್ಥಳಾಂತರ ದಾಖಲೆ
>ನಿಮ್ಮ ಹೆಸರಿನಲ್ಲಿರುವ ತೆರಿಗೆ ರಶೀತಿಗಳು