ವಿಜಯನಗರ ಸಾಮ್ರಾಜ್ಯದ ಬಗ್ಗೆ ಇಷ್ಟು ತಿಳಿಯಲೇಬೇಕು

ವಿಜಯನಗರ ಸಾಮ್ರಾಜ್ಯ:
ಸ್ಥಾಪನೆ: 1336

ಸ್ಥಾಪಕರು-ಹರಿಹರ & ಬುಕ್ಕರಾಯ
ಸಾಮ್ರಾಜ್ಯದ ಆರಂಭಿಕ ಸ್ಥಾಪನೆ & ರಾಜಧಾನಿ-ಆನೆಗೊಂದಿ
ರಾಜಧಾನಿ ಹಂಪಿ

ಸಂಗಮ(ಒಂದನೇ, ಎರಡನೇ ದೇವರಾಯ),
ಸಾಳುವ
ತುಳುವ(ಕೃಷ್ಣದೇವರಾಯ),
ಅರವೀಡು-1646(ಅಳಿಯ ರಾಮರಾಯ & ಮೂರನೇ ಶ್ರೀರಂಗ)

ಕೃಷ್ಣದೇವರಾಯ(ಕನ್ನಡರಾಜ್ಯರಮಾರಮಣ/ಕವಿಪುಂಗವ/ಕರ್ನಾಟಕಾಂಧ್ರಭೋಜ/ಯವನರಾಜ್ಯ ಪ್ರತಿಷ್ಠಾಪನಾಚಾರ್ಯ):

1509ರಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ಸಿಂಹಾಸನವೇರಿದ.
ಇವನ ಪ್ರಧಾನಿ-ತಿಮ್ಮರಸ(ಕೃಷ್ಣದೇವರಾಯನು ಅಪ್ಪಾಜಿ ಎನ್ನುತ್ತಿದ್ದ)
1513ರಲ್ಲಿ ಉಮ್ಮತ್ತೂರಿನ ಗಂಗರಾಜನನ್ನು ಸೋಲಿಸಿ ಶ್ರೀರಂಗಪಟ್ಟಣ, ಶಿವನಸಮುದ್ರ ವಶಪಡಿಸಿಕೊಂಡ.
ಕೃಷ್ಣದೇವರಾಯನು ಕಳಿಂಗ ಯುದ್ಧ(̧1513-1518)ವನ್ನು 5 ಹಂತದಲ್ಲಿ ಮಾಡಿದ.
ಉದಯಗಿರಿ ಕೋಟೆ ಗೆದ್ದ ಬಳಿಕ ತಿರುಮಲಾಂಬ & ಚಿನ್ನಲಾಂಬ ಜತೆ ತಿರುಪತಿಗೆ ತೆರಳಿದ.
ಉದಯಗಿರಿಯಿಂದ ತಂದಿದ್ದ ಬಾಲಕೃಷ್ಣ ಮೂರ್ತಿಯನ್ನು ಹಂಪಿಯಲ್ಲಿ ಪ್ರತಿಷ್ಠಾಪನೆ ಮಾಡಿದ.
ಕೃಷ್ಣದೇವರಾಯನ ಮೂರನೇ ಪತ್ನಿ: ಜಗನ್ಮೋಹಿನಿ

ಕೃಷ್ಣದೇವರಾಯನಿಗೆ ಪೋರ್ಚುಗೀಸರ ಸಹಾಯ ದೊರೆತಿದ್ದು- 1520ರ ರಾಯಚೂರು ಯುದ್ಧದಲ್ಲಿ; ಪರಿಣಾಮ ಸೈನ್ಯಕ್ಕೆ ಪರ್ಷಿಯಾ ಕುದುರೆ ಪೂರೈಸುವ ವ್ಯಾಪಾರದ ಹಕ್ಕನ್ನು ಪೋರ್ಚುಗೀಸರಿಗೆ ನೀಡಿದ.
ಕೃಷ್ಣದೇವರಾಯನು ಸೆರೆಮನೆಯಲ್ಲಿದ್ದ ಬಹಮನಿ ಸುಲ್ತಾನನನ್ನು ಬಿಡಿಸಿ, ಸಿಂಹಾಸನದ ಮೇಲೆ ಕೂರಿಸಿದ. ಇದರಿಂದ ಅವನಿಗೆ ಯವನರಾಜ್ಯ ಪ್ರತಿಷ್ಠಾಪನಾಚಾರ್ಯ ಎಂಬ ಬಿರುದು ಬಂತು.
ಮಗ ತಿರುಮಲನ ಸಾವಿನ ನೋವಿನಿಂದ ಕೃಷ್ಣದೇವರಾಯನು 1529ರಲ್ಲಿ ಕೊನೆಯುಸಿರೆಳೆದ.

ಕೃತಿಗಳು: ಅಮುಕ್ತ ಮಾಲ್ಯದ, ಉಷಾ ಪರಿಣಯಮ್, ಜಾಂಬವತಿ ಕಲ್ಯಾಣ
ವಿವಾಹ ಸುಂಕವನ್ನು ರದ್ದುಪಡಿಸಿದ.
ನಾಗಲಾಪುರ(ಹೊಸಪೇಟೆ) ನಿರ್ಮಿಸಿದ.
ವ್ಯಾಸತೀರ್ಥರನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ ಗೌರವಿಸಿದ.
ಹಂಪಿಯಲ್ಲಿ ಪುರಂದರ ಮಂಟಪ ನಿರ್ಮಿಸಿದ.

ವಿರೂಪಾಕ್ಷ ಸ್ವಾಮಿಯ ಚೈತ್ರೋತ್ಸವ ಸಮಯದಲ್ಲಿ ತಾನೇ ರಚಿಸಿದ ಜಾಂಬವತಿ ಕಲ್ಯಾಣ ನಾಟಕ ಪ್ರದರ್ಶನ ವೇಳೆ ಕೃಷ್ಣದೇವರಾಯನು ಸ್ವತಃ ಕೃಷ್ಣನ ಪಾತ್ರವನ್ನು ನಿಭಾಯಿಸಿದ್ದ.

ತಾಳಿಕೋಟೆ ಕದನ/ರಕ್ಕಸಗಿ-ತಂಗಡಗಿ ಕದನ/ಬನ್ನಿಹಟ್ಟಿ ಕದನ: 1565

ಅಳಿಯ ರಾಮರಾಯ ನೇತೃತ್ವ ವಹಿಸಿದ್ದನು.
ಶಾಹಿ ಮನೆತನದ ಐದೂ ಮನೆತನಗಳೂ ಈ ಯುದ್ಧದಲ್ಲಿ ಪಾಲ್ಗೊಂಡಿದ್ದರು.
ಬಿಜಾಪುರದ ಅಲಿ ಆದಿಲ್ ಷಾ ರಾಯಚೂರು ಕೋಟೆ ಹಿಂದಿರುಗಿಸುವಂತೆ ಬೇಡಿಕೆ ಇಟ್ಟನು. ಇದು ಯುದ್ಧಕ್ಕೆ ತಕ್ಷಣದ ಕಾರಣವಾಗಿತ್ತು.
ಕದನವು ಮಂಗಳವಾರ ನಡೆಯಿತು.
90 ವರ್ಷ ವಯಸ್ಸಿನ ರಾಮರಾಯನನ್ನು ಶಿರಚ್ಛೇದನ ಮಾಡಿ ರಣರಂಗದಲ್ಲಿ ಪ್ರದರ್ಶಿಸಲಾಯಿತು.

ಗಂಗಾದೇವಿ-ಮಧುರಾ ವಿಜಯಮ್(ಸಂಸ್ಕೃತ)

ಕುಮಾರವ್ಯಾಸ: ಕರ್ನಾಟಕ ಕಥಾ ಮಂಜರಿ
ರತ್ನಾ ಕಾರವರ್ಣಿ-ಭರತೇಶ ವೈಭವ
ಚಾಮರಸ-ಪ್ರಭುಲಿಂಗಲೀಲೆ
ಕನಕದಾಸ: ಮೋಹನ ತರಂಗಿಣಿ, ನಳಚರಿತ, ಹರಿಭಕ್ತಸಾರ & ರಾಮಧಾನ್ಯಚರಿತ
ನಿಜಗುಣಶಿವಯೋಗಿ-ವಿವೇಕಚಿಂತಾಮಣಿ
ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ತೆಲುಗಿನ ಅಷ್ಟ ದಿಗ್ಗಜ ಕವಿಗಳಲ್ಲಿದ್ದ ಕನ್ನಡಿಗ-ನಂದಿ ತಿಮ್ಮಣ್ಣ
ಹಿಂದೂ-ಇಸ್ಲಾಮಿಕ್ ಶೈಲಿಯ ಕಟ್ಟಡಕ್ಕೆ ಅತ್ಯುತ್ತಮ ಉದಾಹರಣೆ: ಕಮಲ ಮಹಲ್
ವಿದ್ಯಾಶಂಕರ ದೇವಾಲಯ-ಶೃಂಗೇರಿ
ಶೈವರ ಅಜಂತಾ-ಲೇಪಾಕ್ಷಿ
ಕರ್ನಾಟಕ ಸಂಗೀತದ ಪಿತಾಮಹ: ಪುರಂದರದಾಸರು
ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ನೃತ್ಯ ಗುರು: ಬಂಧಂ ಲಕ್ಷ್ಮೀನಾರಾಯಣ

ಒಂದನೇ ದೇವರಾಯ-ನಿಕೊಲೊ ಕೊಂಟಿ(ಇಟಲಿ)
ಎರಡನೇ ದೇವರಾಯ-ಅಬ್ದುರ್ ರಜಾಕ್(ಪರ್ಷಿಯಾ)
ಕೃಷ್ಣದೇವರಾಯ-ಡೊಮಿಂಗೋ ಪಯಾಸ್(ಪೋರ್ಚುಗೀಸ್)
ಅಚ್ಯುತರಾಯ-ಫರ್ನಾವೋ ನ್ಯೂನಿಜ್(ಪೋರ್ಚುಗಲ್)
ನಿಕಿಟಿನ್(ರಷ್ಯಾ)-ಬಹಮನಿ ಸಾಮ್ರಾಜ್ಯಕ್ಕೆ
ಡುರೆಟ್ ಬಾರ್ಬೊಸಾ(ಪೋರ್ಚುಗೀಸ್)-ವಿಜಯನಗರಕ್ಕೆ
ಸೀಜರ್ ಫೆಡ್ರಿಜ್-ವಿಜಯನಗರಕ್ಕೆ

ಕೊನೆಯ ವಂಶ ಅರವೀಡು ಸಂತತಿಯ ರಾಜಧಾನಿ-ಅರವೀಡು, ನಂತರ ಪೆನುಗೊಂಡಕ್ಕೆ ಸ್ಥಳಾಂತರವಾಯಿತು.

Leave a Reply

Your email address will not be published. Required fields are marked *