Aadhar ಕುರಿತ ಈ Sensitive facts ಗೊತ್ತಿರಲೇಬೇಕು!

1. ಬಹುತೇಕ ಸಂದರ್ಭಗಳಲ್ಲಿ ಬಳಕೆ:
>ಆಧಾರ್ ಎಲ್ಲಾ ಸೇವೆಗಳಿಗೂ ಕಡ್ಡಾಯವಲ್ಲ.
>ಇದು ಸರ್ಕಾರದ ಸಬ್ಸಿಡಿ, ಕಲ್ಯಾಣ ಯೋಜನೆಗಳು ಹಾಗೂ ಕೆಲವು ಬ್ಯಾಂಕ್ ಸಂಬಂಧಿತ ಸೇವೆಗಳಿಗೆ ಮಾತ್ರ ಅಗತ್ಯವಿದೆ.
>ಆಧಾರ್ ಇಲ್ಲವೆಂಬ ನೆಪವೊಡ್ಡಿ ಯಾವುದೇ ವ್ಯಕ್ತಿಗೆ ಸರ್ಕಾರಿ ಸೇವೆಯನ್ನು ನಿರಾಕರಿಸುವಂತಿಲ್ಲ. (ಉದಾ: ಶಾಲಾ ದಾಖಲಾತಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಸೇರಿದಂತೆ ಇತ್ಯಾದಿ)

2. ಇದು ಗುರುತಿನ ಚೀಟಿಯೇ ಹೊರತು ಪೌರತ್ವದ ದಾಖಲೆಯಲ್ಲ:
>ಆಧಾರ್ ಕೇವಲ ಗುರುತಿನ ಪ್ರಮಾಣಪತ್ರವಾಗಿದ್ದು, ನಾಗರಿಕತ್ವ ಅಥವಾ ನಿವಾಸದ ಪುರಾವೆ ಎಂದು ಪರಿಗಣಿಸಲಾಗಲ್ಲ.

3. ಗೌಪ್ಯತೆ ರಕ್ಷಣೆ:
>ಆಧಾರ್ ಮಾಹಿತಿಗೆ ಕಠಿಣ ಗೌಪ್ಯತಾ ನಿಯಮಗಳ ರಕ್ಷಣೆ ಇದೆ. ಹಾಗಾಗಿ ಆಧಾರ್ ಮಾಹಿತಿ ಸಂಗ್ರಹಿಸುವ ಅಥವಾ ಬಳಸುವ ಮುನ್ನ ಸಂಸ್ಥೆಗಳು ಆಧಾರ್ ಹೊಂದಿರುವ ವ್ಯಕ್ತಿಯಿಂದ ಅನುಮತಿ ಪಡೆಯಬೇಕು. ಇದನ್ನು ಅನಧಿಕೃತವಾಗಿ ಬಳಸಿಕೊಳ್ಳುವುದು ಕಾನೂನು ಬಾಹಿರವಾಗಿದ್ದು, ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ.

4. ದೃಢೀಕರಣ ನಿಯಮಗಳು:
>ಆಧಾರ್ ದೃಢೀಕರಣವು OTP, ಬೆರಳಚ್ಚು, ನಯನಮುದ್ರೆ ಮೂಲಕವೇ ನಡೆಯಬೇಕೇ ಹೊರತು ಬೇರೆ ವಿಧಾನಗಳಿಂದ ದೃಢೀಕರಣ ಮಾಡುವುದನ್ನು ನಿರ್ಬಂಧಿಸಲಾಗಿದೆ. ಅಲ್ಲದೆ, ಸರ್ಕಾರದಿಂದ ಪರವಾನಗಿ ಪಡೆದ ಸಂಸ್ಥೆಗಳು ಮಾತ್ರವೇ ಆಧಾರ್ ಪರಿಶ್ಕಕ್ರಿಸುವ ಹಕ್ಕನ್ನು ಹೊಂದಿರುತ್ತವೆ. ನಿಮ್ಮ ಆಧಾರ್ ಕಾರ್ಡ್ ಅನ್ನು ಯಾವಾಗ, ಎಲ್ಲಿ ಮತ್ತು ಏಕೆ ಬಳಸಲಾಗಿದೆ ಎಂಬ ಮಾಹಿತಿಯನ್ನು UIDAI ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದಾಗಿದೆ.

5. ಮಾಸ್ಕ್ಡ್ ಆಧಾರ್ ಬಳಕೆ
>ನಿಮ್ಮ ದತ್ತಾಂಶವನ್ನು ಸಂರಕ್ಷಿಸಿಕೊಳ್ಳಬೇಕೆಂದರೆ ಯಾವುದೇ ಅಗತ್ಯ ಸೇವೆಗಳನ್ನು ಪಡೆಯಲೂ ಕೂಡ ಸಂಪೂರ್ಣ ಆಧಾರ್ ಸಂಖ್ಯೆ ಬದಲು ಮಾಸ್ಕ್ಡ್ ಆಧಾರ್ ನೀಡಿ. ಇದರಲ್ಲಿ ಕೊನೆಯ ನಾಲ್ಕು ಅಂಕಿಗಳು ಮಾತ್ರವೇ ಬೇರೆಯವರಿಗೆ ಕಾಣಲಿದ್ದು, ಇದನ್ನು ನಿರ್ಭೀತಿಯಿಂದ ಕೊಡಬಹುದಾಗಿದೆ.

6. ಬಳಕೆಗೆ ನಿಷಿದ್ಧ:
ನೀವು ಈ ಕೆಳಗಿನ ಕೆಲಸಗಳನ್ನು ಮಾಡಬಾರದು:

  • ಆಧಾರ್ ಸಂಖ್ಯೆಯನ್ನು ಇಂಟರ್ನೆಟ್, ಸಾಮಾಜಿಕ ಜಾಲತಾಣ ಸೇರಿ ಎಲ್ಲೂ ಸಾರ್ವಜನಿಕವಾಗಿ ಹಂಚಿಕೊಳ್ಳಬಾರದು.
  • ಇತರರ ಆಧಾರ್ ಕಾರ್ಡ್ ಅನ್ನು ಬಳಸಕೂಡದು.
  • ಕಾನೂನುಬದ್ಧ ಅನುಮತಿ ಇಲ್ಲದೆ ಆಧಾರ್ ವಿವರಗಳನ್ನು ಸಂಗ್ರಹಿಸುವಂತಿಲ್ಲ.
  • ಆಧಾರ್ ಇಲ್ಲವೆಂದು ಯಾರಿಗೂ ಸೇವೆ ನಿರಾಕರಿಸುವಂತಿಲ್ಲ.

7. ನವೀಕರಣ ನಿಯಮಗಳು:
>ನೀವು UIDAI ಕೇಂದ್ರಗಳ ಮೂಲಕ ಅಥವಾ ಆನ್ ಲೈನ್ ನಲ್ಲಿ ಸರಿಯಾದ ದಾಖಲೆಗಳೊಂದಿಗೆ
ಹೆಸರು, ವಿಳಾಸ, ಫೋಟೋ ಮುಂತಾದ ಆಧಾರ್ ವಿವರಗಳನ್ನು ನವೀಕರಿಸಿಕೊಳ್ಳಬಹುದು. ಇದಕ್ಕಾಗಿ ಅಧಿಕೃತ ನವೀಕರಣ ಕೇಂದ್ರಗಳನ್ನೇ ಬಳಸಬೇಕು.

⚖️ ಉಲ್ಲಂಘನೆಗೆ ಶಿಕ್ಷೆ:
ಆಧಾರ್ ಕಾರ್ಡ್ ಅನ್ನು ದುರ್ಬಳಕೆ ಮಾಡಿಕೊಂಡರೆ ಆಧಾರ್ ಕಾರ್ಡ್ ಅನ್ನು ದುರ್ಬಳಕೆ ಮಾಡಿಕೊಂಡರೆ, ₹1 ಲಕ್ಷವರೆಗೆ ದಂಡ ಹಾಗೂ 3 ವರ್ಷವರೆಗೆ ಜೈಲುಶಿಕ್ಷೆ ವಿಧಿಸಲಾಗುತ್ತದೆ.

Leave a Reply

Your email address will not be published. Required fields are marked *