🚦ಕರ್ನಾಟಕದ Traffic rules ನಿಮಗೆ ಗೊತ್ತಾ?

  • >ದ್ವಿಚಕ್ರ ವಾಹನ ಚಾಲನೆ ಮಾಡುವವರು ಹೆಲ್ಮೆಟ್ ಮತ್ತು ಇತರರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ
  • >ದ್ವಿಚಕ್ರ ವಾಹನದಲ್ಲಿ ಚಾಲಕರಲ್ಲದೆ ಹಿಂಬದಿ ಕುಳಿತವರಿಗೂ ಹೆಲ್ಮೆಟ್ ಧರಿಸುವುದು ಕಡ್ಡಾಯ.
  • >ಕಾರುಗಳಲ್ಲಿ ಮುಂಭಾಗದ ಆಸನದಲ್ಲಿ ಕುಳಿತವರು ಸೀಟು ಬೆಲ್ಟ್ ಹಾಕಿಕೊಳ್ಳುವುದು ಕಡ್ಡಾಯ.

1.ಡ್ರೈವಿಂಗ್ ಲೈಸೆನ್ಸ್:

  • ಯಾವುದೇ ವಾಹನ ಚಲಾಯಿಸಲೂ ಮಾನ್ಯ ಚಾಲನಾ ಪರವಾನಗಿ ಹೊಂದಿರುವುದು ಕಡ್ಡಾಯ.
  • ಕಲಿಕೆಯ ಪರವಾನಗಿ(LL) ಹೊಂದಿರುವವರೊಂದಿಗೆ ಲೈಸೆನ್ಸ್ ಹೊಂದಿರುವ ಚಾಲಕರು ಇರಬೇಕು.

2.ಮದ್ಯಪಾನ ಮಾಡಿ ವಾಹನ ಚಾಲನೆ:

  • ಮದ್ಯ ಸೇವನೆಯ ಮಿತಿ: ≤ 30 ಮಿ.ಗ್ರಾಂ/100 ಮಿ.ಲೀ ರಕ್ತ.
  • ಮಿತಿಯನ್ನು ಮೀರುವವವರಿಗೆ ದಂಡ ಅಥವಾ ಜೈಲುಶಿಕ್ಷೆ ವಿಧಿಸಬಹುದಾಗಿದೆ.

3.ವೇಗ ಮಿತಿಗಳು:

  • ವಿವಿಧ ರೀತಿಯ ರಸ್ತೆ ಮತ್ತು ವಾಹನಗಳ ಆಧಾರದ ಮೇಲೆ ವೇಗ ಮಿತಿ ನಿರ್ಧರಿತವಾಗಿರುತ್ತದೆ.
  • ವೇಗ ಮೀರಿದರೆ ದಂಡ ವಿಧಿಸುವ ಜೊತೆಗೆ ಲೈಸೆನ್ಸ್ ಕೂಡ ರದ್ದಾಗಬಹುದು.

4.ಟ್ರಾಫಿಕ್ ಸಿಗ್ನಲ್ಸ್ ಮತ್ತು ನಿಯಮಗಳು:

  • ರಸ್ತೆಯಲ್ಲಿನ ಎಲ್ಲಾ ಸಿಗ್ನಲ್‌ಗಳು, ಸಂಚಾರ ಫಲಕಗಳು ಮತ್ತು ರಸ್ತೆ ಗುರುತುಗಳು ಚಾಚೂ ತಪ್ಪದೆ ಪಾಲಿಸಬೇಕು.
  • ಕೆಂಪು ದೀಪ ಉರಿಯುವಾಗ ಆಕಸ್ಮಿಕವಾಗಿ ದಾಟಿದರೂ ಶಿಕ್ಷಾರ್ಹ ಅಪರಾಧವಾಗುತ್ತದೆ.

5.ಮೊಬೈಲ್ ಬಳಕೆ:

  • ಚಾಲನೆಯ ಸಮಯದಲ್ಲಿ ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದೆ.
  • ಹ್ಯಾಂಡ್ಸ್‌ಫ್ರೀ ಮೊಬೈಲ್ ಬಳಕೆಗೆ ಅನುಮತಿ ಇದೆಯಾದರೂ ನಿರ್ಬಂಧಕ್ಕೆ ಒಳಪಟ್ಟಿರುತ್ತದೆ.

6.ಪಾರ್ಕಿಂಗ್ ನಿಯಮಗಳು:

  • ನೋ ಪಾರ್ಕಿಂಗ್ ಪ್ರದೇಶಗಳಲ್ಲಿ ಅಥವಾ ಸಂಚಾರಕ್ಕೆ ತೊಂದರೆ ಉಂಟುಮಾಡುವ ರೀತಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡುವಂತಿಲ್ಲ.

7.ಚಾಲಕರು ಹೊಂದಿರಬೇಕಾದ ದಾಖಲೆಗಳು:
✅ RC (ನೋಂದಣಿ ಪ್ರಮಾಣಪತ್ರ)
✅ DL (ಡ್ರೈವಿಂಗ್ ಲೈಸೆನ್ಸ್)
✅ ವಿಮಾ ಪತ್ರ (ಇನ್ಸುರನ್ಸ್)
✅ PUC (ಪಾಲ್ಯೂಷನ್ ಅಂಡರ್ ಕಂಟ್ರೋಲ್ ಪ್ರಮಾಣಪತ್ರ)

8.ಹಾರ್ನ್ ಬಳಕೆ:

  • ಆಸ್ಪತ್ರೆ ಮತ್ತು ಶಾಲಾ ಕಾಲೇಜುಗಳ ಬಳಿ ಅನಗತ್ಯವಾಗಿ ಅಥವಾ ವಿಪರೀತ ಎಂಬಂತೆ ಹಾರ್ನ್ ಮಾಡಿ ತೊಂದರೆ ಕೊಡುವಂತಿಲ್ಲ.

9.ಭಾರ ಹೇರಲು ಮಿತಿ, ಮೂವರ ಪ್ರಯಾಣ ನಿಷಿದ್ಧ:

  • >ದ್ವಿಚಕ್ರ ವಾಹನಗಳಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಸಂಚರಿಸುವಂತಿಲ್ಲ.
  • >ಇತರೆ ವಾಹನಗಳಲ್ಲಿ ಸರ್ಕಾರ ನಿಗದಿಪಡಿಸಿರುವಷ್ಟು ಮಂದಿ ಸಂಚರಿಸಬಹುದು.
  • >ಬೃಹತ್ ವಾಹನಗಳಿಗೆ ಭೌತಿಕ ವಸ್ತುವನ್ನು ತುಂಬಬೇಕಾದರೆ ನಿಗದಿಪಡಿಸಿರುವ ತೂಕದ ಮಿತಿಯನ್ನು ಮೀರುವಂತಿಲ್ಲ.

📱 ಇ-ಚಾಲನ್ ವ್ಯವಸ್ಥೆ:

  • ಕರ್ನಾಟಕದಲ್ಲಿ ಟ್ರಾಫಿಕ್ ಉಲ್ಲಂಘನೆಗಳಿಗೆ ದಂಡ ವಿಧಿಸಲು ಇ-ಚಾಲನ್ ವ್ಯವಸ್ಥೆ ಜಾರಿಯಲ್ಲಿದೆ.
  • ದಂಡವನ್ನು Karnataka One ಪೋರ್ಟಲ್ ಅಥವಾ ಪರಿವಾಹನ್ ವೆಬ್‌ಸೈಟ್ ಮುಖಾಂತರ ಪಾವತಿಸಿ, ಸ್ಟೇಟಸ್ ಅನ್ನು ಆನ್‌ಲೈನ್‌ನಲ್ಲಿಯೇ ಪರಿಶೀಲಿಸಬಹುದು.

🔒 ದಂಡಗಳು (ಇತ್ತೀಚಿನ ತಿದ್ದುಪಡಿ ಪ್ರಕಾರ):

  • ಹೆಲ್ಮೆಟ್ ಧರಿಸದಿದ್ದರೆ: ₹500
  • ಮದ್ಯಪಾನ ಚಾಲನೆ: ₹10,000 ಅಥವಾ ಜೈಲು
  • ಲೈಸೆನ್ಸ್ ಇಲ್ಲದೆ ಚಾಲನೆ: ₹5,000
  • ಕೆಂಪು ದೀಪ ಉಲ್ಲಂಘಿಸಿದರೆ: ₹1,000
  • ವೇಗ ಮಿತಿ ಮೀರಿದರೆ: ₹1,000 ರಿಂದ ₹2,000

Leave a Reply

Your email address will not be published. Required fields are marked *