ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣವನ್ನು ಸುಲಭಗೊಳಿಸಲು ಕೇಂದ್ರ ಸರ್ಕಾರವು ಆ.15ರಂದು ವಾರ್ಷಿಕ ಫಾಸ್ಟ್ ಟ್ಯಾಗ್ ಪಾಸ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಹಿನ್ನೆಲೆಯಲ್ಲಿ ಪಾಸ್ ಪಡೆಯಲು ಯಾರು ಅರ್ಹರು ಎಂಬ ಕೆಲ ಸೂಚನೆಗಳನ್ನು ಇಲ್ಲಿ ನೀಡಲಾಗಿದೆ. ಕೆಳಗಿನ ಅಂಶಗಳನ್ನು ಒಮ್ಮೆ ಪರಿಶೀಲಿಸಿ.
>ವಾಹನವು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುತ್ತಿರರಬಾರದು. ಇದರ ಅರ್ಥ ಖಾಸಗಿ ವಾಹನವಾಗಿರಬೇಕು. ಉದಾಹರಣೆಗೆ ಸ್ವಂತ ಓಡಾಟಕ್ಕೆ ಇಟ್ಟುಕೊಂಡಿರುವ ಕಾರು ಅಥವಾ ಜೀಪ್ ಎಂದು ಭಾವಿಸಿಕೊಳ್ಳಬಹುದು.
>ಯಾರು ವಾರ್ಷಿಕ Fasttag ಪಾಸ್ ಪಡೆಯಲು ಇಚ್ಛಿಸುತ್ತಾರೋ ಅಂಥವರು ತಮ್ಮ ವಾಹನದ ಮುಂದಿನ ಗಾಜಿನಲ್ಲಿ(ವಿಂಡ್ಶೀಲ್ಡ್) ಈಗಾಗಲೇ ಸಕ್ರಿಯವಾಗಿರುವ FASTag ಅನ್ನು ಅಂಟಿಸಿರಬೇಕು.
>ವಾಹನದ FASTag ಮಾನ್ಯವಾದ ವಾಹನ ನೋಂದಣಿ ಸಂಖ್ಯೆ(VRN)ಗೆ ಲಿಂಕ್ ಆಗಿರಬೇಕು.
>ಅದು ಕಪ್ಪುಪಟ್ಟಿ(Black list)ಯಲ್ಲಿರಬಾರದು ಅಥವಾ ಯಾವುದೇ ವಿವಾದದಲ್ಲಿರಬಾರದು.
ವಿಶೇಷ ಸೂಚನೆ: ಮುಂದೆ ಪಡೆಯುವ ವಾರ್ಷಿಕ FastTag ಅನ್ನು ತಾವು ಪಡೆದ ವಾಹನಕ್ಕೇ ಮೀಸಲಾಗಿರಬೇಕು. ಇದನ್ನು ಬೇರೊಂದು ವಾಹನಕ್ಕೆ ವರ್ಗಾಯಿಸುವಂತಿಲ್ಲ.