UAN(ಯುನಿವರ್ಸಲ್ ಅಕೌಂಟ್ ನಂಬರ್) Number ಎಂದರೆ, ನೌಕರರ ಭವಿಷ್ಯ ನಿಧಿ ಸಂಸ್ಥೆಯು ಪ್ರತಿಯೊಬ್ಬ ನೌಕರರಿಗೆ ನೀಡುವ 12 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ. ಈ ಸಂಖ್ಯೆಯು ನೌಕರರು ಎಷ್ಟೇ ಉದ್ಯೋಗಗಳನ್ನು ಬದಲಿಸಿದರೂ ಅವರ ಎಲ್ಲಾ PF ಖಾತೆಗಳನ್ನು ಒಂದೇ ಸೂರಿನಡಿಗೆ ಜೋಡಿಸುತ್ತದೆ.
✅ UAN Numberನ ಪ್ರಮುಖ ಲಕ್ಷಣಗಳು:
- ಶಾಶ್ವತ ಸಂಖ್ಯೆ: UAN ಒಂದು ಬಾರಿ ಸೃಷ್ಟಿಯಾದರೆ ನಿಮ್ಮ ಸಂಪೂರ್ಣ ಉದ್ಯೋಗಾವಧಿಯಲ್ಲಿ ಇದು ಚಾಲನೆಯಲ್ಲಿರುತ್ತದೆ.
- ಎಲ್ಲಾ ಕಂಪನಿಗಳ PF ಖಾತೆಗಳಿಗೂ ಒಂದೇ UAN: ಪ್ರತೀ ನೌಕರನು ಹೊಸ ಉದ್ಯೋಗ ಆರಂಭಿಸಿದಾಗಲೆಲ್ಲಾ ನೂತನ PF ಖಾತೆ ಸೃಷ್ಟಿಯಾಗಬಹುದು, ಆದರೆ ಆ ಎಲ್ಲಾ ಖಾತೆಗಳೂ ಒಂದೇ UAN ಅಡಿಗೆ ಸೇರಿಕೊಳ್ಳುತ್ತವೆ.
- ಆನ್ಲೈನ್ ಸೇವೆಗಳ ಲಾಭ: KYC ನವೀಕರಣ, ಕ್ಲೇಮ್ ಸ್ಥಿತಿ ಪರಿಶೀಲನೆ, PF ಹಣ ಹಿಂಪಡೆಯುವಿಕೆ ಹೀಗೆ ಎಲ್ಲಾ ಸೇವೆಗಳೂ Online ಮುಖಾಂತರವೇ ನಡೆಯಲಿದ್ದು, ಇದಕ್ಕೆಲ್ಲಾ UAN ಬೇಕೇಬೇಕು.
- PF ಪಾಸ್ಬುಕ್ ಮತ್ತು ಬ್ಯಾಲೆನ್ಸ್ ತಪಾಸಣೆ: ನೌಕರರ EPF ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು UAN ನಂಬರ್ ಹಾಕಿ Employee ಪೋರ್ಟ್ಲ್ನಲ್ಲಿ ನೋಡಬಹುದಾಗಿದೆ.
- ಉದ್ಯೋಗದಾತರಿಂದ ಸಕ್ರಿಯ: ಉದ್ಯೋಗಕ್ಕೆ ಸೇರಿದಾಗ ಉದ್ಯೋಗದಾತರಿಂದಲೇ ಈ UAN ಸಕ್ರಿಯಗೊಳಿಸಲಾಗುತ್ತದೆ.