Personal Injury ಪ್ರಕರಣಗಳು ಅಂದ್ರೆ ಏನು?

🧑‍⚖️ ವೈಯಕ್ತಿಕ ಗಾಯ(Personal Injury)ದ ಕಾನೂನುಗಳು: ಮೇಲ್ನೋಟ

ವೈಯಕ್ತಿಕ ಗಾಯದ ಕಾನೂನುಗಳು ಎಂದರೆ ಯಾರಾದರೂ ಓರ್ವ ವ್ಯಕ್ತಿ ನಿರ್ಲಕ್ಷ್ಯ(negligence) ವಹಿಸಿ ಅಥವಾ ಉದ್ದೇಶಪೂರ್ವಕವಾಗಿ ಮತ್ತೊಬ್ಬ ವ್ಯಕ್ತಿಗೆ ಹಾನಿ ಮಾಡಿದಲ್ಲಿ, ಅಂತಹ ಗಾಯಾಳುವಿಗೆ ನ್ಯಾಯ ಸಿಗುವಂತೆ ಮಾಡುವ ಚೌಕಟ್ಟುಗಳಾಗಿವೆ.

🔑 ಪ್ರಮುಖ ಪರಿಕಲ್ಪನೆಗಳು:

  1. ನಿರ್ಲಕ್ಷ್ಯ (Negligence):
    • ಹೆಚ್ಚು ಪ್ರಕರಣಗಳು ನಿರ್ಲಕ್ಷ್ಯದ ಮೇಲೆ ಆಧಾರಿತವಾಗಿರುತ್ತವೆ.
    • ಇದನ್ನು ಸಾಬೀತುಪಡಿಸಲು ಗಾಯಾಳುಗಳು ಈ ಕೆಳಗಿನ ಅಂಶಗಳನ್ನು ತೋರಿಸಬೇಕು:
      1. ಆದರ್ಶವಾದ ಕರ್ತವ್ಯ(Duty of Care) ನಿರ್ವಹಿಸಬೇಕಿತ್ತು.
      2. ಆ ಕರ್ತವ್ಯ ಉಲ್ಲಂಘಿಸಲಾಗಿದೆ. 
      3. ಉಲ್ಲಂಘನೆ ಕಾರಣದಿಂದ ಗಾಯಗೊಂಡಿದ್ದೇನೆ.
      4. ಗಾಯಗಳಿಂದ ಹಲವು ನಷ್ಟ ಉಂಟಾಗಿದೆ.
  2. ಕಠಿಣ ಹೊಣೆಗಾರಿಕೆ(Strict Liability):
    • ಸಾಮಾನ್ಯವಾಗಿ ಇದು ಉತ್ಪನ್ನ ದೋಷದಿಂದ ಕೂಡಿದ್ದರೆ ಅಂತಹ ಪ್ರಕರಣಗಳಿಗೆ ಅನ್ವಯಿಸುತ್ತದೆ.
    • ಇಲ್ಲಿ ನಿರ್ಲಕ್ಷ್ಯ ಇಲ್ಲದಿದ್ದರೂ ಅಥವಾ ಉದ್ದೇಶಿತ ಕೃತ್ಯವಲ್ಲದಿದ್ದರೂ ಹೊಣೆಗಾರಿಕೆ ಇರುತ್ತದೆ.
  3. ಉದ್ದೇಶಿತ ಕೃತ್ಯಗಳು(Intentional Torts):
    • ಹಲ್ಲೆ(Assault)ಯಂತಹ ಉದ್ದೇಶಿತ ಕೃತ್ಯಗಳನ್ನು ಎಸಗುವ ಮುಖೇನ ಗಾಯಗೊಳಿಸುವುದು.
  4. ತುಲನಾತ್ಮಕ & ಸಹಕಾರ ನಿರ್ಲಕ್ಷ್ಯ:
    • ತುಲನಾತ್ಮಕ ನಿರ್ಲಕ್ಷ್ಯ: ತಪ್ಪಿನಲ್ಲಿ ಸಂತ್ರಸ್ತನ ಪಾತ್ರವೂ ಇದ್ದರೆ ಪರಿಹಾರ ಕಡಿಮೆ ಆಗಬಹುದು.
    • ಸಹಕಾರ ನಿರ್ಲಕ್ಷ್ಯ: ಕೆಲವು ಸ್ಥಳಗಳಲ್ಲಿ, ಸಂತ್ರಸ್ತನ ತಪ್ಪು ಕಡಿಮೆ ಇದ್ದರೂ ಸಹ ಪರಿಹಾರದಿಂದ ವಂಚಿತನಾಗಬಹುದು.

⚖️ ಸಾಮಾನ್ಯವಾಗಿ ಸಂಭವಿಸುವ ವೈಯಕ್ತಿಕ ಗಾಯ ಪ್ರಕರಣಗಳ ಪಟ್ಟಿ:

  • ಕಾರು, ಬೈಕ್ ಅಥವಾ ಲಾರಿ ಅಪಘಾತಗಳು
  • ಜಾರಿ ಬೀಳುವ ಪ್ರಕರಣಗಳು(Slip and fall)
  • ವೈದ್ಯಕೀಯ ನಿರ್ಲಕ್ಷ್ಯ (Medical malpractice)
  • ನಾಯಿಯಿಂದ ಕಚ್ಚಿಸಿಕೊಳ್ಳುವುದು
  • ಕೆಲಸದ ಸ್ಥಳದಲ್ಲಿ ಆಗುವ ಗಾಯಗಳು
  • ದೋಷಪೂರಿತ ಉತ್ಪನ್ನಗಳಿಂದ ಆಗುವ ಗಾಯಗಳು
  • ಅಸಹಜ ಸಾವಿಗೆ ಕಾರಣವಾಗುವ ಪ್ರಕರಣಗಳು (Wrongful death)

💰 ವೈಯಕ್ತಿಕ ಗಾಯಕ್ಕೆ ಒಳಗಾದವರು ಕೆಳಗಿನಂತೆ ಪರಿಹಾರ ಪಡೆಯಲು ಅರ್ಹರಿರುತ್ತಾರೆ:

ಸಂತ್ರಸ್ತರು ಈ ಕೆಳಗಿನ ಪರಿಹಾರಗಳನ್ನು ಪಡೆಯಬಹುದು:

  • ವೈದ್ಯಕೀಯ ವೆಚ್ಚಗಳು
  • ಕಳೆದುಕೊಂಡ ಸಂಬಳ
  • ನೋವು ಮತ್ತು ಸಂಕಟಕ್ಕೆ ಪರಿಹಾರ (Pain and Suffering)
  • ಮಾನಸಿಕ ವೇದನೆ
  • ಅಸಹಜ ಸಾವು ಪ್ರಕರಣಗಳಲ್ಲಿ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದರಿಂದ ನಷ್ಟ

ವೈಯಕ್ತಿಕ ಗಾಯಗಳಿಂದ ನಷ್ಟ ಅನುಭವಿಸುವ ಸಂತ್ರಸ್ತರು ಈ ಮೇಲಿನ ಕಾರಣಗಳನ್ನು ನೀಡಿ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿ ನ್ಯಾಯ ಕೇಳಬಹುದಾಗಿದೆ.

🕒 ದಾವೆ ಹೂಡಲು ಸಮಯದ ಮಿತಿ:

  • ಯಾವುದೇ ಪ್ರಕರಣವಾದರೂ ದಾವೆ ಹೂಡಲು ಇಂತಿಷ್ಟು ಎಂಬಂತೆ ಸಮಯವನ್ನು ನಿಗದಿಪಡಿಸಿರಲಾಗುತ್ತದೆ. ಅಂತೆಯೇ ಭಾರತದಲ್ಲೂ ಕೂಡ ಘಟನೆ ನಡೆದ ಮೂರು ವರ್ಷದ ಒಳಗೆ ಇಂತಹ ಪ್ರಕರಣಗಳಲ್ಲಿ ದಾವೆ ಹೂಡಬಹುದಾಗಿದೆ. ಈ ಅವಧಿಯನ್ನು ಮೀರಿದ ಬಳಿಕ ಮೊಕದ್ದಮೆ ಹೂಡಲು ಬಯಸಿದರೆ ಅದಕ್ಕೆ ಮಾನ್ಯತೆ ಇರುವುದಿಲ್ಲ. ಹಾಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸಬೇಕು.

📋 ಗಾಯವಾದ ಮೇಲೆ ಏನು ಮಾಡಬೇಕು?

  1. ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.
  2. ಫೋಟೋಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿ ವರದಿ ಸಿದ್ಧಪಡಿಸಿ. 
  3. ಘಟನಾ ಸ್ಥಳದಲ್ಲಿ ತಪ್ಪು ಯಾರದೆಂದು ವಾದಿಸುವುದನ್ನು ನಿಲ್ಲಿಸಿ.
  4. personal injury ವಿಭಾಗದಲ್ಲಿ ಅನುಭವವಿರುವ ನುರಿತ ವಕೀಲರನ್ನು ಸಂಪರ್ಕಿಸಿ ಮುಂದಿನ ಕ್ರಮದ ಬಗ್ಗೆ ಚರ್ಚಿಸಿ.

Leave a Reply

Your email address will not be published. Required fields are marked *