🧾 1. ರಾಜೀನಾಮೆ ನಂತರ:
- ರಾಜೀನಾಮೆ ನೀಡಿದರೂ ನಿಮ್ಮ EPF ಖಾತೆ ಸಕ್ರಿಯವಾಗಿರುತ್ತದೆ.
- ಖಾತೆಯಲ್ಲಿರುವ ಎಲ್ಲಾ ಹಣವನ್ನು ಹಿಂಪಡೆಯಬಹುದು:
- 2 ತಿಂಗಳು ನಿರಂತರವಾಗಿ ಕೆಲಸವಿಲ್ಲದೆ ಖಾಲಿ ಉಳಿದರೆ,
- ನೀವು ಇನ್ಮುಂದೆ EPF deduct ಆಗುವ ಉದ್ಯೋಗಕ್ಕೆ ಸೇರದಿದ್ದರೆ.
- ಕೆಲಸಕ್ಕೆ ತುಂಬಾ ದಿನಗಳ ಕಾಲ ಹೋಗದಿದ್ದರೆ ಆರ್ಥಿಕ ತುರ್ತು ಪರಿಸ್ಥಿತಿ, ಮದುವೆ, ಶಿಕ್ಷಣ, ಮನೆ ಖರೀದಿ ಮುಂತಾದ ಕಾರಣಗಳನ್ನು ನೀಡಿ ಭಾಗಶಃ ಹಣ ಹಿಂಪಡೆಯಬಹುದು.
- ಹೊಸ ಉದ್ಯೋಗಕ್ಕೆ ಹೋದರೆ, EPF ಅನ್ನು UAN ಮೂಲಕ Transfer ಮಾಡಿಕೊಳ್ಳಬೇಕಾಗುತ್ತದೆ.
🎯 ತೆರಿಗೆ ವಿವರ:
- ನೀವು 5 ವರ್ಷಕ್ಕಿಂತ ಕಡಿಮೆ ಸೇವೆ ಮಾಡಿದ್ದರೆ, EPF ಹಣವನ್ನು ತೆಗೆಯುವಾಗ ತೆರಿಗೆ ವಿಧಿಸಲಾಗುತ್ತದೆ.
🎓 2. ನಿವೃತ್ತಿಯ ನಂತರ(58 ವರ್ಷಕ್ಕಿಂತ ಮೇಲ್ಪಟ್ಟವರು):
- ನಿಮ್ಮ ಹಕ್ಕು ನಿಮಗಿರುತ್ತದೆ:
- ಪೂರ್ಣ EPF ಮೊತ್ತವನ್ನು ವಾಪಸ್ ಪಡೆಯಬಹುದು ಅಥವಾ
- ಹತ್ತು ವರ್ಷ ಸೇವೆಯನ್ನು ಪೂರ್ತಿಗೊಳಿಸಿದ್ದರೆ ಪ್ರತೀ ಮಾಸ ಪಿಂಚಿಣಿ ಪಡೆಯಬಹುದು.
- ಪಿಂಚಣಿ ಪಡೆಯಲು ನೀವು ಫಾರ್ಮ್ 10Dಯಲ್ಲಿ ಅರ್ಜಿ ಸಲ್ಲಿಸಬೇಕು.
- ನಿವೃತ್ತಿ ನಂತರ EPFಗೆ ಯಾವುದೇ ರೀತಿಯ ಕೊಡುಗೆ ನೀಡುವ ಅಗತ್ಯ ಇರುವುದಿಲ್ಲ.
🛑 ಖಾತೆ ಸ್ಥಿತಿ:
- EPF ಖಾತೆಗೆ ಸತತವಾಗಿ 36 ತಿಂಗಳವರೆಗೆ ಯಾವುದೇ ರೀತಿಯ ಪಾವತಿ ಮಾಡುವುದಾಗಲಿ ಅಥವಾ ಹಿಂಪಡೆಯುವುದಾಗಲಿ ಆಗದಿದ್ದರೆ ಖಾತೆಯು ಅಸಕ್ರಿಯವಾಗುತ್ತದೆ. ಆದರೆ ನೌಕರನಿಗೆ 58 ವರ್ಷ ಆಗುವವರೆಗೆ ಖಾತೆಗೆ ನಿರಂತರವಾಗಿ ವಾರ್ಷಿಕ ಬಡ್ಡಿ ಹಣವು ಜಮಾ ಆಗುತ್ತಿರುತ್ತದೆ.