ಮಕ್ಕಳ ದತ್ತು.. ಕಾನೂನು ಕಟ್ಟಳೆಗಳೇನು?

ಭಾರತದಲ್ಲಿ ದತ್ತು ಪಡೆಯುವ ಪ್ರಕ್ರಿಯೆಯ ಕಾನೂನುಗಳನ್ನು ದತ್ತು ತೆಗೆದುಕೊಳ್ಳುವ ಪೋಷಕರ ಧರ್ಮದ ಆಧಾರದ ಮೇಲೆ ನಿರ್ದಿಷ್ಟಗೊಳಿಸಲಾಗಿದೆ. ಮಕ್ಕಳನ್ನು ದತ್ತು ಪಡೆಯುವುದಕ್ಕೆ ಸಂಬಂಧಿಸಿದ ಕಾನೂನುಗಳ ಸರಳ ಅವಲೋಕನ ಇಲ್ಲಿದೆ:

1. ಹಿಂದೂ ದತ್ತು & ನಿರ್ವಹಣಾ ಅಧಿನಿಯಮ (HAMA), 1956

ಈ ಅಧಿನಿಯಮವು ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಖ್ಖರಿಗೆ ಅನ್ವಯಿಸುತ್ತದೆ. ದತ್ತು ತೆಗೆದುಕೊಳ್ಳುವ ಪ್ರಕ್ರಿಯೆಯು ದೇಶದ ಒಳಗೆ ನಡೆಯಬೇಕೆಂದು ಇದು ನಿರ್ಬಂಧಿಸುತ್ತದೆ.

🔹 HAMAದ ಪ್ರಮುಖ ನಿಯಮಗಳು:

  • ವಿವಾಹಿತ ದಂಪತಿ ಅಥವಾ ಒಬ್ಬರೇ ಇದ್ದರೂ ದತ್ತು ತೆಗೆದುಕೊಳ್ಳಬಹುದು.
  • ದಂಪತಿ ಇಬ್ಬರೂ ಒಗ್ಗಟ್ಟಿನಿಂದ ದತ್ತು ತೆಗೆದುಕೊಳ್ಳಬೇಕಾದುದು ಕಡ್ಡಾಯ.
  • ದಂಪತಿ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವನ್ನು ಮಾತ್ರವೇ ದತ್ತು ತೆಗೆದುಕೊಳ್ಳಬಹುದು. (ಉದಾ: ಈಗಾಗಲೇ ಪುತ್ರನಿದ್ದರೆ, ಮಗಳನ್ನು ಮಾತ್ರ ದತ್ತು ತೆಗೆದುಕೊಳ್ಳಬಹುದು).
  • ಪುರುಷ ಹೆಣ್ಣು ಮಗುವನ್ನು ಅಥವಾ ಮಹಿಳೆ ಗಂಡು ಮಗುವನ್ನು ದತ್ತು ಪಡೆಯುವಂತಿದ್ದರೆ ಪೋಷಕರು ಮಗುವಿಗಿಂತ 21 ವರ್ಷ ಹಿರಿಯರಾಗಿರಬೇಕು.
  • ದತ್ತು ಪಡೆದ ಮಗುವಿಗೂ ಸ್ವಂತ ಜನಿಸಿದ ಮಗನಿಗೆ ಇರುವಷ್ಟೇ ಹಕ್ಕಿರುತ್ತದೆ.

2. ಕಿಶೋರ ನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ) ಅಧಿನಿಯಮ(JJ Act), 2015

ಇದ್ದು ಎಲ್ಲಾ ಧರ್ಮಗಳು ಮತ್ತು ವಿದೇಶಿಗರಿಗೂ ಅನ್ವಯವಾಗುತ್ತದೆ.

ಅನಾಥ, ತ್ಯಜಿಸಿದ ಅಥವಾ ಸರ್ಕಾರದ ಮೂಲಕ ಒಪ್ಪಿಸಲಾದ ಎಲ್ಲಾ ಮಕ್ಕಳನ್ನೂ ಈ ಕಾಯಿದೆ ಒಳಗೊಳ್ಳುತ್ತದೆ.

🔹 JJ Act ಅಡಿಯಲ್ಲಿನ ಪ್ರಮುಖ ನಿಯಮಗಳು:

  • ದತ್ತು ಪ್ರಕ್ರಿಯೆಯು CARA(Central Adoption Resource Authority) ಸಂಸ್ಥೆಯ ಮೂಲಕ ನಡೆಯುತ್ತದೆ. https://cara.nic.in
  • ಒಬ್ಬಂಟಿ ವ್ಯಕ್ತಿಗಳು, ವಿವಾಹಿತ ದಂಪತಿ ಮತ್ತು NRIಗಳು/ವಿದೇಶಿಗರು ದತ್ತು ಪಡೆಯಬಹುದಾಗಿದೆ.
  • ಪೋಷಕರು ಒಬ್ಬರೇ ಇದ್ದಲ್ಲಿ ಮಗುವಿಗೆ ಮತ್ತು ದತ್ತು ಪಡೆಯುವ ಪೋಷಕರ ವಯಸ್ಸು ಕನಿಷ್ಠ 25 ವರ್ಷ ವ್ಯತ್ಯಾಸ ಇರಬೇಕು.


  • ದತ್ತು ಪಡೆಯಲು ಪೋಷಕರ ವಯಸ್ಸಿನ ಮಿತಿ:
    • 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಪಡೆಯಲು ಗರಿಷ್ಠ 45 ವರ್ಷ
    • 4–8 ವರ್ಷದ ಮಗು ಪಡೆಯಲು ಗರಿಷ್ಠ 50 ವರ್ಷ
    • 8–18 ವರ್ಷ ಮಗುವನ್ನು ದತ್ತು ಪಡೆಯಲು ಗರಿಷ್ಠ 55 ವರ್ಷ
  • ದತ್ತು ಪಡೆಯುವವರು ಶಾರೀರಿಕವಾಗಿ, ಮಾನಸಿಕ ಹಾಗೂ ಆರ್ಥಿಕವಾಗಿಯೂ ದಕ್ಷರಾಗಿರಬೇಕು.

ದತ್ತು ಪಡೆಯುವ ಹಂತಗಳು:

  1. CARA ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಿ.
  2. ಅಗತ್ಯ ದಾಖಲೆಗಳನ್ನು ಸಲ್ಲಿಸಿ(ವಯಸ್ಸು, ಆದಾಯ & ಆರೋಗ್ಯ ಪ್ರಮಾಣಪತ್ರ ಇತ್ಯಾದಿ).
  3. ಲೈಸೆನ್ಸ್ ಪಡೆದ ಸಂಸ್ಥೆಯ ಮೂಲಕ “ಹೋಮ್ ಸ್ಟಡಿ ರಿಪೋರ್ಟ್” ಮಾಡಿಸಿಕೊಳ್ಳಿ.
  4. ದತ್ತು ಪಡೆಯಲು ಶಿಫಾರಸು ಬರುವವರೆಗೆ ನಿರೀಕ್ಷಿಸುತ್ತಿರಿ.
  5. ನ್ಯಾಯಾಲಯಗಳಲ್ಲಿ ಮಕ್ಕಳ ಪಾಲನೆ ಒಪ್ಪಂದ ಮಾಡಿಕೊಳ್ಳುವ ಮುಖೇನ ಕಾನೂನುಬದ್ಧವಾಗಿ ದತ್ತು ಪಡೆಯಬೇಕು.

ಯಾರು ದತ್ತು ಪಡೆಯಲಾರರು?

  • LGBTQ+ ಸಮುದಾಯಕ್ಕೆ ದತ್ತು ಹಕ್ಕುಗಳು ಸೀಮಿತವಾಗಿವೆ.
  • ಲಿವ್-ಇನ್ ಸಂಬಂಧ ಹೊಂದಿರುವವರು ಜಂಟಿಯಾಗಿ ದತ್ತು ಪಡೆಯಲು ಅರ್ಹರಲ್ಲ. ಆದರೆ ಇಬ್ಬರಲ್ಲಿ ಯಾರಾದರೂ ಒಬ್ಬರು ದತ್ತು ಪಡೆಯಬಹುದು.
  • ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಪ್ರಕರಣ ಸೇರಿದಂತೆ ಗಂಭೀರ ಅಪರಾಧಗಳಲ್ಲಿ ದೋಷಿಯಾಗಿರುವವರು ಮಕ್ಕಳನ್ನು ದತ್ತು ಪಡೆಯುವಂತಿಲ್ಲ.

ಮುಖ್ಯ ಟಿಪ್ಪಣಿ:

  • ಕೇವಲ ಕಾನೂನುಬದ್ಧವಾಗಿ ದತ್ತು ಪಡೆಯಲು ಲಭ್ಯವಿರುವ ಮಕ್ಕಳುನ್ನು (ಅನಾಥರು, ತ್ಯಸಿದವರು) ಮಾತ್ರ CARA ಮುಖಾಂತರ ದತ್ತು ಪಡೆಯಬಹುದಾಗಿದೆ.
  • ಮಕ್ಕಳನ್ನು ಖರೀದಿಸುವುದು ಅಥವಾ ಮಾರಾಟ ಮಾಡುವುದು ಕಾನೂನುಬಾಹಿರವಾಗಿದ್ದು, ಇದಕ್ಕೆ ಕಠಿಣ ಶಿಕ್ಷೆಯಿದೆ.

Leave a Reply

Your email address will not be published. Required fields are marked *