ಕಾರ್ಮಿಕರಿಗೆ ಯಾವೆಲ್ಲಾ ಹಕ್ಕುಗಳಿವೆ ಗೊತ್ತೇ?

ಭಾರತದಲ್ಲಿ ಕಾರ್ಮಿಕರ ಹಕ್ಕುಗಳನ್ನು ಭಾರತದ ಸಂವಿಧಾನ, ವಿವಿಧ ಕಾರ್ಮಿಕ ಕಾನೂನುಗಳು ಮತ್ತು ನ್ಯಾಯಾಲಯದ ತೀರ್ಪುಗಳ ಮೂಲಕ ರಕ್ಷಿಸಲಾಗಿದೆ. ಈ ಹಕ್ಕುಗಳು ಉದ್ಯೋಗಿಗಳಿಗೆ ನ್ಯಾಯಸಮ್ಮತವಾದ ಸಂಬಳ, ಕೆಲಸದ ಸ್ಥಳದಲ್ಲಿ ಸುರಕ್ಷತೆ ಮತ್ತು ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶವನ್ನು ಹೊಂದಿವೆ. ಭಾರತೀಯ ಕಾರ್ಮಿಕರಿಗೆ ಲಭ್ಯವಿರುವ ಹಕ್ಕುಗಳ ರಕ್ಷಣೆಯ ಮಾಹಿತಿ ಇಲ್ಲಿದೆ:

ಸಾಂವಿಧಾನಿಕ ಹಕ್ಕುಗಳು:
🔹 ಸಮಾನತೆಯ ಹಕ್ಕು(ಅನುಚ್ಛೇದ 14) – ಕಾನೂನುಗಳ ಸಮಾನ ರಕ್ಷಣೆ ಮತ್ತು ಉದ್ಯೋಗದಲ್ಲಿ ಭೇದಭಾವವಿಲ್ಲದ ಸಂಬಂಧ.
🔹 ಸ್ವಾತಂತ್ರ್ಯದ ಹಕ್ಕು(ಅನುಚ್ಛೇದ 19) – ಸಂಘಗಳನ್ನು ರಚಿಸುವ ಮತ್ತು ಸೇರುವ ಹಕ್ಕು.
🔹 ಜೀವನೋಪಾಯದ ಹಕ್ಕು(ಅನುಚ್ಛೇದ 21) – ಗೌರವಯುತ ಜೀವನ ನಡೆಸುವ ಹಕ್ಕು, ಇದರಲ್ಲೇ ಕೆಲಸದ ಸ್ಥಳದಲ್ಲಿ ಸುರಕ್ಷತೆ ಒದಗಿಸುವ ಹಕ್ಕೂ ಸೇರಿದೆ.
🔹 ನಿರ್ದೇಶಕ ತತ್ವಗಳು(ಭಾಗ IV) – ಕಾನೂನಾಗಿ ಜಾರಿಗೆ ಬಾರದಿದ್ದರೂ, ಸರ್ಕಾರಕ್ಕೆ ಈ ಕೆಳಗಿನಂತೆ ಮಾರ್ಗದರ್ಶನ ನೀಡುತ್ತದೆ.

ನ್ಯಾಯಸಮ್ಮತ ಮತ್ತು ಕೆಲಸದ ಸ್ಥಳದಲ್ಲಿ ಸುರಕ್ಷಿತ ಪರಿಸ್ಥಿತಿ (ಅನುಚ್ಛೇದ 42)
ಸಮಾನ ಕೆಲಸಕ್ಕೆ ಸಮಾನ ವೇತನ (ಅನುಚ್ಛೇದ 39)
ಶೋಷಣೆಯಿಂದ ಮಕ್ಕಳ ರಕ್ಷಣೆ (ಅನುಚ್ಛೇದ 39(e))

ಕಾನೂನಾತ್ಮಕ ಹಕ್ಕುಗಳು:
✅ 1. ಕನಿಷ್ಠ ವೇತನದ ಹಕ್ಕು:

>ಕನಿಷ್ಠ ವೇತನ ಕಾಯ್ದೆ-1948 ಮತ್ತು ವೇತನ ಸಂಹಿತೆ-2019 ಅಡಿಯಲ್ಲಿ ವ್ಯವಸ್ಥೆ.
>ರಾಜ್ಯ/ಕೇಂದ್ರ ಸರ್ಕಾರ ಘೋಷಿಸಿರುವ ಕನಿಷ್ಠ ವೇತನಕ್ಕಿಂತ ಕಡಿಮೆ ನೀಡುವಂತಿಲ್ಲ.

✅ 2. ಸಮಾನ ಕೆಲಸಕ್ಕೆ ಸಮಾನ ವೇತನದ ಹಕ್ಕು:

>ಲಿಂಗಾಧಾರಿತ ಭೇದಭಾವ ಸಲ್ಲದು.
>ಸಮಾನ ವೇತನ ಕಾಯ್ದೆ-1976 ಮತ್ತು ಅನುಚ್ಛೇದ 39(d) ಅಡಿಯಲ್ಲಿ ಮಾನ್ಯತೆ.

✅ 3. ಕೆಲಸದ ಸ್ಥಳದಲ್ಲಿ ಸುರಕ್ಷಿತ ಪರಿಸ್ಥಿತಿಯ ಹಕ್ಕು:

>ಕಾರ್ಖಾನೆ ಕಾಯ್ದೆ-1948 ಮತ್ತು ವ್ಯಾವಸಾಯಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ-2020ರ ಅಡಿಯಲ್ಲಿ ಜಾರಿಗೊಳಿಸಲಾಗಿದೆ.
>ನೌಕರರಿಗೆ ಶುದ್ಧವಾದ ಗಾಳಿ, ನೀರು, ಸುರಕ್ಷಿತವಾದ ಯಂತ್ರೋಪಕರಣಗಳು ಮತ್ತು ರಕ್ಷಣಾತ್ಮಕ ಸಾಧನಗಳನ್ನು ಒದಗಿಸಬೇಕು.

✅ 4. ದೈನಂದಿನ ಹಾಗೂ ಸಾಪ್ತಾಹಿಕ ಕೆಲಸದ ಗಂಟೆಗಳ ಹಕ್ಕು:

>ಸಾಮಾನ್ಯವಾಗಿ ದಿನಕ್ಕೆ 8 ಗಂಟೆಗಳವರೆಗೆ ಮತ್ತು ವಾರಕ್ಕೆ 48 ಗಂಟೆಗಳ ಕಾಲ ಕೆಲಸ ಮಾಡಿಸಿಕೊಂಡು, ಒಂದು ಪೂರ್ಣ ದಿನ ವಿಶ್ರಾಂತಿ ನೀಡಬೇಕು.

✅ 5. ರಜೆಯ ಹಕ್ಕು:

>ಸಂಬಳ ಸಹಿತ ರಜೆ, ಕ್ಯಾಸುಯಲ್ ರಜೆ, ಗರ್ಭಧಾರಣಾ ರಜೆ ಮತ್ತು ಸಾರ್ವಜನಿಕ ರಜೆಗಳನ್ನು ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
>ಗರ್ಭಧಾರಣಾ ಸೌಲಭ್ಯ ಕಾಯ್ದೆ-1961(ತಿದ್ದುಪಡಿ ನಂತರ)ರ ಅಡಿಯಲ್ಲಿ ಮಹಿಳಾ ನೌಕರರಿಗೆ ವೇತನ ಸಹಿತ 26 ವಾರಗಳ ರಜೆಯನ್ನು ನೀಡಲೇಬೇಕು.

✅ 6. ಸಾಮಾಜಿಕ ಭದ್ರತೆ ಹಕ್ಕು:

>ನೌಕರರ ಭವಿಷ್ಯ ನಿಧಿ (EPF)
>ನೌಕರರ ರಾಜ್ಯ ವಿಮೆ (ESI)-ವೈದ್ಯಕೀಯ ಮತ್ತು ಗರ್ಭಧಾರಣಾ ಲಾಭಕ್ಕಾಗಿ
>5 ವರ್ಷಗಳ ನಿರಂತರ ಸೇವೆಯ ನಂತರ ಗ್ರ್ಯಾಚುಯಿಟಿ(Gratuity) ಪಾವತಿ

✅ 7. ಶೋಷಣೆಯಿಂದ ರಕ್ಷಿಸುವ ಹಕ್ಕು:

>14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕಾರ್ಖಾನೆಗಳಲ್ಲಿ ದುಡಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.
>ಊಳಿಗಮಾನ್ಯ ಪದ್ಧತಿ ಅಥವಾ ಬಲವಂತದ ಕೆಲಸವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

✅ 8. ಕಾರ್ಮಿಕ ಸಂಘಗಳನ್ನು ಸ್ಥಾಪಿಸುವ ಹಕ್ಕು:

>ಕಾರ್ಮಿಕ ಸಂಘಗಳ ಕಾಯ್ದೆ-1926ರ ಅಡಿಯಲ್ಲಿ ಕಾರ್ಮಿಕ ಸಂಘ ಅಥವಾ ಸಂಘಟನೆಗಳನ್ನು ಸ್ಥಾಪಿಸಿಕೊಳ್ಳಲು ಕಾರ್ಮಿಕರಿಗೆ ಅವಕಾಶ ನೀಡಲಾಗಿದೆ.
>ಕಾರ್ಮಿಕರು ಸಂಘಗಳನ್ನು ರಚಿಸಿ ಸಂಸ್ಥೆಗಳೊಂದಿಗೆ ನೇರ ಸಂವಹನ ನಡೆಸಿ, ಆಡಳಿತ ಮಂಡಳಿಯಲ್ಲೂ ಪಾಲುದಾರಿಕೆ ವಹಿಸಬಹುದಾಗಿದೆ.

ಹೊಸ ಕಾರ್ಮಿಕ ಸಂಹಿತೆಗಳು:
ಭಾರತವು ಹಳೆಯ 29 ಕಾರ್ಮಿಕ ಕಾಯ್ದೆಗಳನ್ನು ಒಟ್ಟುಗೂಡಿಸಿ ಈ ಕೆಳಗಿನ ನಾಲ್ಕು ಕಾರ್ಮಿಕ ಸಂಹಿತೆಗಳಾಗಿ ವಿಲೀನಗೊಳಿಸಿದೆ:

1.ವೇತನ ಸಂಹಿತೆ(Code on Wages)
2.ಸಾಮಾಜಿಕ ಭದ್ರತಾ ಸಂಹಿತೆ(Code on Social Security)
3.ಉದ್ಯೋಗ ಸಂಬಂಧ ಸಂಹಿತೆ(Industrial Relations Code)
4.ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಸಂಹಿತೆ(Occupational Safety, Health and Working Conditions Code)

ಇವು ಕಾರ್ಮಿಕರ ಹಕ್ಕುಗಳನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದ್ದು, ಹಂತ ಹಂತವಾಗಿ ಜಾರಿಗೆ ಬರುತ್ತಿವೆ.

Leave a Reply

Your email address will not be published. Required fields are marked *