ಬೆಳ್ಳಂ ಬೆಳಗ್ಗೆ ಖಾಲಿ ಹೊಟ್ಟೆಗೆ ನೀರು ಕುಡಿಯುವುದರಿಂದ ಆಗುವ ಪ್ರಯೋಜನ?
ರಾತ್ರಿ ನಿದ್ರೆ ಮಾಡುವ ಕಾರಣ ಆಗಾಗ ಎದ್ದು ನೀರು ಕುಡಿಯಲು ಆಗಲ್ಲ. ಅಲ್ಲದೆ ಕುಡಿದ ನೀರು ತ್ಯಾಜ್ಯವಾಗಿ ಮೂತ್ರಪಿಂಡದಲ್ಲಿ ಶೇಖರಣೆ ಆಗಿರುತ್ತದೆ. ಹಾಗಾಗಿ ಬೆಳಗ್ಗೆ ದೇಹ ನಿರ್ಜಲೀಕರಣ ಸಮಸ್ಯೆಯನ್ನು ಎದುರಿಸುತ್ತಿರುತ್ತದೆ . ಇಂತಹ ಸಂದರ್ಭದಲ್ಲಿ ದೇಹಕ್ಕೆ ಅಗತ್ಯವಾದಷ್ಟು ನೀರು ಕುಡಿದರೆ ಕಲ್ಮಶವೆಲ್ಲವೂ ಮೂತ್ರವಾಗಿ ಸಲೀಸಾಗಿ ಹೊರಬರಲು ಸಹಾಯವಾಗುತ್ತದೆ.
ಬೆಳಗ್ಗೆ ನೀರು ಕುಡಿಯುವುದರಿಂದ ದೇಹದಲ್ಲಿ ಚಯಾಪಚಯ ಕ್ರಿಯೆ ಸುಗಮವಾಗುತ್ತದೆ.
ಬೆಳಗ್ಗೆ ಸೇವಿಸುವ ನೀರು ದೇಹದಲ್ಲಿನ ವಿಷ ಮತ್ತು ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕುತ್ತದೆ.
ಮಲಬದ್ಧತೆ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ.
ಹಳೆಯ ತ್ವಚೆಯನ್ನು ತೊಲಗಿಸಿ, ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಮೊಡವೆಗಳನ್ನು ಕಡಿಮೆ ಮಾಡಲೂ ನೀರು ಸಹಾಯ ಮಾಡುತ್ತದೆ.
ಅನಗತ್ಯ ವಿಷ ವಸ್ತು ಹೊರ ಹೋಗುವ ಕಾರಣ ದೇಹದ ತೂಕ ತಾನಾಗಿಯೇ ಕಡಿಮೆಯಾಗುತ್ತದೆ.
ಮನಸ್ಸಿನ ಕಾರ್ಯಕ್ಷಮತೆಯು ಹೆಚ್ಚುತ್ತದೆ. ಇದರಿಂದ ಗಮನ ಸರಿಯಾಗಿರುವುದಲ್ಲದೆ, ಏಕಾಗ್ರತೆಯೂ ಹೆಚ್ಚುತ್ತದೆ.
ಬೆಳಗಿನ ದೈಹಿಕ ಚಟುವಟಿಕೆ ಹಾಗೂ ವ್ಯಾಯಾಮಕ್ಕೆ ಸರಿಯಾದ ಜಲಸಂಚಯನ ಅತ್ಯಗತ್ಯ.
ನೀರು ಮೂತ್ರಪಿಂಡ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಸಹಾಯ ಮಾಡುತ್ತದೆ.