ಹೆಣ್ಣುಮಕ್ಕಳಿಗೆ ಮಾಸಿಕವಾಗಿ ಆಗುವ ಋತುಸ್ರಾವದ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ. ಇವುಗಳು ಬಹುಮಟ್ಟಿಗೆ ಹೆಂಗಸರಲ್ಲಿ ಅನುಮಾನ, ಭಯವನ್ನು ಉಂಟು ಮಾಡುತ್ತವೆ. ಅವುಗಳನ್ನು ವೈಜ್ಞಾನಿಕ ನಿಜಾಂಶಗಳಿಂದ ಖಂಡಿಸುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ:
❌ ತಪ್ಪು ಕಲ್ಪನೆ 1: ಋತುಸ್ರಾವವಾಗುವ ಹುಡುಗಿಯರು ಅಶುದ್ಧರು.
✅ ನಿಜಾಂಶ: ಋತುಸ್ರಾವವು ಸ್ವಾಭಾವಿಕ, ಜೈವಿಕವಾದ ಕ್ರಿಯೆಯಾಗಿದೆ, ಅದು ಅಶುದ್ಧವಲ್ಲ.
❌ ತಪ್ಪು ಕಲ್ಪನೆ 2: ಋತುಸ್ರಾವದ ಸಮಯದಲ್ಲಿ ದೇವಾಲಯ ಅಥವಾ ಅಡಿಗೆ ಮನೆಗೆ ಹೆಣ್ಣುಮಕ್ಕಳು ಹೋಗಬಾರದು.
✅ ನಿಜಾಂಶ: ಈ ನಿಯಮವು ವೈಜ್ಞಾನಿಕವಾಗಿ ತಪ್ಪು. ಇದು ಕೇವಲ ಸಾಂಪ್ರದಾಯಿಕ ಮೂಢನಂಬಿಕೆಯಿಂದ ಕೂಡಿದೆ.
❌ ತಪ್ಪು ಕಲ್ಪನೆ 3: ಋತುಸ್ರಾವವನ್ನು ರಹಸ್ಯವಾಗಿಡಬೇಕು.
✅ ನಿಜಾಂಶ: periods ಅನ್ನು ರಹಸ್ಯವಾಗಿ ಇಡುವುದು ಸರಿಯಲ್ಲ. ಏಕೆಂದರೆ ಇದರಿಂದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
❌ ತಪ್ಪು ಕಲ್ಪನೆ 4: ಋತುಸ್ರಾವದ ರಕ್ತ ವಿಷಕಾರಿ:
✅ ನಿಜಾಂಶ: ಅದು ಸಾಮಾನ್ಯ ರಕ್ತದಂತೆಯೇ ವಿಷಕಾರಿ ಅಲ್ಲ.
❌ ತಪ್ಪು ಕಲ್ಪನೆ 5: ಋತುಸ್ರಾವದ ಸಮಯದಲ್ಲಿ ತಲೆ ತೊಳೆಯಬಾರದು.
✅ ನಿಜಾಂಶ: ಈ ಸಮಯದಲ್ಲಿ ಸ್ವಚ್ಛತೆ ಮತ್ತಷ್ಟು ಅಗತ್ಯ.
❌ ತಪ್ಪು ಕಲ್ಪನೆ 6: ಋತುಸ್ರಾವದ ಸಮಯದಲ್ಲಿ ಕ್ರೀಡೆ ಅಥವಾ ವ್ಯಾಯಾಮ ಮಾಡಬಾರದು.
✅ ನಿಜಾಂಶ: ಲಘು ಅಥವಾ ಮಧ್ಯಮ ಮಟ್ಟದ ವ್ಯಾಯಾಮವು ತಲೆನೋವು, ಹೊಟ್ಟೆನೋವನ್ನು ಕಡಿಮೆ ಮಾಡಬಹುದು.
❌ ತಪ್ಪು ಕಲ್ಪನೆ 7: ಎಲ್ಲಾ ಹುಡುಗಿಯರ periods ಒಂದೇ ರೀತಿ ಇರುತ್ತದೆ.
✅ ನಿಜಾಂಶ: ಪ್ರತಿಯೊಬ್ಬರ ಋತುಸ್ರಾವದ ಚಕ್ರವು ಒಬ್ಬರಿಗಿಂತ ಒಬ್ಬರಿಗೆ ವಿಭಿನ್ನವಾಗಿರುತ್ತದೆ. ಅಂದರೆ ಅವಧಿ, ಪ್ರಮಾಣ, ಲಕ್ಷಣಗಳಲ್ಲಿ ವ್ಯತ್ಯಾಸವಿರುತ್ತದೆ.
❌ ತಪ್ಪು ಕಲ್ಪನೆ 8: ಋತುಸ್ರಾವ ಸಮಯದಲ್ಲಿ ಗರ್ಭಧಾರಣೆ ಸಾಧ್ಯವಿಲ್ಲ.
✅ ನಿಜಾಂಶ: ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಿದರೂ ಗರ್ಭ ಧರಿಸುವುದು ಅಪರೂಪ. ಆದರೂ ಗರ್ಭ ಧರಿಸುವ ಸಾಧ್ಯತೆ ಇದ್ದೇ ಇರುತ್ತದೆ. ಅತಿ ಬೇಗ ಒವ್ಯುಲೇಶನ್ ಆದರೆ ಇದು ಸಾಧ್ಯವಾಗಬಹುದು.