2025ರಿಂದ ಜಾರಿಯಾಗಿರುವ ಹೊಸ PF Rules ಏನು?

🏦 1. ಆಟೋ ಸೆಟ್ಲ್ಮೆಂಟ್ ಅಡಿ ಮುಂಗಡವಾಗಿ ಹೆಚ್ಚಿನ ಮೊತ್ತ ತೆಗೆಯಲು ಅವಕಾಶ:

EPFO ಈಗ ಆಟೋಮ್ಯಾಟಿಕ್ ಕ್ಲೇಮ್ ಸೆಟ್ಲ್ಮೆಂಟ್ ಮೌಲ್ಯವನ್ನು ₹1 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಿದೆ. ಇದನ್ನು ಆರೋಗ್ಯ ತುರ್ತು ಪರಿಸ್ಥಿತಿ, ಮನೆ ಖರೀದಿ, ವಿದ್ಯಾಭ್ಯಾಸ ಅಥವಾ ಮದುವೆ ಸಂದರ್ಭಗಳಿಗೆ ಬಳಸಿಕೊಳ್ಳಬಹುದಾಗಿದೆ. ಈ ಹೊಸ ನಿಯಮದಿಂದ ಸುಮಾರು 7 ಕೋಟಿಗೂ ಹೆಚ್ಚು ಸದಸ್ಯರು ಲಾಭ ಪಡೆಯಲಿದ್ದಾರೆ.

💳 2. UPI & ATM ಮೂಲಕ ತಕ್ಷಣ ಹಣ ವಾಪಸ್:

2025ರ ಜೂನ್ ನಿಂದ EPF ಸದಸ್ಯರು ತಮ್ಮ ಹಣವನ್ನು UPI ಅಥವಾ ATM ಕಾರ್ಡ್‌ ಮೂಲಕ ತಕ್ಷಣವೇ ವಾಪಸ್ ಪಡೆಯಬಹುದಾಗಿದೆ. ಇದು ಆಧುನಿಕತೆಯ ದೊಡ್ಡ ಹೆಜ್ಜೆ ಎಂದೇ ಹೇಳಬಹುದು.

📝 3. ಈಗ ಡಿಜಿಟಲ್ ಪ್ರೊಫೈಲ್ ಅಪ್‌ಡೇಟ್ & ಜಾಯಿಂಟ್ ಡಿಕ್ಲರೇಷನ್ ಸುಲಭ:

2025ರ ಜ.16ರಿಂದ:

  • UANಗೆ ಆಧಾರ್ ಲಿಂಕ್ ಆಗಿದ್ದರೆ ಹೆಸರು, ಲಿಂಗ, DOB, ವೈವಾಹಿಕ ಸ್ಥಿತಿ ಮೊದಲಾದ ಪ್ರೊಫೈಲ್ ವಿವರಗಳನ್ನು ಆನ್‌ಲೈನ್ ನಲ್ಲೇ ಅಪ್‌ಡೇಟ್ ಮಾಡಬಹುದು.
  • ಜಾಯಿಂಟ್ ಡಿಕ್ಲರೇಷನ್ ಪ್ರಕ್ರಿಯೆಯನ್ನೂ ಕೂಡ ಆನ್‌ಲೈನ್‌ ಮೂಲಕವೇ ಮಾಡಬಹುದಾಗಿದೆ.

🔄 4. ಹೆಸರು ಬದಲಾವಣೆ ಇಲ್ಲದೆ PF Transfer:

2025ರ ಜನವರಿ 15ರಿಂದ:

  • ಆಧಾರ್ ಲಿಂಕ್ ಆಗಿರುವ UAN ಇದ್ದರೆ, ಹಳೆಯ ಮತ್ತು ಹೊಸ ಉದ್ಯೋಗದಾತರಿಂದ ಅನುಮತಿ ಇಲ್ಲದೆ PF ಟ್ರಾನ್ಸ್‌ಫರ್ ಆಗುತ್ತದೆ. ಈ ನಿಯಮವು 2017ರ ನಂತರದ UANಗಳಿಗೆ ಹೆಚ್ಚು ಅನ್ವಯಿಸುತ್ತದೆ.
  • ಒವರ್ಲ್ಯಾಪ್ ಸರ್ವಿಸ್ ಪಿರಿಯಡ್ ಬಗ್ಗೆ ಇದ್ದ ಹಳೆಯ ತೊಂದರೆಗಳನ್ನು EPFO ಸಡಿಲಗೊಳಿಸಿದೆ.

🏦 5. CPPS: ಕೇಂದ್ರಿತ ಪಿಂಚಣಿ ಪಾವತಿ ವ್ಯವಸ್ಥೆ:

2025 ಜನವರಿ 1ರಿಂದ:

  • ಯಾವುದೇ ಬ್ಯಾಂಕ್‌ನಿಂದ ಪಿಂಚಣಿಯನ್ನು ಪಡೆಯಬಹುದಾಗಿದೆ. ಇದಕ್ಕೆ PPO ಸ್ಥಳಾಂತರಿಸಬೇಕಾದ ಅಗತ್ಯವಿಲ್ಲ.
  • ಈ ಹೊಸ PPO ಗಳಿಗೆ UAN-ಆಧಾರ್ ಲಿಂಕ್ ಮಾಡಿರುವುದು ಅಗತ್ಯವಾಗಿದೆ.
  • ಈಗ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ನವೀಕರಣ ಕೂಡ ಸುಲಭ.

📈 6. ಹೆಚ್ಚಿನ ಪಿಂಚಣಿ ನಿಯಮಗಳ ಬಗ್ಗೆ ಸ್ಪಷ್ಟನೆ:

  • EPFO ಎಲ್ಲ ಸದಸ್ಯರಿಗೆ ಸಮಾನ ರೀತಿಯಲ್ಲಿ ಪಿಂಚಣಿ ಲೆಕ್ಕಾಚಾರ ಮಾಡುವ ಮಾರ್ಗಸೂಚಿ ಬಿಡುಗಡೆ ಮಾಡಿದೆ.
  • ವೇತನ ಹೆಚ್ಚಿದ್ದರೆ ಅದಕ್ಕೆ ಅನುಗುಣವಾಗಿ ಪಿಂಚಣಿ ಲೆಕ್ಕ ಹಾಕಲಾಗುತ್ತದೆ.
  • ವಿನಾಯಿತಿ ಪಡೆದ ಟ್ರಸ್ಟುಗಳಿಗೆ ಕಠಿಣ ನಿಯಂತ್ರಣ.

🛡️ 7. EDLI ವಿಮಾ ಯೋಜನೆಯ ವಿಸ್ತರಣೆ:

  • ಸೇವೆಯ ಮಿತಿಯನ್ನು ತೆಗೆದುಹಾಕಿರುವ ಸರ್ಕಾರ, ಕನಿಷ್ಠ ವಿಮಾ ಮೊತ್ತವನ್ನು ಎಲ್ಲಾ ಸದಸ್ಯರಿಗೂ ₹5 ಲಕ್ಷಕ್ಕೆ ಏರಿಕೆ ಮಾಡಿದೆ.
  • ಆರು ತಿಂಗಳವರೆಗೆ ಪಾವತಿಸದ ರಜೆ ತೆಗೆದುಕೊಂಡರೂ ಕೂಡ ಅಂತವರಿಗೂ EDLI ಅನ್ವಯವಾಗುತ್ತದೆ.
  • ಸೇವೆಯ ಅವಧಿಯು ಕೊಂಚ ಗ್ಯಾಪ್ ಇದ್ದರೂ ಕೂಡ ವಿಮಾ ಅನ್ವಯದ ನಿಯಮವು ನಿರಂತರವಾಗಿ ಮುಂದುವರಿಯುತ್ತಿರುತ್ತದೆ.

Leave a Reply

Your email address will not be published. Required fields are marked *