ಕರ್ನಾಟಕಕ್ಕೆ ಸಂಬಂಧಿಸಿದಂತೆ ವರ್ಧನರು & ರಾಷ್ಟ್ರಕೂಟರ ಇತಿಹಾಸ

ಮೂಲ ಪುರುಷ: ಪುಷ್ಯಭೂತಿ
ಹರ್ಷವರ್ಧನ/ಶಿಲಾದಿತ್ಯ(ಉತ್ತರಪಥೇಶ್ವರ): ಸಾ.ಶ 606
ಹಿಂದೂವಾಗಿದ್ದ ಈತ, ನಂತರ ಬೌದ್ಧ ಧರ್ಮವನ್ನು ಸ್ವೀಕರಿಸಿದ.
ಮಾಂಸಾಹಾರ ಪದ್ಧತಿ ನಿಷೇಧಿಸಿದ.
ರಾಜಧಾನಿ-ಥಾನೇಶ್ವರ; ಎರಡನೇ-ಕನೌಜ್
ಅಸ್ಸಾಂನ ಹಿಂದಿನ ಹೆಸರು-ಕಾಮರೂಪ
634ರಲ್ಲಿ ಇಮ್ಮಡಿ ಪುಲಿಕೇಶಿ ಜತೆ ನರ್ಮದಾ ದಂಡೆ ಮೇಲೆ ಯುದ್ಧ ಮಾಡಿದ. ಯುದ್ಧದಲ್ಲಿ ಗೆದ್ದ ಪುಲಿಕೇಶಿ ಪರಮೇಶ್ವರ ಎನಿಸಿಕೊಂಡ.


ನರ್ಮದಾ ಕಾಳಗದಲ್ಲಿ ತನ್ನ ರಣಗಜಗಳು ಉರುಳಿ ಬೀಳುತ್ತಿದ್ದುದನ್ನು ಕಂಡ ಬಳಿಕ ಹರ್ಷವರ್ಧನನ ಹರ್ಷ ಹಾರಿ ಹೋಯಿತು-ಎಂದು ಐಹೊಳೆ ಶಾಸನದಲ್ಲಿ ಉಲ್ಲೇಖಿಸಲಾಗಿದೆ.
ರಾಷ್ಟ್ರಕೂಟ ಮತ್ತು ವರ್ಧನ ಸಾಮ್ರಾಜ್ಯದ ಗಡಿ-ನರ್ಮದಾ ನದಿ
ಕನೌಜ್ ಬೃಹತ್ ಬೌದ್ಧ ಮಹಾಸಭೆ-ಅಧ್ಯಕ್ಷ ಹ್ಯುಯಾನ್ ತ್ಸಾಂಗ್
ನಳಂದ ವಿವಿಗೆ ದಾನ, ದತ್ತಿ ನೀಡಿದ್ದಾನೆ.

ನಳಂದ ವಿವಿಯ ಸ್ಥಾಪಕ-ಗುಪ್ತದೊರೆ ಒಂದನೇ ಕುಮಾರ ಗುಪ್ತ; ಈ ವಿಶ್ವವಿದ್ಯಾಲಯಕ್ಕೆ ಹರ್ಷವರ್ಧನನು 700 ಹಳ್ಳಿಗಳ ಭೂಕಂದಾಯವನ್ನು ದತ್ತಿಯಾಗಿ ನೀಡಿದ್ದ. ಇಲ್ಲಿ ಗ್ರಂಥಾಲಯ ಪ್ರದೇಶಕ್ಕೆ ಧರ್ಮಗಂಜ್ ಎಂದು ಕರೆಯಲಾಗುತ್ತಿತ್ತು. ಈ ವಿವಿಯನ್ನು ಮಹಮ್ಮದ್ ಬಖ್ತಿಯಾರ್ ಖಿಲ್ಜಿ ನಾಶಪಡಿಸಿದ.

Leave a Reply

Your email address will not be published. Required fields are marked *