ಟಿ20 ವಿಶ್ವಕಪ್ ನ ಫೈನಲ್ ಪಂದ್ಯವು ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿದ್ದು, ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ್ದ ಟೀಮ್ ಇಂಡಿಯಾ 20 ಓವರ್ ಗಳಿಗೆ 7 ವಿಕೆಟ್ ನಷ್ಟ ಅನುಭವಿಸಿ, ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ 177 ರನ್ ಗಳ ಗುರಿ ನೀಡಿದೆ.
ತಂಡದ ಪರ, ಬ್ಯಾಟ್ ಬೀಸಿರುವ ಕೊಹ್ಲಿ, 59 ಎಸೆತಗಳಿಗೆ 76 ರನ್ ಕಲೆಹಾಕಿ ಅರ್ಧಶತಕ ದಾಟಿದ್ದರೆ, ಅಕ್ಸರ್ ಪಟೇಲ್ 31 ಎಸೆತಗಳಿಗೆ 47 ರನ್ ಪೇರಿಸಿ ಅರ್ಧಶತಕ ಮುಟ್ಟುವಲ್ಲಿ ಕೊಂಚ ಎಡವಿದ್ದಾರೆ. ಇನ್ನು ತಂಡದ ಪರ, ಶಿವಂ ದುಬೆ 27, ತಂಡದ ನಾಯಕ ರೋಹಿತ್ ಶರ್ಮಾ 9 ರನ್ ಅಷ್ಟೇ ಪೇರಿಸಿದ್ದು, ಉಳಿದ ಯಾರೊಬ್ಬರೂ ಎರಡಂಕಿ ಮುಟ್ಟಿಲ್ಲ.
ಸದ್ಯ ಟಾಸ್ ಸೋತು ಕೊನೆಯಲ್ಲಿ ಬ್ಯಾಟ್ ಮಾಡುತ್ತಿರುವ ಎದುರಾಳಿ ದಕ್ಷಿಣ ಆಫ್ರಿಕಾ ತಂಡ 13 ಓವರ್ ಗಳಲ್ಲಿ 4 ವಿಕೆಟ್ ನಷ್ಟ ಅನುಭವಿಸಿ 109 ರನ್ ಪೇರಿಸಿದ್ದು, ಗೆಲುವಿನ ನಗೆ ಬೀರಲು 42 ಎಸೆತಕ್ಕೆ 68 ರನ್ ಕಲೆಹಾಕಬೇಕಿದೆ.