ಕೋಲಾರ & ತುಮಕೂರು: ರಾಜ್ಯದಲ್ಲಿ ಇಂದು ಎರಡು ಜೋಡಿ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೋಲಾರದ ಕುಲ್ವಂಜಲಿ ಎಂಬಲ್ಲಿ ಆಟೋ ಚಾಲಕ ಲಕ್ಷ್ಮಣ ಮತ್ತು ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕಿ ಮಾಲಾಶ್ರೀ ಮರವೊಂದಕ್ಕೆ ಜತೆಯಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ದಂಪತಿಗೆ ಸಾವಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
ಇನ್ನು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಳೇಪಾಳ್ಯ ಗ್ರಾಮದ ನಿವಾಸಿಗಳಾದ ಮಧು ನಾಯಕ ಹಾಗೂ ಚರಿತಾ ಬಾಯಿ ದಂಪತಿ ಕೂಡ ನೇಣಿಗೆ ಕೊರಳೊಡ್ಡಿ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ. ಇನ್ನು ಈ ಜೋಡಿಯ ಸಾವಿಗೆ ಹಣಕಾಸು ಸಾಲ ನೀಡಿದ್ದವರ ಕಿರುಕುಳವೇ ಕಾರಣ ಎಂದು ಹೇಳಲಾಗುತ್ತಿದೆ.
ಮೊದಲ ಪ್ರಕರಣ ಸಂಬಂಧ ವೇಮಗಲ್ ಹಾಗೂ ಎರಡನೇ ಪ್ರಕರಣ ಸಂಬಂಧ ತಿಪಟೂರು ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಪರಿಶೀಲನೆ ಮುಂದುವರಿಸಿದ್ದಾರೆ.