>ತನ್ನನ್ನು ತಾನೇ ಸುಲ್ತಾನ್ ಎಂದು ಘೋಷಿಸಿಕೊಂಡ.
>ಈತನನ್ನು ಟಿಪ್ಪು ಸಾಹಿಬ್ ಎಂದೂ ಕರೆಯಲಾಗುತ್ತಿತ್ತು.
>ಜನ್ಮಸ್ಥಳ-ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ.
>ತಂದೆ ಹೈದರ್ ಅಲಿ, ತಾಯಿ ಫಾತಿಮಾ.
>ಬಿರುದು-ಶೇರ್-ಎ-ಮೈಸೂರ್(ಮೈಸೂರ ಹುಲಿ).
>15ನೇ ವಯಸ್ಸಿನಲ್ಲಿ ತನ್ನ ತಂದೆ ಹೈದರಾಲಿ ಜೊತೆ ಪ್ರಥಮ ಮೈಸೂರು ಯುದ್ಧದಲ್ಲಿ ಭಾಗವಹಿಸಿದ್ದ.
>ದೊಡ್ಡ ಸೇನಾ ತುಕಡಿಯ ನಾಯಕನಾಗಿ 1782ರ ಫೆಬ್ರವರಿಯಲ್ಲಿ ಆಂಗ್ಲ ಸೇನಾ ನಾಯಕ ಬ್ರಾತ್‍ವೈಟ್‍ನನ್ನು ಸೋಲಿಸಿದ.
>ಅನೇಕ ಹಿಂದೂ ದೇವಾಲಯಗಳಿಗೆ ದಾನ ದತ್ತಿಗಳನ್ನು ಕೊಟ್ಟಿದ್ದ.
>ಎರಡನೇ ಆಂಗ್ಲೋ ಮೈಸೂರು ಯುದ್ಧವು ಮಂಗಳೂರು ಒಪ್ಪಂದದೊಂದಿಗೆ ಅಂತ್ಯವಾಯಿತು.
>ಮಂಗಳೂರು ಒಪ್ಪಂದ-ಗೆದ್ದಿದ್ದ ಪ್ರದೇಶ ಹಿಂದಿರುಗಿಸುವುದು & ಖೈದಿಗಳನ್ನು ಬಿಡುಗಡೆಗೊಳಿಸುವುದು.
>ಮೂರನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪುಗೆ ಸೋಲು, ಶ್ರೀರಂಗಪಟ್ಟಣ ಒಪ್ಪಂದ.
>ಶ್ರೀರಂಗಪಟ್ಟಣ ಒಪ್ಪಂದ- 330 ಲಕ್ಷ ರೂ. ಪರಿಹಾರ ನೀಡಿದ. ಈ ಹಣ ಕೊಡುವವರೆಗೆ ತನ್ನ ಇಬ್ಬರು ಮಕ್ಕಳನ್ನು ಬ್ರಿಟೀಷರಿಗೆ ಒತ್ತೆ ಇಟ್ಟ.
>ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಸೋಲು & ಬ್ರಿಟೀಷರನ್ನು ಭಾರತದಿಂದ ಹೊರ ದಬ್ಬಲು ಮಾಡಿದ ತಂತ್ರವೇ ನಾಲ್ಕನೇ ಯುದ್ಧಕ್ಕೆ ಕಾರಣ.
>ನಾಲ್ಕನೇ ಯುದ್ಧದಲ್ಲೂ ಸೋತು ಟಿಪ್ಪು ಹತನಾದ
>ಮೈಸೂರನ್ನು ಗೆದ್ದಿದ್ದ ಬ್ರಿಟೀಷರು ಒಡೆಯರ್ ಅವರಿಗೆ ಹಸ್ತಾಂತರಿಸಿದರು.
>ಶ್ರೀರಂಗಪಟ್ಟಣದ ಬೇಸಿಗೆ ಅರಮನೆಯೇ-ದರಿಯಾ ದೌಲತ್
>ರೇಷ್ಮೆ ಬೆಳೆಯನ್ನು ವ್ಯಾಪಕವಾಗಿ ಜನಪ್ರಿಯಗೊಳಿಸಿದ.
>ಫ್ರೆಂಚರ ಸಹಾಯದೊಂದಿಗೆ ಸೈನ್ಯವನ್ನು ಆಧುನೀಕರಣಗೊಳಿಸಿದ.
>ಶೃಂಗೇರಿ ಮಠಕ್ಕೆ ದೇಣಿಗೆ ನೀಡುತ್ತಿದ್ದ.
>ಶ್ರೀರಂಗಪಟ್ಟಣ & ಬೆಂಗಳೂರಿನಲ್ಲಿ ಟಂಕ ಶಾಲೆ ತೆರೆದ.
>ಯುದ್ಧದಲ್ಲಿ ರಾಕೆಟ್ ತಂತ್ರಜ್ಞಾನ ಪರಿಚಯಿಸಿದ ಮೊದಲ ವ್ಯಕ್ತಿ ಟಿಪ್ಪು.
>ಕುಣಿಗಲ್‍ನಲ್ಲಿ ಕುದುರೆ ಫಾರಂ ಸ್ಥಾಪಿಸಿದ.
>ಕೇರಳದ ಮಲಬಾರಿನ ಹೆಣ್ಣು ಮಕ್ಕಳ ಮಾನ ಮುಚ್ಚಲು ರೇಷ್ಮೆ ವಸ್ತ್ರಗಳನ್ನೇ ದಾನ ಮಾಡಿ, ಸ್ತನ ತೆರಿಗೆಯನ್ನು ರದ್ದುಗೊಳಿಸಿದ.
>ಭೂ ಕಂದಾಯ ನೀತಿಯನ್ನು ಜಾರಿಗೆ ತಂದ.
>ಬ್ರಿಟಿಷರೊಂದಿಗೆ ಹೋರಾಡಲು ನೆಪೋಲಿಯನ್ನನ ನೆರವನ್ನು ಪಡೆಯಲು ಪ್ರಯತ್ನಿಸಿ ವಿಫಲನಾದ.