ನವದೆಹಲಿ: ಎಸ್ಸೆಸ್ಸೆಲ್ಸಿ ಮುಗಿಸಿ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ನೇಮಕಾತಿ ಮಾಡುವ ಸ್ಟಾಫ್ ಸೆಲೆಕ್ಷನ್ ಕಮಿಷನ್(Staff Selection Commission) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ(SSC Recruitment 2024). ದೇಶಾದ್ಯಂತ ಬರೋಬ್ಬರಿ 8,326 ಎಂಟಿಎಸ್, ಹವಾಲ್ದಾರ್ ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಆನ್‌ಲೈನ್ ಮುಖೇನ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಜುಲೈ 31 ಕೊನೆ ದಿನ.
ವಿದ್ಯಾರ್ಹತೆ:
ಮಲ್ಟಿ ಟಾಸ್ಕಿಂಗ್ (Non technical) ಸ್ಟಾಫ್ – 4,887 & ಸಿಬಿಐಸಿ & ಸಿಬಿಎನ್‌ನಲ್ಲಿ ಹವಾಲ್ದಾರ್ ಹುದ್ದೆಗಳು – 3,439
ಅಧಿಸೂಚನೆ ಪ್ರಕಾರ ಯಾವುದೇ ಅಂಗೀಕೃತ ಶಿಕ್ಷಣ ಮಂಡಳಿಯಿಂದ ಎಸ್ಸೆಸ್ಸೆಲ್ಸಿ ಅಥವಾ 10ನೇ ತರಗತಿ ತೇರ್ಗಡೆಯಾಗಿರಬೇಕು.
ವಯೋಮಿತಿ:
ಎಂಟಿಎಸ್ ಹುದ್ದೆಗೆ ಕನಿಷ್ಠ 18, ಗರಿಷ್ಠ 25 ವರ್ಷ ವಯಸ್ಸಾಗಿರಬೇಕು.
ಹವಾಲ್ದಾರ್ ಹುದ್ದೆಗೆ 18-27 ವಯಸ್ಸಿನವರಾಗಿರಬೇಕು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿ ಸಡಿಲಿಕೆಯೂ ಇರಲಿದೆ.
ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ/ಪಂಗಡ/ವಿಕಲಾಂಗಚೇತನ/ಮಹಿಳೆ/ಇಎಸ್‌ಎಂ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಉಳಿದಂತೆ ಸಾಮಾನ್ಯ/ಹಿಂದುಳಿದ ವರ್ಗಗಳ ಅಭ್ಯರ್ಥಿಗಳು 100 ರೂ. ಶುಲ್ಕ ಪಾವತಿಸಬೇಕು.
ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ, ಪ್ರಾಥಮಿಕ ಅರ್ಹತಾ ಪರೀಕ್ಷೆ(Preliminary Eligibility Test), ದೇಹದಾರಿದ್ಧ್ಯತಾ ಪರೀಕ್ಷೆ(Physical Standard Test) ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಮಾಸಿಕ ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 18,000 ರೂ. – 22,000 ರೂ.ವರೆಗೆ ವೇತನ ದೊರೆಯಲಿದೆ.
ಇನ್ನು ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಉಡುಪಿ ಸೇರಿ ಇತರೆಡೆ ಪರೀಕ್ಷೆ ಬರೆಯಬಹುದಾಗಿದೆ.