ಶಿಕ್ಷಕಿ ಕುಕೃತ್ಯಕ್ಕೆ ಬೆಚ್ಚಿ ಶಾಲೆಗೆ ಬೀಗ ಜಡಿದ ಪೋಷಕರು!

ಗದಗ: ಗಜೇಂದ್ರಗಡದ ಕಾಲಕಾಲೇಶ್ವರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಯ ಶಿಕ್ಷಕಿಯೊಬ್ಬರು ತನ್ನ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿಸಿದ್ದಾರೆ.

ಆರೋಪಿ ಶಿಕ್ಷಕಿಯನ್ನು ರೇಣುಕಾ ಎಂದು ಹೇಳಲಾಗಿದ್ದು, ಮಗುವಿನ ಪೋಷಕರು ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ್ದಾರೆ. ಅಷ್ಟೇ ಅಲ್ಲ, ವಿದ್ಯಾರ್ಥಿಗೆ ಬೆಂಬಲ ನೀಡಲು ಸಹಪಾಠಿಗಳೆಲ್ಲರೂ ತರಗತಿ ಬಹಿಷ್ಕರಿಸಿದ್ದಾರೆ. ಈ ವೇಳೆಯಲ್ಲಿ ತಪ್ಪಿತಸ್ಥ ಶಿಕ್ಷಕಿಯನ್ನು ಅಮಾನತು ಮಾಡಬೇಕು. ಇಲ್ಲವಾದರೆ ಬೇರೆ ಶಾಲೆಗೆ ವರ್ಗಾಯಿಸಬೇಕೆಂದು ಒತ್ತಾಯಿಸಲಾಗಿದೆ.

ಶಿಕ್ಷಕಿಯದ್ದು ಇದು ಮೊದಲನೇ ಪ್ರಕರಣವಲ್ಲ. ಈ ಹಿಂದೆಯೂ ಎಸಗಿದ್ದರು. ಈ ಬಗ್ಗೆ ಸಾಕಷ್ಟು ಬಾರಿ BEO ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಡಿಡಿಪಿಐ ಸ್ಥಳಕ್ಕೆ‌ ಆಗಮಿಸಬೇಕೆಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ.

Leave a Reply

Your email address will not be published. Required fields are marked *