ಬಾರ್ಬಡೋಸ್: ಬಹು ನಿರೀಕ್ಷೆಯ, ಹೈವೋಲ್ಟೇಜ್ ಪಂದ್ಯವಾದ ಟಿ20 ವಿಶ್ವಕಪ್ ಫೈನಲ್ ನಲ್ಲಿ ಟೀಂ ಇಂಡಿಯಾ ಕೊನೆಗೂ ಗೆಲುವಿನ ನಗೆ ಬೀರಿದೆ.

ಹೌದು, ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ್ದ ಭಾರತ ತಂಡಕ್ಕೆ ಆರಂಭಿಕ ಹಿನ್ನಡೆ ಉಂಟಾಗಿತ್ತು. ಆದರೂ ಕೊಹ್ಲಿ ಮತ್ತು ಅಕ್ಸರ್ ಪಟೇಲ್ ನೆರವಿನಿಂದ ತಂಡ ಕೊಂಚ ಚೇತರಿಸಿಕೊಂಡಿತ್ತು. ಆದರೆ ಹೆಚ್ಚು ಸ್ಕೋರ್ ಮಾಡಲು ತಂಡಕ್ಕೆ ಸಾಧ್ಯವಾಗಿರಲಿಲ್ಲ. ಪರಿಣಾಮ ದಕ್ಷಿಣ ಆಫ್ರಿಕಾ ಸುಲಭವಾಗಿ ಗುರಿ ಮುಟ್ಟಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅಂತಿಮವಾಗಿ ನಾಲ್ಕು ಓವರ್ ಗಳಿರುವಾಗ ದಕ್ಷಿಣ ಆಫ್ರಿಕಾ ಪ್ರಯಾಸದ ಸಾಧನೆ ತೋರಿತು.
ಪರಿಣಾಮ ಭಾರತ ನೀಡಿದ್ದ 177 ರನ್ ಗಳ ಗುರಿ ಬೆನ್ನಟ್ಟಿದರೂ ಗುರಿ ಮುಟ್ಟಲಾಗದೆ(169/8) ಸೋಲೊಪ್ಪಿಕೊಂಡಿತು. ಪಟ್ಟ ಶ್ರಮಕ್ಕೆ ತಕ್ಕ ಫಲ ಪಡೆದ ಟೀಂ ಇಂಡಿಯಾ ಆಟಗಾರರು ಮೈದಾನದಲ್ಲೇ ಕುಣಿದು ಕುಪ್ಪಳಿಸಿದರು. ಅಂದಹಾಗೆ ಟೀಂ ಇಂಡಿಯಾ ಎದುರಾಳಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ ಗಳ ಭರ್ಜರಿ ಜಯ ದಾಖಲಿಸಿದೆ.