>ಜುಲೈ 1: SBI ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ ಆಗಲಿದ್ದು,
>ICICI ಬ್ಯಾಂಕ್ ಕೂಡ ತನ್ನ ಕ್ರೆಡಿಟ್ ಕಾರ್ಡ್ ಶುಲ್ಕ ಏರಿಸಿದೆ(ಎಮರಾಲ್ಡ್ ಪ್ರೈವೇಟ್ ಮೆಟಲ್ ಕ್ರೆಡಿಟ್ ಕಾರ್ಡ್ ಹೊರತುಪಡಿಸಿ). ರಿಪ್ಲೇಸ್‌ಮೆಂಟ್ ಶುಲ್ಕವನ್ನು ₹100 ರಿಂದ ₹200 ಕ್ಕೆ ಹೆಚ್ಚಿಸಲಾಗಿದೆ. ಇದಲ್ಲದೆ ಚೆಕ್/ನಗದು ಪಿಕ್ ಅಪ್‌ನ ಪ್ರತೀ ಪಿಕ್‌ಅಪ್ ಮೇಲೆ ₹100, ಚಾರ್ಗ್ ಸ್ಲಿಪ್ ರಿಕ್ವೆಸ್ಟ್‌ಗೆ ₹100, ಡ್ರಾಫ್ಟ್ ಮೌಲ್ಯದ ಮೇಲೆ ಶೇ.3ರಷ್ಟು ಡಯಲ್-ಎ-ಡ್ರಾಫ್ಟ್ ವಹಿವಾಟು ಶುಲ್ಕ(ಕನಿಷ್ಠ ₹300 ), ಚೆಕ್ ಮೌಲ್ಯದ ಮೇಲೆ 1% ಔಟ್‌ಸ್ಟೇಷನ್ ಚೆಕ್ ಪ್ರೊಸೆಸಿಂಗ್ ಶುಲ್ಕ ವಿಧಿಸಲಿದೆ.>ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಆಕ್ಸಿಸ್ ಬ್ಯಾಂಕ್‌ಗೆ ವರ್ಗಾಯಿಸಿಕೊಳ್ಳಲು ಜುಲೈ 15 ಕೊನೆ ದಿನ.
>ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಸಂಸ್ಥೆಯು ಶೂನ್ಯ ಬ್ಯಾಲೆನ್ಸ್ (NIL balances) ಹೊಂದಿರುವ ತನ್ನ ನಿಷ್ಕ್ರಿಯ ವ್ಯಾಲೆಟ್‌ಗಳನ್ನು ಜುಲೈ 20ರ ನಂತರ ಸ್ಥಗಿತಗೊಳಿಸಲಿದೆ. ಒಂದು ವರ್ಷಕ್ಕೂ ಹೆಚ್ಚು ದಿನಗಳಿಂದ ವಹಿವಾಟು ನಡೆಸದ ವ್ಯಾಲೆಟ್‌ಗಳನ್ನೂ ಮುಚ್ಚುತ್ತಿರುವುದು ಗಮನಾರ್ಹ. ಈ ಕುರಿತು ಸಂಬಂಧಿತ ಬಳಕೆದಾರರಿಗೆ ಮೆಸೇಜ್ ಕಳುಹಿಸಲಾಗಿದ್ದು, 30 ದಿನಗಳ ನೋಟಿಸ್ ಪೀರಿಯಡ್ ನೀಡಲಾಗಿದೆ.
>2023-24ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕಡೆ ದಿನ. ಈ ಗಡುವಿನೊಳಗೆ ಐಟಿಆರ್ ಸಲ್ಲಿಸಲು ಸಾಧ್ಯವಾಗದವರು ಡಿ.31ರೊಳಗೆ ವಿಳಂಬ ಐಟಿ ರಿಟರ್ನ್ ಅರ್ಜಿಯನ್ನು ಸಲ್ಲಿಸಬಹುದಾಗಿದೆ.