ಮೈಸೂರು: ತಮ್ಮ ಪತ್ನಿ ಪಾರ್ವತಿ ಅವರಿಗೆ ಮುಡಾ ನಿವೇಶನ ಹಂಚಿಕೆ ಮಾಡಿರುವ ಸಂಬಂಧ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ನನ್ನ ಪತ್ನಿಗೆ ನನ್ನ ಬಾಮೈದಾ ಮಲ್ಲಿಕಾರ್ಜುನ 1997ರಲ್ಲಿ ಹರಿಶಿನ ಕುಂಕುಮ ಎಂಬ ಅರ್ಥದಲ್ಲಿ 3 ಎಕರೆ 16 ಗುಂಟೆ ಜಮೀನನ್ನು ನೀಡಿದ್ದ. ಡಿನೋಟಿಫಿಕೇಶನ್ ಮಾಡಿದ್ದ ಸರ್ಕಾರ, ಇದನ್ನು ವಶಪಡಿಸಿಕೊಂಡಿತ್ತು. ಇದಕ್ಕೆ ಬದಲಾಗಿ 2021ರ ಅಕ್ಟೋಬರ್ ನಲ್ಲಿ 50:50 ಅಳತೆಯ ನಿವೇಶನವನ್ನು ಸರ್ಕಾರವೇ ನೀಡಿತ್ತು. ಅದು ಕೂಡ ಬಿಜೆಪಿ ಸರ್ಕಾರದ ಅವಧಿ ವೇಳೆಯೇ ನೀಡಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತನಿಖೆಗೆ ಆದೇಶಿಸಿರುವುದು ತಿಳಿದಿರುವ ವಿಚಾರವೇ.