ಲಿಂಗಾಯತ, ಒಕ್ಕಲಿಗ ಸಮುದಾಯದ ನಾಯಕರಿಗೆ ಸಿಎಂ ಪಟ್ಟ ಬಿಟ್ಟುಕೊಡಬೇಕೆಂಬ ಕೂಗು ಕೇಳಿಬರುತ್ತಿರುವ ನಡುವೆ ಸಚಿವ ಸತೀಶ್ ಜಾರಕಿಹೊಳಿ(Sathish jarakiholi) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿ, ಚುನಾವಣೆ ನಡೆದ ಆರಂಭದಲ್ಲಿ ಸಿಎಂ, ಡಿಸಿಎಂ ಯಾರಾಗಬೇಕೆಂಬ ಬಗ್ಗೆ ಕೂಗು ಕೇಳಿಬಂದಿತ್ತು. ಆದರೆ ಇದೀಗ ಆ ಸ್ಥಾನಗಳನ್ನು ಭಾರ್ತಿ ಮಾಡಿದ್ದು, ಖಾಲಿ ಇಲ್ಲ. ಹಾಗಾಗಿ ಅವುಗಳು ಸದ್ಯಕ್ಕೆ ಮುಗಿದ ಅಧ್ಯಾಯ. ಈ ಬಗ್ಗೆ ಪಕ್ಷದ ಹೈಕಮಾಂಡ್ ಕೈಗೊಳ್ಳುವ ತೀರ್ಮಾನವೇ ಅಂತಿಮ ಎಂದಿದ್ದಾರೆ.
ಈ ವೇಳೆ, 2028ರಲ್ಲಿ ನಾನೇ ಸಿಎಂ ಆಗಬೇಕೆಂಬ ಅಭಿಲಾಷೆ ಇದೆ. ಆ ಸಮಯದಲ್ಲಿ ಸಂದರ್ಭ ಹೇಗಿರಲಿದೆ ಎಂಬುದನ್ನು ನೋಡಿಕೊಂಡು ಸಿಎಂ ಸ್ಥಾನಕ್ಕೆ ಬೇಡಿಕೆ ಇಡುತ್ತೇನೆ ಎಂದಿದ್ದಾರೆ. ಈ ಮುಖೇನ ಎರಡೂವರೆ ವರ್ಷದ ಸಿಎಂ ಸ್ಥಾನದ ಹಂಚಿಕೆ ವಿಫಲವಾದರೆ ಮುಂದೆ ನಾನೇ ಸಿಎಂ ಗಾಡಿ ಏರಬೇಕು ಎಂದುಕೊಂಡಿರುವ ಡಿಸಿಎಂ ಡಿಕೆಶಿಗೆ ಸತೀಶ್ ಜಾರಕಿಹೊಳಿ ಪೈಪೋಟಿ ಕೊಡುವ ಎಚ್ಚರಿಕೆ ನೀಡಿದ್ದಾರೆ.