
ಮುಂಬೈ ಮೂಲದ ಇಬ್ಬರು ಮಹಿಳೆಯರು ಹರಿಯಾಣದ ಗುರುಗ್ರಾಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹದ ಬಗ್ಗೆ ಗಂಡಿನ ಪಾತ್ರಧಾರಿ ಅಂಜು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ಈ ವೇಳೆ, ನಾನು ಕಲಾವಿದೆ. ನನ್ನ ಮೇಕಪ್ ಆರ್ಟಿಸ್ಟ್ ಆಗಿ ಕವಿತಾ ಬಂದಿದ್ದರು. ಆಗ ನನ್ನೊಂದಿಗೆ 22 ದಿನ ಇದ್ದರು. ಆ ವೇಳೆಯಲ್ಲಿ ಅವರು ನನ್ನನ್ನು ತುಂಬಾ ಕೇರ್ ಮಾಡುತ್ತಿದ್ದರು. ಅದರಿಂದಲೇ ನಮ್ಮ ತಾಯಿಗೂ ಇಷ್ಟವಾಗಿದ್ದರು. ಬಳಿಕ ನಾಲ್ಕು ವರ್ಷಗಳ ಕಾಲ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದು, ಒಬ್ಬರನ್ನೊಬ್ಬರು ಅರಿತುಕೊಂಡೆವು ಎಂದಿದ್ದಾರೆ.

ನಂತರದ ದಿನಗಳಲ್ಲಿ ಕುಟುಂಬಸ್ಥರೊಂದಿಗೆ ಮದುವೆ ಬಗ್ಗೆ ಮಾತುಕತೆ ನಡೆಸಿದೆವು. ಆದರೆ ಸಲಿಂಗ ವಿವಾಹವು ವಿದೇಶಗಳಲ್ಲಿ ಕಾನೂನುಬದ್ಧವಾಗಿದೆಯಾದರೂ ಭಾರತದಲ್ಲಿ ಸಲಿಂಗಿ ವಿವಾಹಕ್ಕೆ ಮಾನ್ಯತೆ ಇಲ್ಲ.

ಈ ಕಾರಣದಿಂದ ವಕೀಲರ ಮಾರ್ಗದರ್ಶನ ಪಡೆದೆವು. ಆಗ ನಿಮ್ಮ ಮದುವೆಗೆ ಕಾನೂನಿನ ಮಾನ್ಯತೆ ಇಲ್ಲ. ಬದಲಾಗಿ ಲಿವಿಂಗ್ ರಿಲೇಷನ್ ಶಿಪ್ ನ ಪ್ರಮಾಣಪತ್ರ ಪಡೆಯಬಹುದಾಗಿದೆ ಎಂದು ಸಲಹೆ ನೀಡಿದರು ಎಂದ ಅವರು, ನಾವು ಮದುವೆ ಆಗಿ ತುಂಬಾ ಖುಷಿಯಾಗಿದ್ದೇವೆ. ಆದರೂ ಸುತ್ತಮುತ್ತಲಿನ ಕೆಲವರು ನಮ್ಮ ಬಗ್ಗೆ ನಮ್ಮ ಬೆನ್ನ ಹಿಂದೆಯೇ ಮಾತನಾಡುತ್ತಿದ್ದು, ಅದರಿಂದ ತುಂಬಾ ನೋವನ್ನು ಅನುಭವಿಸುತ್ತಿದ್ದೇವೆ ಎಂದಿದ್ದಾರೆ.