ಬೆಂಗಳೂರು: ನಗರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಓರ್ವ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಓರ್ವ ಮಹಿಳಾ ಪಿಎಸ್ಐ ಇಬ್ಬರೂ ಠಾಣೆಯ ಲಾಕಪ್ ನಲ್ಲೇ ಲೈಂಗಿಕ ಕ್ರಿಯೆ ನಡೆಸಿದ್ದಾರೆಂದು ಖ್ಯಾತ, ವಿವಾದಿತ ವಕೀಲ ಜಗದೀಶ್ ಮಹಾದೇವ್ ಆರೋಪಿಸಿದ್ದಾರೆ.
ವಿಡಿಯೋವೊಂದರಲ್ಲಿ ಮಾತನಾಡುತ್ತಾ, ರಾಜ್ಯದ ಮಾಜಿ ಸಿಎಂ ಒಬ್ಬರು ಆಂಧ್ರ ಪ್ರದೇಶದ 200 ಮಂದಿ ಯುವತಿಯರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಅಷ್ಟೇ ಅಲ್ಲ, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ಮಂದಿ ಅಧಿಕಾರಿಗಳು ರಾಸಲೀಲೆ ನಡೆಸಿದ್ದು, ಒಟ್ಟು 9,000 ವಿಡಿಯೋಗಳು ನನ್ನ ಬಳಿ ಇವೆ ಎಂದು ಹೇಳಿಕೆ ನೀಡಿದ್ದಾರೆ.
ಹೋರಾಟ ಮಾಡುವ ನನ್ನನ್ನು ಕೆಲ ಮಾಧ್ಯಮಗಳು ಕುಟುಕುತ್ತಿವೆ. ಆದರೆ ರಾಸಲೀಲೆಯಲ್ಲಿ ತೊಡಗಿರುವ ರಾಜಕಾರಣಿಗಳು, ಸ್ವಾಮೀಜಿಗಳು, ಪೊಲೀಸರ ಅನಾಚಾರಗಳ ಬಗ್ಗೆ ಯಾವೊಂದು ಮಾಧ್ಯಮವೂ ತುಟಿ ಬಿಚ್ಚುತ್ತಿಲ್ಲ. ಆ ತಾಕತ್ತು ಇಂದಿನ ಮಾಧ್ಯಮಗಳಿಗೆ ಇಲ್ಲವೆಂದು ಕಿಡಿಕಾರಿದ್ದಾರೆ.