ಬೆದರಿಕೆ.. ದರ್ಶನ್ ಅಭಿಮಾನಿ ಬಂಧನ

ಬೆಂಗಳೂರು: ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆಂದು ಆರೋಪಿಸಿ ನಿರ್ಮಾಪಕರು ನೀಡಿದ್ದ ದೂರಿನ ಸಂಬಂಧ ವಿಚಾರಣೆ ನಡೆಸುತ್ತಿದ್ದ ಬಸವೇಶ್ವರನಗರ ಠಾಣೆಯ ಪೊಲೀಸರು ಇಂದು ಆರೋಪಿಯನ್ನು ಬಂಧಿಸಿದ್ದಾರೆ.

ಚೇತನ್ ಬಂಧಿತ ಆರೋಪಿಯಾಗಿದ್ದು, ನಟ ದರ್ಶನ್ ಅಭಿಮಾನಿಯಾಗಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಹತ್ಯೆ ಕೇಸ್ ನಲ್ಲಿ ಜೈಲುಪಾಲಾಗಿರುವುದನ್ನು ಕಂಡು ಸಂಭ್ರಮಿಸಬೇಡ. ಬಾಸ್ ಹೊರ ಬಂದ ಬಳಿಕ ನೋಡಿಕೊಳ್ಳುತ್ತೇವೆಂದು ಬೆದರಿಕೆ ಹಾಕಿದ್ದ.

ಈ ಕುರಿತು ನಿರ್ಮಾಪಕ ಉಮಾಪತಿ ಅವರು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 504 ಮತ್ತು 506ರ ಅಡಿ ಆರೋಪಿಯನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *