ದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿ ಇಂದಿಗೆ 50 ವರ್ಷಗಳು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಅಂದಿನ ಸ್ಥಿತಿಯನ್ನು ಟೀಕಿಸಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಇಂದು ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಎಲ್ಲಾ ಮಹಾ ಪುರುಷರು ಮತ್ತು ಮಹಿಳೆಯರಿಗೆ ಗೌರವ ಸಲ್ಲಿಸುವ ದಿನವಾಗಿದೆ. ಕಾಂಗ್ರೆಸ್ ಪಕ್ಷವು ಮೂಲಭೂತ ಸ್ವಾತಂತ್ರ್ಯಗಳನ್ನು ಹೇಗೆ ಬುಡಮೇಲು ಮಾಡಿತು ಮತ್ತು ಪ್ರತಿಯೊಬ್ಬ ಭಾರತೀಯನು ಬಹಳವಾಗಿ ಗೌರವಿಸುವ ಭಾರತದ ಸಂವಿಧಾನವನ್ನು ಕಾಂಗ್ರೆಸ್ ಹೇಗೆ ತುಳಿಯಿತು ಎಂಬ ಕರಾಳ ದಿನಗಳನ್ನು ನೆನಪಿಸುತ್ತದೆ. ತುರ್ತು ಪರಿಸ್ಥಿತಿಯನ್ನು ಹೇರಲು ಕಾರಣವಾದ ಮನಸ್ಥಿತಿ ಅದೇ ಪಕ್ಷದಲ್ಲಿ ಹೆಚ್ಚು ಜೀವಂತವಾಗಿದೆ. ಸಂವಿಧಾನದ ಮೇಲೆ ತೋರಿದ ಅಗೌರವವನ್ನು ಅವರು ತಮ್ಮ ಟೋಕನಿಸಂ ಮುಖೇನ ಮರೆಮಾಚುತ್ತಾರೆ. ಆದರೆ ದೇಶದ ಜನ ಅವರ ವರ್ತನೆ ನೋಡಿದ್ದಾರೆ. ಹಾಗಾಗಿಯೇ ಸಮಯ ಬಂದಾಗಲೆಲ್ಲಾ ಅವರನ್ನು ಮತ್ತೆ ಮತ್ತೆ ತಿರಸ್ಕರಿಸುತ್ತಿದ್ದಾರೆ ಎಂದು ಕುಟುಕಿದ್ದಾರೆ.