ಬೆಂಗಳೂರು: ಹೆಬ್ಬಾಳದ ಸಿಂಧಿ ಹೈಸ್ಕೂಲ್ ವಿರುದ್ಧ ಮಕ್ಕಳ ಪೋಷಕರು ಇಂದು ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಏಳನೇ ಮಕ್ಕಳಿಗೆ ನಟಿ ತಮನ್ನಾ ಬಾಟಿಯಾ ಅವರ ಬಗ್ಗೆ ಪಾಠ ಮಾಡಲಾಗಿದೆ. ಇದು ಮಕ್ಕಳ ಕಲಿಕೆ ಮೇಲೆ ಗಾಢ ಪ್ರಭಾವ ಬೀರಬಹುದು ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಶಾಲಾ ಆಡಳಿತ ಮಂಡಳಿ ಸಿಂಧಿ ಸಂಕೃತಿಯ ಭಾಗವಾಗಿ ನಟಿಯನ್ನು ಉದಾಹರಣೆ ನೀಡಲಾಗಿತ್ತೆಂದು ಸಮರ್ಥಿಸಿಕೊಂಡಿದೆ.
ಇನ್ನು ಪ್ರಕರಣವು ಸದ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಮುಂದಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.