ಇದು ನೂತನ ಉತ್ತರಾಧಿಕಾರಿಯ ಪ್ರೇಮಕಾವ್ಯ

ದೆಹಲಿ: ರಾಹುಲ್ ದ್ರಾವಿಡ್ ನಂತರ ಟೀಂ ಇಂಡಿಯಾದ ತರಬೇತುದಾರರಾಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ನೇಮಕಗೊಂಡಿದ್ದಾರೆ. ಈ ನಡುವೆ ಅವರ ಪ್ರೇಮ ಸಂಗತಿಗಳು ಅಭಿಮಾನಿ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ.

ಈ ಕುರಿತು ಅವರ ಪತ್ನಿ ನತಾಶಾ ಜೈನ್ ಪ್ರತಿಕ್ರಿಯಿಸಿದ್ದಾರೆ. ನಾವು ಆರಂಭಿಕವಾಗಿ ಸ್ನೇಹಿತರ ಪಾರ್ಟಿಯೊಂದರಲ್ಲಿ ಭೇಟಿಯಾಗಿದ್ದೆವು. ಆಗಲೇ ನಮ್ಮಿಬ್ಬರ ಪರಿಚಯವಾಗಿತ್ತು. ನಂತರ ಮೂರು ವರ್ಷಗಳ ಕಾಲ ಸ್ನೇಹಿತರಾಗಿಯೇ ಇದ್ದೆವು. ಇದು ಒಬ್ಬರನ್ನೊಬ್ಬರು ಪರಸ್ಪರವಾಗಿ ಅರ್ಥ ಮಾಡಿಕೊಳ್ಳಲು ಸಹಾಯವಾಯಿತು. ಪ್ರೇಮ ಅಂಕುರಿಸಿದಾಗ ೨೦೧೧ರ ವಿಶ್ವಕಪ್ ಬಳಿಕವೇ ಮದುವೆ ಎಂದು ಗಂಭೀರ್ ಹೇಳಿದರು. ಇದಕ್ಕೆ ನಾನು ಖುಷಿಯಿಂದಲೇ ಒಪ್ಪಿಕೊಂಡೆ. ನಮ್ಮ ತಂದೆ-ಅವರ ತಂದೆ ಕಳೆದ ಮೂವತ್ತು ವರ್ಷಗಳಿಂದ ಸ್ನೇಹಿತರಾಗಿದ್ದಿದ್ದರಿಂದ ನಮ್ಮ ಮದುವೆಗೆ ಅದೇ-ತಡೆಗಳೇನೂ ಬರಲಿಲ್ಲ.

ಇನ್ನು ಮದುವೆಯಾದ ನಂತರ ಮನೆಯಲ್ಲಿ ವೃತ್ತಿ ಜೀವನ ಅಥವಾ ರಾಜಕೀಯದ ಬಗ್ಗೆ ಇಬ್ಬರೂ ಚರ್ಚಿಸುತ್ತಿರಲಿಲ್ಲ. ಮನೆಯಲ್ಲಿ ಇತರೆ ವಿಚಾರಗಳನ್ನು ಚರ್ಚಿಸುತ್ತಾ ಕುಟುಂಬದ ಇತರೆ ಸದಸ್ಯರೊಂದಿಗೂ ಸಂತೋಷವಾಗಿರಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಸದ್ಯ ಇಬ್ಬರು ಹೆಣ್ಣು ಮಕ್ಕಳೊಂದಿಗೆ ನಮ್ಮ ಜೀವನ ಸುಗಮವಾಗಿ ಸಾಗುತ್ತಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *