ನಾಲ್ವಡಿ ಕೃಷ್ಣರಾಜ ಒಡೆಯರ್(1902-1940):
>ತಾಯಿ-ಕೆಂಪ ನಂಜಮ್ಮಣ್ಣಿ.
>ಆಡಳಿತದಲ್ಲಿ ಎಲ್ಲಾ ವರ್ಗದವರಿಗೂ ಅವಕಾಶ ಸಿಗಲೆಂದು ಜಸ್ಟಿಸ್ ಲೆಸ್ಲಿ ಮಿಲ್ಲರ್ ಆಯೋಗ ರಚಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಗಳು?
>ಬ್ರಾಹ್ಮಣರು, ಆಂಗ್ಲೋ ಇಂಡಿಯನ್ನರನ್ನು ಹೊರತುಪಡಿಸಿ ಉಳಿದ ಎಲ್ಲಾ ಹಿಂದುಳಿದ ಸಮುದಾಯಗಳಿಗೆ ಶೇ.75ರಷ್ಟು ಮೀಸಲಾತಿ ನೀಡಲು ಆದೇಶಿಸಿದರು. ಹಾಗಾಗಿ ಇವರನ್ನು “ಮೀಸಲಾತಿಯ ಜನಕ” ‘ಸಾಮಾಜಿಕ ಕಾನೂನುಗಳ ಹರಿಕಾರ’ ಎನ್ನಲಾಗುತ್ತದೆ.
>ಮಿಲ್ಲರ್ ಆಯೋಗ ಜಾರಿಯಾದ ಪರಿಣಾಮ ಕಾಂತರಾಜೇ ಅರಸ್ ದಿವಾನರಾದರು. ಜಾತಿ ಆಧಾರಿತ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡವು.
>ಮುನಿಸಿಪಾಲಿಟಿ & ಗ್ರಾಮ ಪಂಚಾಯತ್ ರಚನೆಯಾದವು.
>ವಾಣಿ ವಿಲಾಸ ಸಾಗರ(1907) & KRS ನಿರ್ಮಾಣ(1911)
>ಶಿವನಸಮುದ್ರದ ಬಳಿ ಕಾವೇರಿ ನದಿಯಲ್ಲಿ ಜಲವಿದ್ಯುತ್ ಉತ್ಪಾದನೆ ಮಾಡಿದರು. ಪರಿಣಾಮ 1905 ಆ.3ರಂದು ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ದೀಪಗಳು ಬೆಳಗಿದವು. ಇದು ಏಷ್ಯಾ & ಭಾರತದ ಮೊದಲ ಜಲ ವಿದ್ಯುತ್ ಕೇಂದ್ರವಾಗಿತ್ತು.
>ಪ್ರಾಥಮಿಕ & ಮಾಧ್ಯಮಿಕ ವಿದ್ಯಾಭ್ಯಾಸ ಉಚಿತ, ಕಡ್ಡಾಯ ಎಂದು ಆದೇಶಿಸಿದರು.
>ಮೈಸೂರು ವಿವಿ(1916) ಸ್ಥಾಪನೆ.
>ಬೆಂಗಳೂರಿನ ಮಿಂಟೊ ಕಣ್ಣಾಸ್ಪತ್ರೆ ಸೇರಿ 270 ಉಚಿತ ಸರ್ಕಾರಿ ಆಸ್ಪತ್ರೆಗಳ ಆರಂಭ.
>ಅಸ್ಪೃಶ್ಯರಿಗಾಗಿಯೇ ಹುಸ್ಕೂರು ಹಾಗೂ ಟಿ.ನರಸೀಪುರದಲ್ಲಿ ಶಾಲೆಗಳ ಆರಂಭ.
>1902ರಲ್ಲಿ ಬೆಂಗಳೂರಿನಲ್ಲಿ ಪ್ರಥಮ ವಾಣಿಜ್ಯಶಾಲೆ ಪ್ರಾರಂಭ.
>ಬೆಂಗಳೂರಿನಲ್ಲಿ ವಿಜ್ಞಾನ ಸಂಸ್ಥೆ ತೆರೆಯಲು ಜೆ.ಎನ್.ಟಾಟಾ ಅವರಿಗೆ 371 ಎಕರೆ ಜಾಗ & 5 ಲಕ್ಷಕ್ಕೂ ಹೆಚ್ಚು ಹಣ ನೀಡಿದರು.
>ಮೈಸೂರು ಅರಮನೆಯನ್ನು 1910ರಲ್ಲಿ ಪೂರ್ಣಗೊಳಿಸಿದರು.
>ಸ್ತ್ರೀಯರಿಗೂ ಮತದಾನದ ಹಕ್ಕು ಕೊಟ್ಟರು.
>ನಾಲ್ವಡಿ ನೇತೃತ್ವದ ಮೈಸೂರು ರಾಜ್ಯವನ್ನು ಮಹಾತ್ಮ ಗಾಂಧಿ “ರಾಮ ರಾಜ್ಯ” ಎಂದು ಕರೆದರು. ನಾಲ್ವಡಿ ಅವರನ್ನು ರಾಜರ್ಷಿ ಎಂದೂ ಕರೆದರು.