ಮೈಸೂರು ಸಂಸ್ಥಾನ: ಒಡೆಯರ್ ಸಾಮ್ರಾಜ್ಯ

ಮೈಸೂರು ಸಂಸ್ಥಾನವು ರಾಜ್ಯವನ್ನು 1399ರಿಂದ 1950ರವರೆಗೆ ಆಡಳಿತ ನಡೆಸಿತು. ಇದರ ಆರಂಭದ ಅರಸ ಯದುರಾಯ, ಕೊನೆಯ ಅರಸ ಜಯಚಾಮರಾಜೇಂದ್ರ ಒಡೆಯರ್. ಈ ಸಂಸ್ಥಾನವು 1565ರವರೆಗೆ ವಿಜಯನಗರ ಸಾಮ್ರಾಜ್ಯದ ಸಾಮಂತವಾಗಿತ್ತು. 18ನೇ ಶತಮಾನದಲ್ಲಿ ಹೈದರ್ ಆಲಿ ಹಾಗೂ ಅವನ ಮಗ ಟಿಪ್ಪು ಸುಲ್ತಾನ್ ಒಡೆಯರರನ್ನು ಗದ್ದುಗೆಯಿಂದ ಇಳಿಸಿದ್ದರು. 1881ರಲ್ಲಿ ಮೈಸೂರು ಬ್ರಿಟೀಷರ ಮೂಲಕ ಮತ್ತೆ ಮೈಸೂರು ರಾಜರಿಗೆ ದಕ್ಕಿತು. ಈ ರಾಜ್ಯವನ್ನು ಒಟ್ಟು ಮಂದಿ 25 ದೊರೆಗಳು & 24 ದಿವಾನರು ಮುನ್ನಡೆಸಿದರು.

>ಮೈಸೂರು ಒಡೆಯರ ಮೊದಲ ದೊರೆ-ಯದುರಾಯ & ಕೃಷ್ಣರಾಯ

>ಲಾಂಛನ-ಗಂಡಭೇರುಂಡ.

>ಆರಂಭಿಕ ರಾಜಧಾನಿ- ಶ್ರೀರಂಗಪಟ್ಟಣ

>ಅಧಿದೇವತೆ-ಚಾಮುಂಡೇಶ್ವರಿ

̧>1610ರಲ್ಲಿ ಮೈಸೂರು ದಸರಾ ಆರಂಭಿಸಿದವರು-ರಾಜ ಒಡೆಯರ್

ಚಿಕ್ಕದೇವರಾಜ ಒಡೆಯರ್(ನವಕೋಟಿನಾರಾಯಣ/ಕರ್ನಾಟಕ ಚಕ್ರವರ್ತಿ/ಅಪ್ರತಿಮ ವೀರ/ತೆಂಕಣ ರಾಜ/ರಾಜಾ ಜಗದೇವ/ಮಹಾರಾಷ್ಟ್ರ ಭೂಪಾಲ ಜಗರಿಪು):

>9 ಕೋಟಿ ಚಿನ್ನದ ಪಗೋಡ ಸಂಗ್ರಹಿಸಿ “ನವಕೋಟಿ ನಾರಾಯಣ” ಎನಿಸಿಕೊಂಡರು.

>18 ಶಾಖೆಗಳ ಅಠಾರ ಕಚೇರಿ ತೆರೆದವರು-ಚಿಕ್ಕದೇವರಾಜ ಒಡೆಯರ್.

>ಔರಂಗಜೇಬನ ಆಸ್ಥಾನಕ್ಕೆ ರಾಯಭಾರಿ ಕಳುಹಿಸಿದ್ದರು.

>̧1687ರಲ್ಲಿ 3 ಲಕ್ಷ ಚಿನ್ನದ ವರಹ ನೀಡಿ ಮೊಘಲರಿಂದ ಬೆಂಗಳೂರನ್ನು ಖರೀದಿಸಿದ್ದರು.

>ಕೃತಿಗಳು: ಗೀತಗೋಪಾಲ & ಚಿಕ್ಕದೇವರಾಜ ಬಿನ್ನಪಂ

>ಇವರ ಮರಣದ ಬಳಿಕ ದಳವಾಯಿಗಳು ಅಧಿಕಾರಕ್ಕೆ ಬಂದರು.

Leave a Reply

Your email address will not be published. Required fields are marked *