ಮುಮ್ಮಡಿ ಕೃಷ್ಣರಾಜ ಒಡೆಯರ್:
ಮೈಸೂರನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿದ್ದ ಬ್ರಿಟೀಷರು, ಒಂದು ಭಾಗವನ್ನು ಒಡೆಯರ್ ಗೆ ನೀಡಿದರು.
ಐದು ವರ್ಷದ ಬಾಲಕ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ದಿವಾನರು-ಪೂರ್ಣಯ್ಯ.
ಶಿವಮೊಗ್ಗ ಜಿಲ್ಲೆಯ ಬಿದನೂರು ದಂಗೆ ಹತ್ತಿಕ್ಕುವಲ್ಲಿ ವಿಫಲ- ಬ್ರಿಟೀಷರಿಂದ ಮುಮ್ಮಡಿ ಪದಚ್ಯುತಿ.
ಬ್ರಿಟೀಷರು ಮೈಸೂರು ರಾಜ್ಯವನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ನೀಡಿದರು. ಮುಮ್ಮಡಿ 5 ವರ್ಷದ ಬಾಲಕನಾಗಿದ್ದ ಕಾರಣ ಪೂರ್ಣಯ್ಯ ಅವರನ್ನು ದಿವಾನರನ್ನಾಗಿ ನೇಮಿಸಲಾಯಿತು. ಬಳಿಕ ಶಿವಮೊಗ್ಗ ಜಿಲ್ಲೆಯ ಬಿದನೂರಿನ ದಂಗೆಯನ್ನು ಹತ್ತಿಕ್ಕುವಲ್ಲಿ ಮುಮ್ಮಡಿ ವಿಫಲರಾದ ಕಾರಣ ಬ್ರಿಟೀಷರು ಮೈಸೂರು ಅರಸ ಸ್ಥಾನದಿಂದ ಅವರನ್ನು ಕೆಳಗಿಳಿಸಿ, ಕಮಿಷನರ್ ಆಡಳಿತವನ್ನು ಜಾರಿಗೊಳಿಸಿದರು. ಪರಿಣಾಮ ಮಾರ್ಕ್ ಕಬ್ಬನ್ & ಲೂಯಿ ಬೆಂಥಾಮ್ ಬೌರಿಂಗ್ ಕಮಿಷನರುಗಳಾಗಿ ಆಡಳಿತ ನಡೆಸಿದರು.
ಮಾರ್ಕ್ ಕಬ್ಬನ್(1834-1861):
ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಿದ.
ಕನ್ನಡವನ್ನು ಆಡಳಿತ ಭಾಷೆಯನ್ನಾಗಿಸಿದ.
ಆಡಳಿತ ಘಟಕಗಳನ್ನು ಜಿಲ್ಲೆ & ತಾಲೂಕುಗಳನ್ನಾಗಿ ವಿಭಜಿಸಿದ.
1856ರಲ್ಲಿ ಬೆಂಗಳೂರು-ಜೋಲಾರಪೇಟೆ ನಡುವೆ ರೈಲ್ವೆ ಮಾರ್ಗ ಹಾಕಿಸಿದ. ಇದು ಮೈಸೂರು ರಾಜ್ಯದ ಮೊದಲ ರೈಲು ಮಾರ್ಗವಾಗಿತ್ತು.
1861ರಲ್ಲಿ ಕಮಿಷನರ್ ಹುದ್ದೆಗೆ ರಾಜೀನಾಮೆ ನೀಡಿದ.
ಲೂಯಿ ಬೆಂಥಾಮ್ ಬೌರಿಂಗ್(1862-1870):
ಶಿಕ್ಷಣ ಇಲಾಖೆ ತೆರೆದ. ನಿರ್ದೇಶಕರನ್ನು ಮುಖ್ಯಸ್ಥರನ್ನಾಗಿಸಿದ.
1870ರಲ್ಲಿ ಕಮಿಷನರ್ ಹುದ್ದೆಗೆ ರಾಜೀನಾಮೆ ನೀಡಿದ.
10ನೇ ಚಾಮರಾಜ ಒಡೆಯರ್:
>ಇವರಿಗೆ 1881ರಲ್ಲಿ ಬ್ರಿಟೀಷರು ಮೈಸೂರನ್ನು ಪುನಃ ವಹಿಸಿಕೊಟ್ಟರು. ಇದೇ ಪುನರ್ದಾನ.
>ಇವರ ದಿವಾನರು-ಸಿ.ರಂಗಾಚಾರ್ಲು & ಕೆ.ಶೇಷಾದ್ರಿ ಅಯ್ಯರ್.
>ಪ್ರಜಾ ಪ್ರತಿನಿಧಿ ಸಭೆ ಆರಂಭ-1881
>ಕಲ್ಕತ್ತಾಗೆ ತೆರಳಿದ್ದಾಗ ಅಲ್ಲಿಯೇ ನಿಧನರಾದರು.