ಮೆಡಿಕಲ್ ಎಮರ್ಜೆನ್ಸಿ ಘೋಷಿಸಲಿ.. ನನ್ನ ಪತ್ನಿ ಚುನಾವಣೆಗೆ ಸ್ಪರ್ಧಿಸಲ್ಲ: ಡಾ.ಮಂಜುನಾಥ್

ಬೆಂಗಳೂರು: ರಾಜ್ಯದ ಎಲ್ಲೆಡೆ ಡೆಂಗ್ಯೂ ಹರಡುತ್ತಿದ್ದು, ಸರ್ಕಾರ ತುರ್ತು ಚಿಕಿತ್ಸೆ ನೀಡಲು ಮೆಡಿಕಲ್ ಎಮರ್ಜೆನ್ಸಿ ಘೋಷಿಸಬೇಕು. ರೋಗ ತಡೆಗಟ್ಟಲು ಕೋವಿಡ್ ಗೆ ನೀಡಿದಂತೆ ಉಚಿತ ಚಿಕಿತ್ಸೆ ನೀಡುವುದು ಅತ್ಯಗತ್ಯವೆಂದು ಬೆಂಗಳೂರು ಗ್ರಾಮಾಂತರದ ಬಿಜೆಪಿ ಸಂಸದ ಡಾ.ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಅಲ್ಲಲ್ಲಿ ಕಾಮಗಾರಿಗಳು ಅರ್ಧಕ್ಕೇ ನಿಂತಿವೆ. ಪರಿಣಾಮ ಮಳೆಗಾಲವಾದ್ದರಿಂದ ನೀರು ನಿಲ್ಲುತ್ತಿದೆ. ಉಚಿತ ಘೋಷಣೆಗಳನ್ನು ಮಾಡುತ್ತಿರುವ ಸರ್ಕಾರ, ಕೊಳಗೇರಿಗಳಲ್ಲಿ ನೀರು ನಿಲ್ಲದಂತೆ ಮಾಡಲಿ & ಸೊಳ್ಳೆ ಪದರಗಳನ್ನು ಉಚಿತವಾಗಿ ನೀಡಲಿ. ಸೊಳ್ಳೆಗಳನ್ನು ನಿಯಂತ್ರಿಸಲು ಆಗದಿದ್ದರೆ ಮುಂದಿನ ದಿನಗಳಲ್ಲಿ ಚಿಕನ್ ಗುನ್ಯ, ಜೀಕಾ ವೈರಸ್ ರೋಗಗಳು ಹಬ್ಬುತ್ತವೆ ಎಂದು ಎಚ್ಚರಿಸಿದ್ದಾರೆ.

ಇನ್ನು ಕೆಲ ಮಾಧ್ಯಮಗಳು ನನ್ನ ಪತ್ನಿ ಅನುಸೂಯ ಅವರು ಚೆನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಂಬ ಸುದ್ದಿಯನ್ನು ಬಿತ್ತರಿಸಿವೆ. ಅದರಿಂದ ನಮಗೆ ಮತ್ತು ಕುಟುಂಬಕ್ಕೆ ಮುಜುಗರವಾಗಿದೆ. ಹಾಗಾಗಿ ಈ ವಿಚಾರವನ್ನು ಸ್ಪಷ್ಟಪಡಿಸುತ್ತಿದ್ದು, ನನ್ನ ಪತ್ನಿ ಯಾವುದೇ ಕಾರಣಕ್ಕೂ ಉಪ ಚುನಾವಣೆಗೆ ಸ್ಪರ್ಧಿಸಲ್ಲ ಎಂದಿದ್ದಾರೆ.

ಮಹಿಳಾ ಮತಗಳನ್ನು ಬುಟ್ಟಿಗೆಹಾಕಿಕೊಳ್ಳಲು ಅನುಸೂಯ ಅವರನ್ನೇ ಬಿಜೆಪಿ-ಜೆಡಿಎಸ್ ಪಕ್ಷಗಳು ಮೈತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಿವೆ ಎನ್ನಲಾಗುತ್ತಿತ್ತು. ಇನ್ನು ಈ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದ್ದು, ಮೈತ್ರಿ ಅಭ್ಯರ್ಥಿ ಸ್ಥಾನಕ್ಕೆ ಸಿ.ಪಿ.ಯೋಗೇಶ್ವರ್ ತವಳ್ ಹಾಕುತ್ತಿದ್ದಾರೆ ಎಂಬುದು ತಿಳಿದಿರುವ ವಿಚಾರವೇ.

Leave a Reply

Your email address will not be published. Required fields are marked *