ಕೋಲಾರ: ರಾಜ್ಯದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಣ ವರ್ಗಾವಣೆ ಪ್ರಕರಣವು ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಶಾಸಕ ಕೊಟ್ಟೂರು ಮಂಜುನಾಥ್, ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ, ಹಣ ಲಪಟಾಯಿಸಿದ್ದರೂ ಅಂಥವರಿಗೆ ಕುಷ್ಠ ರೋಗ ಬಂದು, ಹೃದಯಾಘಾತವಾಗಿ ಸಾಯಲೆಂದು ಶಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿ, ಹಗರಣದ ತನಿಖೆಯು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪಗಳು ವಿಪಕ್ಷ ನಾಯಕರ ಬಾಯಲ್ಲಿ ಕೇಳಿಬರುತ್ತಿವೆ. ಪ್ರಸ್ತುತದ ತನಿಖೆಯಿಂದ ನ್ಯಾಯ ಸಿಗುವುದು ಅನುಮಾನ ಎನ್ನುವುದಾದರೆ ಸಿಬಿಐ ತನಿಖೆಗೆ ಒಪ್ಪಿಸಲೆಂದು ಆಗ್ರಹಿಸಿದ್ದಾರೆ.
ಇನ್ನು ೧೮೭ ಕೋಟಿ ರೂ. ಹಣ ಲಪಟಾಯಿಸಿದ ಆರೋಪ ಇದಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಚಿವ ಬಿ.ನಾಗೇಂದ್ರ ಅವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದ್ದುದು ತಿಳಿದ ವಿಷಯವೇ.