ನವದೆಹಲಿ: ಈ ವರ್ಷದ ಮಳೆ ಪೈಕಿ ಈ ತಿಂಗಳು ನಿರೀಕ್ಷೆಗೂ ಮೀರಿದ ಅಂದರೆ ಸರಿ ಸುಮಾರು 106 ಸೆಲ್ಸಿಯಸ್ ನಷ್ಟು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾಹಿತಿ ನೀಡಿರುವ ಪ್ರಕಾರ, ದೇಶದ ವಾಯುವ್ಯ ರಾಜ್ಯಗಳಾದ ಹರಿಯಾಣ, ಉತ್ತರ ಪ್ರದೇಶ ಮತ್ತು ಪಾಜಾಬಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ. ಪರಿಣಾಮ ಅಲ್ಲಲ್ಲಿ ಭೂ ಕುಸಿತ, ಪ್ರವಾಹದ ಸನ್ನಿವೇಶಗಳು ಎದುರಾಗಬಹುದು. ನದಿಪಾತ್ರದ ಜನ ಎಚ್ಚರಿಕೆಯಿಂದ ಇರಬೇಕು.
ಇನ್ನು ಜಾರ್ಖಂಡ್, ಬಿಹಾರದ ಕೆಲ ಜಿಲ್ಲೆಗಳಲ್ಲಿ ಕಡಿಮೆ ಮಳೆಯಾಗಲಿದ್ದು, ಈಶಾನ್ಯ ಭಾರತದಲ್ಲೂ ಇದೇ ಪರಿಸ್ಥಿತಿ ಇರಲಿದೆ. ಆದರೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಅತ್ಯುತ್ತಮ ಮಳೆಯಾಗಲಿದ್ದು, ರೈತರಿಗೆ ಖಾರಿಫ್ ಬೆಲೆ ಬೆಳೆಯಲು ತುಂಬಾ ಅನುಕೂಲವಾಗಲಿದೆ. ದಕ್ಷಿಣ ರಾಜ್ಯಗಳಲ್ಲೂ ಪ್ರವಾಹ ಪರಿಸ್ಥಿತಿ ಏರ್ಪಡುವುದನ್ನು ತಳ್ಳಿಹಾಕುವಂತಿಲ್ಲ ಎಂದು ಎಚ್ಚರಿಸಿದೆ.