ಲಖನೌ: ಜನರ ಗಮನವನ್ನು ಬೇರೆಡೆ ಸೆಳೆಯಲು ಆಡಳಿತ ಮತ್ತು ವಿಪಕ್ಷಗಳೆರಡೂ ತಮ್ಮಲ್ಲಿನ ಆತಂಕರಿಕ ವೈಮನಸ್ಸನ್ನು ಮುಚ್ಚಿಕೊಳ್ಳಲು ಸಂವಿಧಾನದ ಪ್ರತಿ ತೋರಿಸುವ ನಾಟಕವಾಡುತ್ತಿವೆ ಎಂದು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾಳಿತ ಮತ್ತು ವಿಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಂತೆ. ನಿರುದ್ಯೋಗ, ಬಡತನ ಹಾಗೂ ಹಣದುಬ್ಬರವನ್ನು ತೊಡೆದು ಹಾಕಲು ಸಾಧ್ಯವಾಗದೆ ಸಂವಿಧಾನದ ಪ್ರತಿ ತೋರಿಸಿಕೊಂಡು ಓಡಾಡುತ್ತಿದ್ದು, ಈ ವಿಚಾರದಲ್ಲಿ ಪೈಪೋಟಿಗೆ ಇಳಿದಿದ್ದಾರೆ. ಈ ಮುಖೇನ ಸಂವಿಧಾನವನ್ನು ಜಾತಿ ಆಧಾರದ ಮೇಲೆ ಮತ್ತು ಬಂಡವಾಳದ ಆಧಾರದ ಮೇಲೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವರಿಗೆ ಜನ ಕಷ್ಟ ಬಗೆಹರಿಸುವ ಸಂಯಮವಿಲ್ಲವೆಂದು ಕಿಡಿಕಾರಿದ್ದಾರೆ.
ನಿನ್ನೆ ಸಂಸತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂವಿಧಾನದ ಪ್ರತಿ ಪ್ರದರ್ಶಿಸಿದ್ದರು. ಈ ವಿಡಿಯೋ ಭಾರೀ ವೈರಲ್ ಆಗುವ ಜತೆಗೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.