1972ರಲ್ಲಿ 42ನೇ ತಿದ್ದುಪಡಿ ತಂದು 51(A) ವಿಧಿ ಸೇರಿಸುವ ಮುಖೇನ ಸಂವಿಧಾನಕ್ಕೆ ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಗಿದೆ. ಸದ್ಯ 11 ಮೂಲಭೂತ ಕರ್ತವ್ಯಗಳಿದ್ದು, ಇವುಗಳನ್ನು ರಷ್ಯಾ ಸಂವಿಧಾನದಿಂದ ಎರವಲು ಪಡೆಯಲಾಗಿದೆ.
1989ಕ್ಕೂ ಮುನ್ನ ಮತದಾನದ ಕನಿಷ್ಟ ವಯಸ್ಸು 21 ವರ್ಷ ಆಗಿತ್ತು. 1989ರಲ್ಲಿ ಸಂವಿಧಾನಕ್ಕೆ 61ನೇ ತಿದ್ದುಪಡಿ ಮಾಡಿ ಕನಿಷ್ಟ ವಯಸ್ಸನ್ನು 18 ವರ್ಷಗಳಿಗೆ ಇಳಿಸಲಾಯಿತು.
ಪಂಚಾಯತ್ ರಾಜ್ ಕಾಯ್ದೆ-2000, 73ನೇ ತಿದ್ದುಪಡಿ ಪ್ರಕಾರ “ಪ್ರತೀ ಪಂಚಾಯಿತಿ ಸದಸ್ಯರು ಕಡ್ಡಾಯವಾಗಿ ತಮ್ಮ ಮನೆಗಳಲ್ಲಿ ಶೌಚಾಲಯವನ್ನು ಹೊಂದಿರಬೇಕು. ಒಂದು ವೇಳೆ ಇಲ್ಲದಿದ್ದಲ್ಲಿ ಚುನಾಯಿತರಾದ 1 ವರ್ಷದೊಳಗೆ ಶೌಚಾಲಯ ನಿರ್ಮಿಸಿಕೊಳ್ಳಬೇಕು”.
1993ರ ಪಂಚಾಯತ್ ರಾಜ್ ಕಾಯಿದೆ ಪ್ರಕಾರ, ರಾಜ್ಯ ಚುನಾವಣಾ ಆಯೋಗವೇ ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ (ಜಿಲ್ಲಾ, ತಾಲ್ಲೂಕು & ಗ್ರಾಮ ಪಂಚಾಯಿತಿ)ಗಳಿಗೆ ಚುನಾವಣೆ ನಡೆಸುತ್ತದೆ.
2011ರಲ್ಲಿ ಕರ್ನಾಟಕ ನಗರ ಪಾಲಿಕೆಯ ಕಾಯ್ದೆಗೆ ತಿದ್ದುಪಡಿ ತಂದಿದೆ. ಈ ತಿದ್ದುಪಡಿ ಕಾಯ್ದೆಯು ಬೆಂಗಳೂರನ್ನೂ ಒಳಗೊಂಡಂತೆ ಕರ್ನಾಟಕದ 11 ಪಾಲಿಕೆಗಳಿಗೆ ಅನ್ವಯವಾಗುತ್ತದೆ. ಕಾಯ್ದೆಯು ಪಾಲಿಕೆಯ ಕಾರ್ಯ ಚಟುವಟಿಕೆಗಳಲ್ಲಿ ಸಮುದಾಯಗಳಿಗೆ ಭಾಗವಹಿಸುವ ಅವಕಾಶವನ್ನು ಒದಗಿಸಿದೆ. ಈ ಕಾಯ್ದೆಯ ಪ್ರಕಾರ ಪ್ರತಿ ಪಾಲಿಕೆಯು ಕ್ಷೇತ್ರ/ಪ್ರದೇಶ ಸಭೆ & ವಲಯ ಸಮಿತಿ(ward committee)ಗಳೆಂಬ 2 ಹೆಚ್ಚುವರಿ ಮಂಡಳಿಗಳನ್ನು ಹೊಂದಿರುತ್ತದೆ. ಈ ಮಂಡಳಿಗಳು ಪಾಲಿಕೆಯ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತವೆ.