ದೆಹಲಿ: ಸರ್ಕಾರದಲ್ಲಿ ಸಚಿವರಾಗಿರುವ ಎಎಪಿ ನಾಯಕಿ ಅತಿಷಿ ಅವರನ್ನು ದೆಹಲಿಯ LNJP ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಈ ಕುರಿತು ಆಸ್ಪತ್ರೆಯ ನಿರ್ದೇಶಕ ಸುರೇಶ್ ಕುಮಾರ್ ಮಾಹಿತಿ ನೀಡಿದ್ದು, ಆರೋಗ್ಯ ಸಮಸ್ಯೆಯ ಮಾಹಿತಿ ಬಂದ ಕೂಡಲೇ ನಮ್ಮ ಸಿಬ್ಬಂದಿ ನಿನ್ನೆ ಸಂಜೆ ಐದು ಗಂಟೆಗೆ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿದ್ದರು. ಈ ವೇಳೆ ಅವರು ತುಂಬಾ ದುರ್ಬಲರಾಗಿ ಕಂಡು ಬಂದಿದ್ದಲ್ಲದೆ, ನಿದ್ರೆಯ ಮಂಪರಿನಲ್ಲೂ ಇದ್ದರು. ರಕ್ತದಲ್ಲಿ ಸಕ್ಕರೆ ಅಂಶ ತೀರಾ ಕಡಿಮೆ ಇದ್ದ ಕಾರಣ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದ್ದರು. ಆದರೆ ಅದಕ್ಕೆ ಸಚಿವರು ನಿರಾಕರಿಸಿದ್ದರು.
ತರುವಾಯ ಸಚಿವರನ್ನು ಬೆಳಗಿನಜಾವ 3.48ರ ಸುಮಾರಿಗೆ ಆಸ್ಪತ್ರೆಗೆ ಕರೆ ತರಲಾಯಿತು. ಆಗಲೂ ಮನೆಯಲ್ಲಿ ಕಂಡ ಸ್ಥಿತಿಯಲ್ಲೇ ಇದ್ದರು. ಕೂಡಲೇ ತುರ್ತು ಐಸಿಯುಗೆ ದಾಖಲು ಮಾಡಿ ಚಿಕಿತ್ಸೆ ನೀಡಿದೆವು. ಸದ್ಯ ಅವರ ದೇಹದಲ್ಲಿ ಸಕ್ಕರೆ ಅಂಶ ಮತ್ತು ಸೋಡಿಯಂ ಕೊರತೆ ಕಂಡುಬಂದಿದೆಯಾದರೂ ಆರೋಗ್ಯ ಸ್ಥಿರವಾಗಿದೆ ಎಂದು ಮಾಹಿತಿ ನೀಡಿದ್ದಾರೆ.