ಬೆಂಗಳೂರು: ನಾನು ಸೆಕ್ಸ್ ಸಿಡಿಯ ಸ್ವಾಮೀಜಿಗೆ ಒಂದು ವಾರ ಸಮಯ ಕೊಡುತ್ತೇನೆ. ಅವರೇ ಖುದ್ದು ಒಪ್ಪಿಕೊಳ್ಳಲಿ. ಇಲ್ಲವಾದರೆ ಮುಂದಿನ ಕ್ರಮವನ್ನು ನಾನೇ ಜರುಗಿಸುತ್ತೇನೆ ಎಂದು ಖ್ಯಾತ ವಕೀಲ ಜಗದೀಶ್ ಮಹಾದೇವ್ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಭಾರೀ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ, ಸ್ವಾಮೀಜಿ ಕರ್ನಾಟಕದವರೇ ಆಗಿದ್ದು, ಉತ್ತರ ಪ್ರದೇಶದಲ್ಲೂ ಮಠ ಕಟ್ಟಿದ್ದಾರೆ. ಅವರ ಒಟ್ಟು ಆಸ್ತಿ 70,000 ಕೋಟಿ ರೂ. ಮೌಲ್ಯದ್ದು. ಉತ್ತರ ಪ್ರದೇಶದಲ್ಲೇ ರಾಸಲೀಲೆ ನಡೆದಿದ್ದು, ಸ್ವಾಮೀಜಿಯ ಶಿಷ್ಯನೇ ವಿಡಿಯೋ ಚಿತ್ರೀಕರಿಸಿದ್ದಾನೆ. ಆತನೇ ಚಿತ್ರೀಕರಣ ಮಾಡಿದ್ದಾನೆ ಎಂದು ತಿಳಿದ ಸ್ವಾಮೀಜಿ, ತಮ್ಮ ಪವರ್ ಬಳಸಿ ಆತನನ್ನು ಗುಂಡಿಕ್ಕಿ ಕೊಲ್ಲಿಸಲು ಯತ್ನಿಸಿದ್ದರು. ಆದ ಕಾರಣ ಆತ ಊರನ್ನೇ ತೊರೆದು ಬೇರೆಲ್ಲಿಗೋ ಓಡಿ ಹೋಗಿದ್ದಾನೆ.
ಈ ವಿಡಿಯೋವನ್ನು ಇಟ್ಟುಕೊಂಡು ದೆಹಲಿ ಮತ್ತು ಗುಜರಾತ್ ರಾಜಕಾರಣಿಗಳು ಆಟವಾಡಿದರು. ಆ ನಂತರ ಕರ್ನಾಟಕದ ರಾಜಕಾರಣಿಗಳಿಗೂ ಸಿಕ್ಕಿ ಸ್ವಾಮೀಜಿಯನ್ನು ಅವರದ್ದೇ ಸಮುದಾಯದ ನಾಯಕರೂ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾರೆ. ಈ ವಿಡಿಯೋ 2 ವರ್ಷಗಳ ಹಿಂದೆಯೇ ಚಿತ್ರೀಕರಣಗೊಂಡಿದ್ದು, ಕೆಲ ಖ್ಯಾತ ಲಾಯರ್ ಗಳ ಬಳಿಯೂ Sex CD ಇದೆ. ಇತ್ತೀಚೆಗೆ ಖ್ಯಾತ ಸುದ್ದಿ ವಾಹಿನಿಯೊಂದರ ಮಾಲೀಕರೂ ಕೂಡ ಸಿಡಿ ಹಿಡಿದು ಸ್ವಾಮೀಜಿ ಬಳಿ ತೆರಳಿ ಬ್ಲಾಕ್ ಮೇಲ್ ಮಾಡಿ 10 ಕೋಟಿ ರೂ. ಪಡೆದುಕೊಂಡು ಬಂದಿದ್ದಾರೆಂದು ಜಗದೀಶ್ ಆರೋಪಿಸಿದ್ದಾರೆ.