ಬೆಂಗಳೂರು: ಕೆಎಸ್‌ಆರ್‌ಟಿಸಿ ಸಂಸ್ಥೆಯು ಖಾಲಿ ಇರುವ 13,000 ಚಾಲಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಏಳನೇ ತರಗತಿ ಪಾಸಾದ ಹಾಗೂ ಹೆವಿ ಮೋಟಾರು ವಾಹನದ ಚಾಲನಾ ಪರವಾನಗಿ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ.
ಚಾಮರಾಜನಗರದ ಜಿಲ್ಲಾ, ರಾಮನಗರ ಹಾಗೂ ಆನೇಕಲ್ ತಾಲೂಕು ಡಿಪೋಗಳಲ್ಲಿ ಈ ಹುದ್ದೆಗಳು ಖಾಲಿ ಇವೆ. ಬಸ್ ಡಿಪೋಗಳೇ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಿವೆ.
7ನೇ ತರಗತಿ ಉತ್ತೀರ್ಣರಾಗಿದ್ದು, ಹೆವಿ ಮೋಟಾರ್ ವಾಹನ ಚಾಲಕರಾಗಿ 2 ವರ್ಷಗಳ ಅನುಭವ ಹೊಂದಿರಬೇಕು. ಇದರ ಜತೆಗೆ ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದಿರುವ ಸರಕು ವಾಹನ ಬ್ಯಾಡ್ಜ್ ಹೊಂದಿರುವುದೂ ಕಡ್ಡಾಯ. ಆಯ್ಕೆಯಾದವರಿಗೆ 23,000 ರೂ. ಮಾಸಿಕ ವೇತನ ಹಾಗೂ ಇಎಸ್‌ಐ, ಇಪಿಎಫ್ ಸೌಲಭ್ಯವಿರಲಿದೆ.
ಹೊರಗುತ್ತಿಗೆ ಆಧಾರದ ನೇಮಕಾತಿ ಆಗಿರುವುದರಿಂದ ಹುದ್ದೆಗಳ ಮೇಲೆ ಅಭ್ಯರ್ಥಿಗಳು ಯಾವುದೇ ರೀತಿಯ ಹಕ್ಕು ಹೊಂದಿರುವುದಿಲ್ಲ. ಅಲ್ಲದೆ ಈ ಹುದ್ದೆಗಳಿಗೆ ಖಾಯಂ ನೇಮಕಾತಿ ನಡೆದಲ್ಲಿ ಆಗ ಇವರನ್ನು ತೆರವು ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಅಭ್ಯರ್ಥಿಗಳಿಗೆ ತರಬೇತಿ ನೀಡಿ ಪರೀಕ್ಷೆ ನಡೆಸಲಾಗುತ್ತದೆ. ತರುವಾಯ ಸಂದರ್ಶನ ನಡೆಸಿ, ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ.
ಹೆಚ್ಚಿನ ವಿವರಕ್ಕಾಗಿ ಈ ಸಂಖ್ಯೆಗಳಿಗೆ ಕರೆ ಮಾಡಬಹುದು.
ಚಾಮರಾಜನಗರ ಜಿಲ್ಲೆ ಕೆಎಸ್‌ಆರ್‌ಟಿಸಿ ಡಿಪೋ ದೂರವಾಣಿ: 8050980889, 8618876846,
ರಾಮನಗರ & ಆನೇಕಲ್ ತಾಲೂಕು KSRTC ಡಿಪೋ ದೂರವಾಣಿ: 8050980889, 8618876846.