Divorce ಕಾನೂನು.. ಇಲ್ಲಿದೆ ಸಂಪೂರ್ಣ ಮಾಹಿತಿ!

✅ 1. ವಿಚ್ಛೇದನಕ್ಕೆ ಮಾನ್ಯವಾದ ಕಾರಣಗಳು:

ವಿವಿಧ ವಿವಾಹ ಕಾನೂನುಗಳ (ಹಿಂದೂ ವಿವಾಹ ಕಾಯ್ದೆ, ಸ್ಪೆಷಲ್ ಮ್ಯಾರೇಜ್ ಆ್ಯಕ್ಟ್, ಮುಸ್ಲಿಂ ಕಾನೂನು, ಕ್ರೈಸ್ತ ಕಾನೂನು) ಪ್ರಕಾರ, ಈ ಕೆಳಗಿನ ಕಾನೂನುಬದ್ಧ ಕಾರಣಗಳ ಆಧಾರದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಬಹುದು:

  • ಕ್ರೂರತೆ (ಮಾನಸಿಕ ಅಥವಾ ಶಾರೀರಿಕ)
  • ವ್ಯಭಿಚಾರ (ಅನುಚಿತ ಲೈಂಗಿಕ ಸಂಬಂಧ)
  • ಪರಿತ್ಯಾಗ (ಕನಿಷ್ಠ 2 ವರ್ಷಗಳಿಗಿಂತ ಹೆಚ್ಚು ದಿನ ನಿಮ್ಮನ್ನು ತೊರೆದು ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ)
  • ಮಾನಸಿಕ ಅಸ್ವಸ್ಥತೆ
  • ಧರ್ಮ ಬದಲಿಸಿದ್ದರೆ
  • ಲೈಂಗಿಕ ರೋಗಗಳು ದೃಢಪಟ್ಟಿದ್ದರೆ
  • ಸಂಸಾರ ತ್ಯಜಿಸಿ, ವೈರಾಗಿಯಾಗಿದ್ದರೆ
  • 7 ವರ್ಷಗಳಿಗೂ ಹೆಚ್ಚು ಕಾಲ ಬದುಕಿರುವ ಬಗ್ಗೆ ಸುದ್ದಿ ಇಲ್ಲದಿದ್ದರೆ
  • ಪರಸ್ಪರ ಒಪ್ಪಿಗೆ ಮೇರೆಗೆ

✅ 2. ವಿಚ್ಛೇದನದ ಪ್ರಕಾರಗಳು:

a) ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ:

  • ಪತಿ–ಪತ್ನಿ ಇಬ್ಬರೂ ವಿಚ್ಛೇದನಕ್ಕೆ ಒಪ್ಪಿಗೆ ನೀಡಿರಬೇಕು.
  • ಕನಿಷ್ಠ 1 ವರ್ಷವಾದರೂ ಪ್ರತ್ಯೇಕವಾಗಿ ವಾಸವಿರಬೇಕು
  • ಜೀವನಾಂಶ, ಮಕ್ಕಳ ಪಾಲನೆ ಮತ್ತು ಆಸ್ತಿ ವಿಚಾರಗಳಿಗೆ ಇಬ್ಬರೂ ಒಪ್ಪಿಗೆ ಸೂಚಿಸಿರಬೇಕು.

b) ವಿರೋಧಾತ್ಮಕ ವಿಚ್ಛೇದನ:

  • ಪತಿ ಪತ್ನಿಯ ವಿರುದ್ಧ ಅಥವಾ ಪತ್ನಿ ಪತಿಯ ವಿರುದ್ಧ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ. 
  • ಇಬ್ಬರ ಹೇಳಿಕೆಗಳನ್ನೂ ಆಲಿಸುವ ನ್ಯಾಯಾಲಯ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.
  • ಸಾಕ್ಷ್ಯಗಳು ಅಗತ್ಯವಾಗಿ ಬೇಕಾಗುವ ಕಾರಣ ಈ ಪ್ರಕ್ರಿಯೆಯು ಸ್ವಲ್ಪ ಸುದೀರ್ಘವಾಗಿರಲಿದೆ.

✅ 3. ಕಡ್ಡಾಯ ಕುಲಿರಿಸುವ ಅವಧಿ (Cooling-Off Period)

  • ಪರಸ್ಪರ ಒಪ್ಪಿಗೆ ವಿಚ್ಛೇದನಕ್ಕೆ ನ್ಯಾಯಾಲಯವು ಸಾಮಾನ್ಯವಾಗಿ 6 ತಿಂಗಳ ಕುಲಿರಿಸುವ ಅವಧಿ(Cooling-off period) ನೀಡುತ್ತದೆ.
  • ಪುನಃ ಒಂದಾಗಲು ಅವಕಾಶ ನೀಡುವ ಅವಧಿ ಇದಾಗಿದೆ.

✅ 4. ವಿಚ್ಛೇದನ ಅರ್ಜಿ ಸಲ್ಲಿಕೆ:

ವಿಚ್ಛೇದನ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಬೇಕು:

  • ದಂಪತಿ ಕೊನೆಯದಾಗಿ ಜೊತೆಯಾಗಿ ವಾಸವಿದ್ದ ಸ್ಥಳ ಅಥವಾ
  • ಪ್ರತಿವಾದಿ (Respondent) ವಾಸಿಸುತ್ತಿರುವ ಸ್ಥಳದ ವ್ಯಾಪ್ತಿಯಲ್ಲಿರುವ ನ್ಯಾಯಾಲಯದಲ್ಲಿ

ಅರ್ಜಿಗೆ ಬೇಕಾಗುವ ದಾಖಲೆಗಳು:

  • ವಿವಾಹ ನೋಂದಣಿ ಪ್ರಮಾಣಪತ್ರ
  • ಗುರುತಿನ/ವಿಳಾಸ ಪುರಾವೆಗಳು
  • ಆದಾಯ/ಆಸ್ತಿ ವಿವರಗಳು
  • ಪ್ರತ್ಯೇಕ ವಾಸದ ಪುರಾವೆ (ಇದ್ದರೆ)
  • ಮಗು ಪಾಲನೆ/ಆರ್ಥಿಕ ಪೋಷಣೆ ಕುರಿತ ಒಪ್ಪಂದ ಪತ್ರ(ಪರಸ್ಪರ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರೆ)

✅ 5. ಸಮಾಲೋಚನೆ & ಮಧ್ಯಸ್ಥಿಕೆ:

  • ವಿಚ್ಛೇದನ ನೀಡುವ ಮೊದಲು ನ್ಯಾಯಾಲಯವು ಮಧ್ಯಸ್ಥಿಕೆ ವಹಿಸಿ ದಂಪತಿಯನ್ನು ಸಮಾಲೋಚನೆಗೆ ಕಳುಹಿಸಬಹುದು.
  • ಈ ಪ್ರಕ್ರಿಯೆಯು ಇಬ್ಬರೂ ನ್ಯಾಯಾಲಯಕ್ಕೆ ತಿಳಿಸಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ಖಚಿತಪಡಿಸುತ್ತದೆ.

✅ 6. ಮಕ್ಕಳ ಪಾಲನೆ ನಿಯಮಗಳು:

  • ಮಗುವಿನ ಹಿತಾಸಕ್ತಿ ಮತ್ತು ಕಲ್ಯಾಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ
  • ತಂದೆ-ತಾಯಿ ಇಬ್ಬರಲ್ಲಿ ಯಾರಾದರೂ ಮಕ್ಕಳನ್ನು ಪೋಷಿಸುವ ಹಕ್ಕನ್ನು ಪಡೆಯಬಹುದು. ಆದರೆ ಪೋಷಣೆಯ ಹಕ್ಕಿಲ್ಲದವರಿಗೆ ಮಕ್ಕಳನ್ನು ಯಾವಾಗ ಬೇಕಾದರೂ ಭೇಟಿ ಮಾಡುವ ಹಕ್ಕನ್ನು ನೀಡಲಾಗುತ್ತದೆ.

✅ 7. ಪೋಷಣೆ/ಆರ್ಥಿಕ ಸಹಾಯ:

  • ಪತಿ ಅಥವಾ ಪತ್ನಿಯವರೊಬ್ಬರು (ಸಾಮಾನ್ಯವಾಗಿ ಪತ್ನಿ) ಪೋಷಣೆಗಾಗಿ ಅರ್ಜಿ ಸಲ್ಲಿಸಬಹುದು
  • ಆದಾಯ, ಆಸ್ತಿ, ಬದುಕಿನ ಮಟ್ಟ ವನ್ನು ಪರಿಗಣಿಸಿ ನ್ಯಾಯಾಲಯವು ಪೋಷಣೆ ಬಗ್ಗೆ ನಿರ್ಧರಿಸುತ್ತದೆ

✅ 8. ಆಸ್ತಿ ಹಂಚಿಕೆ:

  • ಆಸ್ತಿಯನ್ನು ಇಂತಿಷ್ಟೇ ಹಂಚಬೇಕೆಂಬ ನಿಯಮವೇನೂ ಇಲ್ಲ. ಆದರೆ ದಂಪತಿಗಳೇ ಒಪ್ಪಿಗೆ ಅನುಸಾರ ಹಂಚಿಕೊಳ್ಳಬಹುದು. ಇಲ್ಲವೇ ಇಬ್ಬರ ನಡುವೆ ಅಸಮಾಧಾನವಿದ್ದಲ್ಲಿ ಈ ಬಗ್ಗೆ ನ್ಯಾಯಾಲಯವೇ ಅಂತಿಮ ತೀರ್ಮಾನವನ್ನು ಕೈಗೊಳ್ಳಬಹುದು.
  • ಜೀವನಾಶ ಪಡೆಯಲು ಬಯಸುವ ಪತಿ ಅಥವಾ ಪತ್ನಿಗೆ ಆಸ್ತಿ ಹಂಚಿಕೆ ಜೊತೆಗೆ ಸಾಲವನ್ನು ವಿಭಜಿಸಲಾಗುತ್ತದೆ ಎಂಬುದು ಗಮನಾರ್ಹ.

✅ 9. ಮೇಲ್ಮನವಿ ಹಕ್ಕುಗಳು

  • ವಿಚ್ಛೇದನ ತೀರ್ಪು ಹೊರಬಿದ್ದ 90 ದಿನಗಳ ಒಳಗೆ ಇಬ್ಬರಲ್ಲಿ ಯಾರಾದರೂ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದು. 
  • ಮೇಲ್ಮನವಿಯ ಮುಚ್ಚಳಿಕೆಯನ್ನು ತೀರ್ಪಿತ್ತ ನ್ಯಾಯಾಲಯಕ್ಕೆ ಸಲ್ಲಿಸಬೇಕು.

Leave a Reply

Your email address will not be published. Required fields are marked *