ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ಹಾಲು ಉತ್ಪಾದಕ ಸಂಸ್ಥೆ ಕೆಎಂಎಫ್ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಹೌದು, ಪ್ರತೀ ಲೀಟರ್ ಹಾಲಿನ ದರವನ್ನು 2 ರೂ. ಏರಿಕೆ ಮಾಡಿ ಸಂಸ್ಥೆ ಆದೇಶಿಸಿದೆ. ಈ ಪರಿಷ್ಕೃತ ದರವು ರಾಜ್ಯಾದ್ಯಂತ ನಾಳೆಯಿಂದಲೇ ಜಾರಿಗೆ ಬರಲಿದೆ.
ಕೆಎಂಎಫ್ ಆದೇಶದ ಪ್ರಕಾರ, 50ml ಹಾಲನ್ನೂ ಹೆಚ್ಚುವರಿಯಾಗಿ ಪಾಕೆಟ್ ಗೆ ಸೇರಿಸಲಾಗುತ್ತಿದ್ದು, ಇದಕ್ಕೆ ತಕ್ಕಂತೆ 2 ರೂ. ಹೆಚ್ಚಿಸಲಾಗಿದೆ. ಪರಿಣಾಮ ನಾಳೆಯಿಂದ 1000ml ಹಾಗೂ 500ml ಹಾಲಿನ ದರ 44 & 24 ರೂ. ಆಗಿರಲಿದೆ. ಉಳಿದಂತೆ ಮೊಸರೂ ಸೇರಿದಂತೆ ಯಾವುದೇ ಉತ್ಪನ್ನದ ದರವನ್ನೂ ಹೆಚ್ಚಿಸಿಲ್ಲವೆಂದು ಸಂಸ್ಥೆಯ ಅಧ್ಯಕ್ಷ ಭೀಮಾನಾಯ್ಕ್ ಸ್ಪಷ್ಟಪಡಿಸಿದ್ದಾರೆ.
ಸಂಸ್ಥೆಯು ಗ್ರಾಹಕರ ಮೇಲೆ ಬರೆ ಎಳೆಯುತ್ತಿದೆಯಾದರೂ ಸಂಗ್ರಹವಾಗುವ ಹಣಕ್ಕೆ ತಕ್ಕಂತೆ ರೈತರಿಗೆ ಸರಿಯಾದ ಲಾಭ ನೀಡುತ್ತಿಲ್ಲ ಎಂಬುದು ಜನರ ಅಭಿಪ್ರಾಯ.