ಕರ್ನಾಟಕ ಇತಿಹಾಸ: ಮೌರ್ಯರು..

ಚಂದ್ರಗುಪ್ತ ಮೌರ್ಯನು ತನ್ನ ಕೊನೆಯ ದಿನಗಳನ್ನು ಶ್ರವಣಬೆಳಗೊಳದಲ್ಲಿ ಕಳೆದ. ಕರ್ನಾಟಕದ ಚಂದ್ರಗಿರಿಯಲ್ಲಿ ಚಂದ್ರಗುಪ್ತ ಬಸದಿಯನ್ನು ನಿರ್ಮಿಸಿ, ಸಲ್ಲೇಖನ ಆಚರಿಸಿ ಶ್ರವಣಬೆಳಗೊಳದಲ್ಲೇ ಪ್ರಾಣತ್ಯಾಗ ಮಾಡಿದನು.
ಓರಿಯೆಂಟಲ್ ರಿಸರ್ಚ್ ಸಂಸ್ಥೆ ಇರುವ ಸ್ಥಳ-ಮೈಸೂರು
ಕೌಟಿಲ್ಯನು ಸಂಸ್ಕೃತದಲ್ಲಿ ಬರೆದಿದ್ದ ಅರ್ಥಶಾಸ್ತ್ರವನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿದ ಕನ್ನಡಿಗ: ಶಾಮಾಶಾಸ್ತ್ರಿ
ಕೌಟಿಲ್ಯನ ಅರ್ಥಶಾಸ್ತ್ರದ 7 ಅಂಗಗಳ ಪೈಕಿ 5ನೆಯದು: ಕೋಶ(ಖಜಾನೆ)


ದೇವನಾಂಪ್ರಿಯ & ಪ್ರಿಯದರ್ಶಿನಿ: ಅಶೋಕ
ಕಳಿಂಗದ ದಿಗ್ವಿಜಯ & ಪರಿಣಾಮ ವಿವರಿಸುವುದು: 13ನೇ ಶಿಲಾಶಾಸನ
ಅಶೋಕನು ಧರ್ಮ ವಿಜಯ ನೀತಿಯನ್ನು ಅನುಸರಿಸಿದ.
ಅಶೋಕನ ಸಾಮ್ರಾಜ್ಯವು ದಕ್ಷಿಣದಲ್ಲಿ ಕರ್ನಾಟಕದಲ್ಲಿನ ಸುವರ್ಣಗಿರಿವರೆಗೆ ಹಬ್ಬಿತ್ತು.
ಭಾಷೆಗಳು: ಪ್ರಾಕೃತ, ಪಾಳಿ, ಗ್ರೀಕ್; ಲಿಪಿಗಳು: ಖರೋಷ್ಠಿ, ಬ್ರಾಹ್ಮಿ
1831ರಲ್ಲಿ ಬ್ರಾಹ್ಮಿ ಲಿಪಿಯನ್ನು ಸಂಶೋಧಿಸಿ ಬೆಳಕಿಗೆ ತಂದವನು-ಜೇಮ್ಸ್ ಪ್ರಿನ್ಸೆಪ್
ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರೆತಿರುವ ಸ್ಥಳ: ಮಸ್ಕಿ(ದೇವಾನಾಂಪ್ರಿಯ ಅಶೋಕಸ), ಕೊಪ್ಪಳದ ಪಾಲ್ಕಿಗುಂಡ, ಗವಿಮಠ, ಚಿತ್ರದುರ್ಗದ ಬ್ರಹ್ಮಗಿರಿ, ಸಿದ್ಧಾಪುರ, ಜಟಿಂಗ ರಾಮೇಶ್ವರ, ಬಳ್ಳಾರಿಯ ನಿಟ್ಟೂರು, ಉದಯಗೊಳ್ಳಂ, ಕಲಬುರಗಿಯ ಸನ್ನತಿ
ಪಾಟಲೀಪುತ್ರದಲ್ಲಿ ಮೂರನೇ ಬೌದ್ಧ ಸಮ್ಮೇಳನ ಸಂಘಟಿಸಿದವನು-ಅಶೋಕ
ಅಶೋಕನ ಗುರಿ: ಸೇವೆ & ತ್ಯಾಗ
ಏಕರೂಪದ ಆಡಳಿತ ವ್ಯವಸ್ಥೆ ಸ್ಥಾಪಿಸಿದ ಮೊದಲಿಗರು: ಮೌರ್ಯರು
ಮೌರ್ಯರ ಮಂತ್ರಿ ಪರಿಷತ್ತಿನಲ್ಲಿದ್ದ ಕೇಂದ್ರದ ವಿಷಯಗಳು: 30
ಮೌರ್ಯ ಸಾಮ್ರಾಜ್ಯದಲ್ಲಿ ನ್ಯಾಯ ನಿರ್ಣಯದ ಜವಾಬ್ದಾರಿ ಹೊತ್ತಿದ್ದವರು: ಗ್ರಾಮ ಸಮಿತಿಗಳು & ಅವುಗಳ ಮುಖ್ಯಸ್ಥರು(ಶಿಕ್ಷೆಗಳು: ತಲೆ & ಕೈಕಾಲು ಕತ್ತರಿಸುವುದು)
ಮೌರ್ಯರ ಕಾಲದಲ್ಲಿ 1/6 ಭಾಗದಷ್ಟನ್ನು ಭೂಕಂದಾಯ(ಹಣ/ವಸ್ತು)ವಾಗಿ ನೀಡಲಾಗುತ್ತಿತ್ತು.
ವೃತ್ತಿ, ಮನೆ, ಹಸು, ಸಾಕುಪ್ರಾಣಿ & ಅರಣ್ಯದ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು.
ಮೌರ್ಯರ ಐದನೇ ಪ್ರಾಂತ್ಯದ ರಾಜಧಾನಿ-ಸುವರ್ಣಗಿರಿ
ಜಿಲ್ಲೆಯ ಮುಖ್ಯಸ್ಥ ಸ್ಥಾನಿಕ, ಹಳ್ಳಿಯ ಮುಖ್ಯಸ್ಥ ಗ್ರಾಮಿಕ(ಹತ್ತು ಹಳ್ಳಿಗಳ ಮುಖ್ಯಸ್ಥ ಗೋಪ)

Leave a Reply

Your email address will not be published. Required fields are marked *