ಬೆಂಗಳೂರು: ಬಾಂಬೆ ಮಿಠಾಯಿ, ಗೋಬಿ ಮಂಚೂರಿ ಹಾಗೂ ಕಬಾಬ್ ಗೆ ಬಳಸುವ ರಾಸಾಯನಿಕ ಬಣ್ಣವನ್ನು ಕರ್ನಾಟಕ ಸರ್ಕಾರ ಈಗಾಗಲೇ ಬ್ಯಾನ್ ಮಾಡಿದೆ. ಈ ನಡುವೆ ಪಾನಿಪುರಿ ಕೂಡ ರದ್ದಾಗಬಹುದು ಎಂಬ ಆತಂಕ ವ್ಯಾಪಾರಸ್ಥರು ಮತ್ತು ಪಾನಿಪುರಿ ಪ್ರಿಯರಿಗೆ ಎದುರಾಗಿದೆ.
ಹೌದು, ಬೆಂಗಳೂರಿನ 40ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ಭೇಟಿ ನೀಡಿದ್ದ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸ್ಯಾಂಪಲ್ಸ್ ಕಲೆಹಾಕಿ ಪರಿಶೀಲಿಸಿದ್ದಾರೆ. ಈ ವೇಳೆ ಸಾಸ್ ಮತ್ತು ಮೀಟಾ ಖಾರದಪುಡಿ ಸೇರಿದಂತೆ ಪಾನೀಪುರಿಗೆ ಸಂಬಂಧಿಸಿದ ಐದು ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಪದಾರ್ಥಗಳು ಪತ್ತೆಯಾಗಿವೆ.
ಈ ಹಿನ್ನೆಲೆಯಲ್ಲಿ ಪಾನೀಪುರಿಯನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗುತ್ತದೆ ಎಂದೇ ಹೇಳಲಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.