ಚಾಲನೆ ಮಾಡುವಾಗ ಚಾಲಕರ ಬಳಿ ಇರಬೇಕಾದ ದಾಖಲೆಗಳು:
1.ಚಾಲನಾ ಪರವಾನಗಿ(Driving License)
2.ನೋಂದಣಿ ಪ್ರಮಾಣಪತ್ರ(Registration Certificate)
3.ಎಮಿಷನ್ ಟೆಸ್ಟ್ ಪ್ರಮಾಣಪತ್ರ / ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ(Emission Test Certificate / Pollution Under Control Certificate)
4.ವಿಮಾ ಪ್ರಮಾಣಪತ್ರ(Insurance Certificate)
5.ಫಿಟ್ನೆಸ್ ಪ್ರಮಾಣಪತ್ರ ಹಾಗೂ ತೆರಿಗೆ ಪಾವತಿ ಪ್ರಮಾಣಪತ್ರ(ಟ್ರಾನ್ಸ್‌ಪೋರ್ಟ್ ವಾಹನಗಳಿಗೆ ಮಾತ್ರ)
ಈ ಎಲ್ಲಾ ದಾಖಲೆಗಳು ಮೂಲಪತ್ರದ ರೂಪದಲ್ಲಿ ಇರಬೇಕು. ಇಲ್ಲವೇ, ಡಿಜಿಲಾಕರ್(DigiLocker) ಅಥವಾ mParivahan ಅಪ್ಲಿಕೇಶನ್‌ನಲ್ಲಿ ತೋರಿಸಬಹುದು.
ಪರವಾನಗಿ ಇಲ್ಲದೆ ಚಾಲನೆ ಮಾಡಿದರೆ ಎಷ್ಟು ದಂಡ?
A.2/3 ಚಕ್ರದ ವಾಹನಗಳಿಗೆ 1000 ರೂ.
B.ಲಘು ಮೋಟಾರು ವಾಹನ(LMV)ಗಳಿಗೆ 2000 ರೂ.
C.ಇತರ ಎಲ್ಲಾ ವಾಹನಗಳಿಗೆ 5000 ರೂ. ದಂಡ ವಿಧಿಸಲಾಗುತ್ತದೆ.
ಸಂಚಾರಿ ನಿಯಮ ಉಲ್ಲಂಘಿಸಿದರೆ ಯಾರು ದಂಡ ವಸೂಲಿ ಮಾಡಬಹುದು?
ಪೊಲೀಸ್ ಉಪನಿರೀಕ್ಷಕ(ASI) ಹುದ್ದೆಯಲ್ಲಿರುವ ಅಥವಾ ಅದಕ್ಕಿಂತ ಮೇಲಿನ ಹುದ್ದೆಯಲ್ಲಿರುವ ಯಾವುದೇ ಸಂಚಾರಿ ಪೊಲೀಸ್ ಅಧಿಕಾರಿಯು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಸ್ಥಳದಲ್ಲಿಯೇ ದಂಡ ವಸೂಲಿ ಮಾಡಬಹುದಾಗಿದೆ. ಈ ಅಧಿಕಾರ ಪೇದೆ ಅಥವಾ ಮುಖ್ಯ ಪೇದೆಗಳಿಗಿಲ್ಲ ಎಂಬುದು ಗಮನಾರ್ಹ.
ಸಂಚಾರಿ ಪೊಲೀಸರು ನೋಟಿಸ್ ಕೊಟ್ಟಿದ್ದರೆ ದಂಡವನ್ನು ಎಲ್ಲಿ ಪಾವತಿಸಬೇಕು?
1.ಟ್ರಾಫಿಕ್ ಹೆಡ್ ಕ್ವಾರ್ಟರ್ಸ್, 5ನೇ ಮಹಡಿ, ಎನ್‌ಫೋರ್ಸ್ಮೆಂಟ್ ಆಟೋಮೇಷನ್ ಸೆಂಟರ್, ಇನ್‌ಫ್ಯಾಂಟ್ರಿ ರಸ್ತೆ, ಬೆಂಗಳೂರು – 560001
2.ಯಾವುದೇ ಟ್ರಾಫಿಕ್ ಪೊಲೀಸ್ ಠಾಣೆಗಳು
3.ದಂಡ ವಸೂಲಿ ಮಾಡಲು ಹಕ್ಕುಳ್ಳ ಯಾವುದೇ ಟ್ರಾಫಿಕ್ ಪೊಲೀಸ್ ಅಧಿಕಾರಿ
4.ಯಾವುದೇ ಬೆಂಗಳೂರು-ಒನ್ ಕೇಂದ್ರಗಳು
5.ಆನ್‌ಲೈನ್‌ನಲ್ಲಿ: https://btp.gov.in ಅಥವಾ https://karnatakaone.gov.inನಲ್ಲಿ ದಂಡ ಪಾವತಿಸಬಹುದು.
ಬೈ-ಲೇನ್ ಅಥವಾ ಇಂಟೀರಿಯರ್ ಪ್ರದೇಶ ಹೀಗೆ ಎಲ್ಲಿ ಚಲಿಸುವಾಗ ಸೀಟ್ ಬೆಲ್ಟ್ ಧರಿಸಬೇಕು?
>ಕಾರು ಚಾಲನೆ ಆರಂಭಿಸಿದೆ ಎಂದಾದರೆ ಕಾರಿನಲ್ಲಿ ಕುಳಿತಿರುವವರು ಕಡ್ಡಾಯವಾಗಿ ಸೀಟ್ ಬೆಲ್ಟ್ ಅನ್ನು ಧರಿಸಿರಲೇಬೇಕು.